ಬಾಳುಮಾಮಾ ಕುರಿ ಮೇಯಿಸಲು ಭಕ್ತರ ದಂಡು

0
17

ಕನ್ನಡಮ್ಮ ಸುದ್ದಿ
ರಾಯಬಾಗ 28: ಸಂತ ಸದ್ಗುರು ಬಾಳುಮಾಮಾ ಕುರಿಗಳು ರಾಯಬಾಗ ಗ್ರಾಮೀಣದ ಚಿಂಚಲಿ ರಸ್ತೆಯ ಶೈಲೇಂದ್ರ ಪಾಟೀಲ ಅವರ ತೋಟಕ್ಕೆ ಆಗಮಿಸಿವೆ ವಿಷಯ ತಿಳಿದ ಸುತ್ತಮುತ್ತಲಿನ ಜನರು ಪ್ರತಿದಿನ ಬಂದು ತಾವು ಬೇಡಿಕೊಂಡವರ ಈಡೇರಿಕೆಗಾಗಿ ಸದ್ಗರು ಬಾಳುಮಾಮಾ ರವರ ಕುರಿಗಳನ್ನು ಮೇಯಿಸಿ ಹೋಗುತ್ತಿರುವುದು ಸರ್ವೆಸಾಮಾನ್ಯವಾಗಿದೆ.
ಸದ್ಗುರು ಬಾಳುಮಾಮಾ ಅವರ ಕುರಿಗಳ ಹಿಂಡಿನೊಂದಿಗೆ ಆಗಮಿಸಿರುವ ಸುರೇಶ ಸೋಮಪ್ಪ ಈರಣ್ಣನ್ನವರ ಮಾತನಾಡಿ, ಸದ್ಗುರು ಬಾಳುಮಾಮಾ ಅವರೊಬ್ಬರು ಪವಾಡಪುರುಷ ವ್ಯಕ್ತಿಯಾಗಿದ್ದರು ಸಾವಿರಾರು ಪವಾಡಗಳನ್ನು ಮಾಡಿ ಭಕ್ತರು ಬೇಡಿಕೊಂಡ ಪ್ರತಿಯೊಂದು ಬಯಕೆಯನ್ನು ಈಡೇರಿಸುತ್ತಲೆ ಬರುತ್ತಿದ್ದಾರೆ ಹೀಗಾಗಿ ಕುರಿಗಳನ್ನು ಮೇಯಿಸಿಲು ಪ್ರತಿನಿತ್ಯ ನೂರಾರು ಜನರು ಬಂದು ತಮ್ಮ ಬೇಡಿಕೆಗಳನ್ನು ಬಾಳುಮಾಮಾರ ಹತ್ತಿರ ಸಲ್ಲಿಸಿ ಕುರಿಗಳ ಸೇವೆ ಮಾಡಿ ಪಾವನರಾಗುತ್ತಿದ್ದಾರೆಂದು ಹೇಳಿದರು.
ಬಾಳುಮಾಮಾರವರ ಒಟ್ಟು 19 ಹಿಂಡುಗಳಲ್ಲಿ 57 ಸಾವಿರ ಕುರಿಗಳಿವೆ ಎಲ್ಲಾ ಭಕ್ತರ ಮೇಲೆಯೆ ನಡೆದಿದೆ ಪ್ರತಿ ಗುರುವಾರ ಮತ್ತು ರವಿವಾರದಂದು ಬೆಳೆಗ್ಗೆ, ರಾತ್ರಿ 8.45 ರ ಸುಮಾರಿಗೆ ವಿಶೇಷ ಪೂಜೆ ಸಲ್ಲುತ್ತದೆ. ಈ ಪೂಜೆಗೆ ಆಗಮಿಸಿ ಭಕ್ತರು ತಮ್ಮ ಬೇಡಿಕೆ ಬೇಡಿಕೊಂಡು ಹೊದಲ್ಲಿ ನೂರಕ್ಕೆ ನೂರರಷ್ಟು ಸದ್ಗುರು ಬಾಳುಮಾಮಾ ಭಕ್ತರ ಬೇಡಿಕೆ ಈಡೇರಿಸುತ್ತಾನೆಂದು ಹೇಳಿದರು.
ಹಾವೇರಿ ಜಿಲ್ಲೆಯ ಸಂಸಿ ಗ್ರಾಮ ಒಂದರಲ್ಲಿಯೇ ಮಕ್ಕಳಿಲ್ಲದ ಸುಮಾರು 40 ದಂಪತಿಗಳಿಗೆ ವಿಶೇಷ ಪೂಜೆಯೆಂದು ಉಡಿ ತುಂಬಲಾಯಿತು ಅದರಲ್ಲಿ 36 ದಂಪತಿಗಳಿಗೆ ಗಂಡುಮಕ್ಕಳು ಮತ್ತು ಎರಡು ದಂಪತಿಗಳಿಗೆ ಹೆಣ್ಣುಮಕ್ಕಳು ಜನಿಸಿವೆ ಎಂದು ಹೇಳಿದರು ಇದೆಲ್ಲಾ ಸಂತ ಸದ್ಗುರು ಬಾಳುಮಾಮಾರವರ ಪವಾಡವೆಂದು ಹೇಳಿದರು. ಸದ್ಗುರು ಬಾಳುಮಾಮಾರನ್ನು ನಂಬಿ ಬಂದ ಭಕ್ತರನ್ನು ಯಾವತ್ತು ಕೈ ಬಿಡುವುದಿಲ್ಲವೆಂದು ಹೇಳಿದರು.

ಈ ಸಂದರ್ಭದಲ್ಲಿ ಶೈಲೆಂದ್ರ ಪಾಟೀಲ, ರಾಜೇಂದ್ರ ಪಾಟೀಲ, ಬಾಪು ಕುಲಕರ್ಣಿ ಉಪಸ್ಥಿತರಿದ್ದರು.

..

loading...