ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ ದಾಳಿ:ಏಳು ಮಕ್ಕಳ ರಕ್ಷಣೆ

0
15

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದಲ್ಲಿ ಆಗಸ್ಟ್ ೨೭ರಂದು ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ದಾಳಿಯನ್ನು ಕೈಗೊಂಡು ಗಾಂಧಿ ನಗರ, ಕೆ.ಎಲ್.ಇ ರಸ್ತೆ, ಗ್ಯಾಂಗವಾಡಿ, ಖಡೆ ಬಜಾರ್ ಹಾಗೂ ಇತರ ಪ್ರದೇಶಗಲ್ಲಿ ಒಟ್ಟು ೦೭ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಯವರ ಸುಪರ್ದಿಗೆ ವಹಿಸಲಾಗಿದೆ.

ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರಗಳ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ಪೋಲಿಸ್ ಘಟಕ ಹಾಗೂ ಮಕ್ಕಳ ಸಹಾಯವಾಣಿ (೧೦೯೮) ಸಿಬ್ಬಂದಿಗಳನ್ನೊಳಗೊಂಡ “ಜಿಲ್ಲಾ ಬಾಲಕಾರ್ಮಿಕ ವಿಚಕ್ಷಣ ದಳ” ಜಂಟಿಯಾಗಿ ನಡೆಸಿದ ತಪಾಸಣೆಯಲ್ಲಿ ಈ ಮಕ್ಕಳನ್ನು ರಕ್ಷಿಸಲಾಗಿದೆ.

ಅಗಸ್ಟ ೨೭ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ೩ ತಂಡಗಳಾಗಿ ಏಕಕಾಲಕ್ಕೆ ಬಾಲಕಾರ್ಮಿಕ ದಾಳಿಯನ್ನು ಆರಂಬಿಸಿದ ತಂಡ ನಗರದ ವಿವಿಧ ಪ್ರದೇಶಗಳಲ್ಲಿ ವಿವಿಧ ಉದ್ದಿಮೆಗಳಲ್ಲಿ ದುಡಿಯುತ್ತಿದ್ದ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದೆ. ಕಾಯ್ದೆಯಡಿ ನೇಮಕಗೊಂಡ ನೀರಿಕ್ಷಕರು ಪರಿಶೀಲಿಸಿ ಕ್ರಮ ವಹಿಸುವರು.

ದಾಳಿಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತರಾದ ಡಿ.ಜಿ.ನಾಗೇಶ್, ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಉಪ ನಿರ್ದೇಶಕರಾದ ರವೀಂದ್ರ ರಾಥೋಡ, ಕಾರ್ಮಿಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಜೋಗೂರ, ಶ್ರಿÃಕಾಂತ ಪಾಟೀಲ, ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಎಪ್.ಬಿ.ನದಾಫ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಸಿಸ್ಟರ್ ಲೂರ್ದ ಮೇರಿ, ಹಿರಿಯ ಕಾರ್ಮಿಕ ನಿರೀಕ್ಷಕರುಗಳಾದ ಅನೀಲ ಬಗಟಿ, ಅಡಿವೆಪ್ಪ ಗಡದವರ, ಶ್ರಿÃಮತಿ ಡಿ.ಎಮ್.ವಿನುತಾ, ಯೋಜನಾ ನಿರ್ದೇಶಕಿ ಜ್ಯೊÃತಿ ಕಾಂತೆ, ಯೋಜನಾ ವ್ಯವಸ್ಥಾಪಕರಾದ ಉಮೇಶ್ವರ ಮರಗಾಲ,  ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಎಪ್ ಎಸ್ ಪಾಟೀಲ, ಕಂದಾಯ ನಿರೀಕ್ಷಕರುಗಳಾದ ಎಂ.ಎಂ. ದಾರವಾಡಕರ, ಪಿ.ಬಿ ಮೇತ್ರಿ, ವಿ.ಎ ಬುಡವಿ, ಶಿಕ್ಷಣ ಇಲಾಖೆಯ ಆರ್.ಜಿ ಚಳಗೇರಿ, ಮಕ್ಕಳ ಪೋಲಿಸ್ ಘಟಕದ ಮುತ್ನಾಳ, ಬಳಗಣ್ಣವರ, ಪಾಟೀಲ, ಮಕ್ಕಳ ಸಹಾಯವಾಣಿ (೧೦೯೮) ಯ ಎಸ್ ಎಸ್ ಹಿರೇಮಠ, ರಾಜು ಬೊಜೆಪ್ಪಗೋಳ, ಬಸವರಾಜ ನರ‍್ವಾಣಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

loading...