ಬಾಳ ಬಂಡಿಯೇರಿದ ಅಂಧ ಜೋಡಿ

0
22

ಬೆಳಗಾವಿ 9- ಬಿದಿರಕುಂಡೆಯ ಮುತ್ತುರಾಜ ಮತ್ತು ಬಸವನಬಾಗೇವಾಡಿಯ ಸುನಂದಾ ಡೋಲೂರ ರವಿವಾರದ ಶುಭ ಮುಹೂರ್ತದಲ್ಲಿ ಬಾಳಬಂಡಿ ಏರಿ ವೈವಾಹಿಕ ಬದುಕಿಗೆ ಅಣಿಗೊಂಡರು. ಈ ಇಬ್ಬರು ಅಂಧರು. ಅಂಧತ್ವ ಮನುಷ್ಯನ ಜೀವನ ನಡಿಗೆಗೆ ತೊಡಕಾಗದು ಎನ್ನುವುದನ್ನು ಸಮಾಜಕ್ಕೆ ತಿಳಿಯಪಡಿಸಿದರು.

ರವಿವಾರ ಟಿಳಕವಾಡಿಯ ಕಲಾಮಂದಿರದಲ್ಲಿ ಸ್ಪೂರ್ತಿ  ಅಂಧ ಸೇವಾ ಸಂಸ್ಥೆ ತನ್ನ 12 ನೇ ವಾರ್ಷಿಕೋತ್ಸವದ ನಿಮಿತ್ತ ಏರ್ಪಡಿಸಿದ ಸಮಾರಂಭದಲ್ಲಿ ಅಂಧ ಜೋಡಿಗಳಿಗೆ ಕಂಕಣಭಾಗ್ಯ ಕಲ್ಪಿಸಿತು.

ಶ್ರೀಮತಿ ಉಷಾತಾಯಿ ಫೌಂಡೇಶನ್ ಅಧ್ಯಕ್ಷ ಅನೀಲ ಪೋತದಾರ ಮಾತನಾಡಿ, ಸ್ಪೂರ್ತಿ ಅಂಧ ಸೇವಾ ಸಂಘಟನೆ ಕಳೆದ 12 ವರ್ಷಗಳಿಂದ ಅಸಹಾಯಕ, ಅಂಗವಿಕಲ, ಅಂಧರಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತ ಬಂದಿದೆ. ತಾವು ಇಂಥವರ ನೆರವಿಗೆ ಬದ್ಧರಿದ್ದು, ಉಷಾತಾಯಿ ಫೌಂಡೇಶನ್ ಮೂಲಕ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಂಧರಿಗೆ ದೃಷ್ಟಿ ಕೊಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ದಾಂಪತ್ಯ ಬದುಕಿಗೆ ಕಾಲಿರಿಸಿದ ಅಂಧ ಜೋಡಿಗಳು ತಮ್ಮದೇ ಆದ ಬದುಕಿನ ಬಂಡಿಯೇರಿದ ಸಂಭ್ರಮದಲ್ಲಿದ್ದರು. ಸತಿ ಪತಿಗಳೊಂದಾಗಿ ಸಮಾಜಕ್ಕೆ ಒಪ್ಪುವ ರೀತಿಯಲ್ಲಿ ಸುಂದರ ಬದುಕು ಕಂಡುಕೊಳ್ಳಲಿ. ದಾಂಪತ್ಯ ಬದುಕು ಸಾರ್ಥಕಗೊಳ್ಳಲಿ ಎನ್ನುವ ಆಶೀರ್ವಾದದ ಹರಕೆ ಅಂಧ ಸತಿ ಪತಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿದ್ದವು.

ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಚ್.ಓಬಳಪ್ಪ, ಸ್ಪೂರ್ತಿ ಅಂಧ ಸಂಸ್ಥೆಯ ಅಧ್ಯಕ್ಷ ಪ್ರವೀಣ ಭಂಡಾರಿ, ರಾಜು ಚೌಡಪ್ಪಗೋಳ, ವೆಂಕಣ್ಣ ಕುಂಬಾರ, ಜಂಟಿ ಕಾರ್ಯದರ್ಶಿ ಸಂಗೀತಾ ಸುತಾರ, ಬಸವರಾಜ ಹರ್ಲಾಪುರ, ಟಿ.ಕೆ.ಪಾಟೀಲ, ವಿಜಯ ಮಹೇಂದ್ರಕರ ಮೊದಲಾದವರು ಹಾಜರಿದ್ದರು.

 

loading...

LEAVE A REPLY

Please enter your comment!
Please enter your name here