ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ: ಜಮೀರ್‌ಅಹ್ಮದ್‌

0
20

ಕನ್ನಡಮ್ಮ ಸುದ್ದಿ-ಹಾನಗಲ್ಲ: ದೇಶದಲ್ಲಿ ಮುಖ್ಯಮಂತ್ರಿಯಾದವರು ಜೈಲಿಗೆ ಹೋಗಿದ್ದು ನೋಡಿಲ್ಲ. ಯಡಿಯೂರಪ್ಪ ಜೈಲುಕಂಡ ಮಂತ್ರಿ, ಕೆಜೆಪಿ ಪಕ್ಷ ಕಟ್ಟಿ ಟಿಪ್ಪುವಿಗೆ ಜೈ ಎಂದರು. ಬಿಜೆಪಿಗೆ ಬಂದಮೇಲೆ ವಿರೋಧ ವ್ಯಕ್ತಪಡಿಸಿದ ಯಡಿಯೂರಪ್ಪ ಮಾತಿನಂತೆ ನಡೆದುಕೊಳ್ಳದ ಇಂತಹ ರಾಜಕಾರಣಿಗೆ ವಿಶ್ವಾಸ ಇಡುವ ಜನತೆಗೆ ಬೆನ್ನಲ್ಲೆ ಚೂರಿ ಹಾಕುವ ಪಕ್ಷ ಬಿಜೆಪಿ, ಜಾತಿ ವಿಷಬೀಜ ಬಿತ್ತಿ ದೇಶದ ಧರ್ಮಗಳನ್ನು ಒಡೆದಾಳುವ ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್‌.ಜಮೀರ್‌ಅಹ್ಮದ್‌ ಕಿಡಿಕಾರಿದರು..
ಪಟ್ಟಣದ ವಿಜಯನಗರದಲ್ಲಿನ ನೂರಾನಿ ಹಾಲ್‌ನಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವನಾಗಿ ಪ್ರಥಮ ಭಾರಿ ಜಿಲ್ಲೆಗೆ ಆಗಮಿಸಿದ್ದೇನೆ. ಜಿಲ್ಲೆಯಲ್ಲಿ ಹಿರೇಕೆರೂರನಲ್ಲಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ಶಾಸಕರಾಗಿದ್ದು, ಜಿಲ್ಲೆಯ ಉಸ್ತುವಾರಿ ನನ್ನ ಜವಾಬ್ದಾರಿ ಇರುವ ಕಾರಣ ಜಿಲ್ಲೆಯ ಇನ್ನೂಳಿದ ಬಿಜೆಪಿ ಕ್ಷೇತ್ರಗಳು ಕಾಂಗ್ರೆಸ್‌ ಪಕ್ಷದ ಕ್ಷೇತ್ರಗಳಿದ್ದಂತೆ. ಅವುಗಳಲ್ಲಿಯ ಪುರಸಭೆಯ ಕ್ಷೇತ್ರಗಳು ಕಾಂಗ್ರೆಸ್‌ ಆಡಳಿತ ನಡೆಸುವಂತೆ ಕಾರ್ಯಕರ್ತರಲ್ಲಿ ಜವಾಬ್ದಾರಿ ಹೆಚ್ಚಿದೆ. ಆನಿಟ್ಟಿನಲ್ಲಿ ಉಳಿದ 3 ದಿನಗಳಲ್ಲಿ ಎಲ್ಲ ಅಭ್ಯರ್ಥಿಗಳನ್ನು ಅಧಿಕಾರಕ್ಕೆ ತರುವ ಪಣ ತೊಬೇಕು. ಮತದಾರರಮನ ಗೆಲ್ಲುವ ಮಹತ್ತರ ಜವಾಬ್ದಾರಿ ಮತ್ತು ಕ್ಷೇತ್ರದ ವಿಧಾನಪರಿಷತ್‌ ಸದಸ್ಯ ಮಾನೆಯವರ ಮಾನ ನಿಮ್ಮೆಲ್ಲರ ಕೈಯಲ್ಲಿದೆ. ಸ್ಥಳೀಯ ಪುರಸಭೆ ಚುನಾವಣೆಯಲ್ಲಿ 23 ವಾರ್ಡಗಳನ್ನು ಕಾಂಗ್ರೆಸ್‌ ಮಡಿಲಿಗೆ ಹಾಕುವ ಮಹತ್ತರ ಜವಾಬ್ದಾರಿ ಕಾಂಗ್ರೆಸ್‌ ಕಾರ್ಯಕರ್ತರದ್ದು ಎಂದು ಹೇಳಿದರು
ಮಾತಿನಂತೆ ನಡೆದುಕೊಳ್ಳುವ ಸಿದ್ದರಾಮಯ್ಯನವರು ರಾಜ್ಯದ ಜನರ ನಂಬಿಕೆ ವಿಶ್ವಾಸಗಳಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷ ಕಾಂಗ್ರೆಸ್‌ನ ನಾಯಕರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಜಿಲ್ಲೆಯ ಉಸ್ತುವಾರಿ ನನ್ನ ಮೇಲಿರುವ ಕಾರಣ ಪ್ರತಿ 15 ದಿನಕ್ಕೊಮ್ಮೆ ಕ್ಷೇತ್ರದ ಪ್ರತಿ ಬಡಾವಣೆಗಳನ್ನು ಸುತ್ತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಯುವ ಸಮೂಹ ಕಾಂಗ್ರೆಸ್‌ ಪಕ್ಷದ ಕಡೆ ವಾಲುತ್ತಿದೆ. ಬಿಜೆಪಿ ಆಮಿಷಗಳಿಗೆ ಮತದಾರ ಮಣೆಹಾಕುತ್ತಿಲ್ಲ. ಸಿದ್ದರಾಮಯ್ಯನವರ ಯೋಜನೆಗಳ ಅನುಷ್ಠಾನಗಳನ್ನು ಜನರು ಇನ್ನೂ ಮರೆತಿಲ್ಲ ಈ ಬಾರಿ ಹಾನಗಲ್ಲನಲ್ಲಿ ಕಾಂಗ್ರೆಸ್‌ ಅಲೆ ಇದೆ ಪುರಸಭೆಯ ಅಧಿಕಾರ ಕಾಂಗ್ರೆಸ್‌ ಮಡಿಲು ನಿಷ್ಚಿತ ಎಂದರು.
ವಿಧಾನ ಪರಿಷತ್‌ ಸದಸ್ಯ ಶ್ರೀನಿವಾರ ಮಾನೆ ಮಾತನಾಡಿ, 10 ವರ್ಷ ಬಿಜೆಪಿ ಅಧಿಕಾರವನ್ನು ಜನ ಬೇಸತ್ತಿದ್ದಾರೆ. ಈ ಸವಾಲನ್ನು ಕಾಂಗ್ರೆಸ್‌ ಸ್ವೀಕರಿಸಿದೆ. ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ. ಬಡವರ, ಅಲ್ಪಸಂಖ್ಯಾತರ, ಹಿಂದುಳಿದ ಜನಾಂಗದ ಬಡಾವಣೆಗಳ ಅಭಿವೃದ್ಧಿ ಕಾಂಗ್ರೆಸ್‌ನ ಧ್ಯೇಯ ಕರ್ತವ್ಯ ಎಂದರು.
ವೇಧಿಕೆಯಲ್ಲಿ ತಾ.ಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಕೆಪಿಸಿಸಿ ಉಸ್ತುವಾರಿ ಜಯಸಿಂಹ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಸದಸ್ಯರಾದ ಸತೀಶ ದೇಶಪಾಂಡೆ, ವನಜಾಕ್ಷಿ ಪಾಟೀಲ, ಹಾನಗಲ್ಲ ಬ್ಲಾಕ್‌ ಅಧ್ಯಕ್ಷ ಆರ್‌.ಎಸ್‌ ಪಾಟೀಲ, ಶಹರ ಘಟಕದ ಅಧ್ಯಕ್ಷ ಎಂ.ಕೆ ಹುಬ್ಬಳ್ಳಿ, ಜಿ.ಪಂ ಸದಸ್ಯರಾದ ರಾಘವೇಂದ್ರ ತಹಶೀಲ್ದಾರ್‌, ಟಾಕನಗೌಡ ಪಾಟೀಲ, ಸಣ್ಣ ಕೈಗಾರಿಕೆ ನಿಗಮದ ಮಾಜಿ ಉಪಾಧ್ಯಕ್ಷ ಎ.ಎಂ ಪಠಾಣ, ತಾ.ಪಂ ಮಾಜಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಮಾಜಿ ಉಪಾಧ್ಯಕ್ಷೆ ಅನಿತಾ ಶಿವೂರ, ಮುಖಂಡರಾದ ಬಿ.ಶಿವಪ್ಪ, ಯಾಸೀರ್‌ ಪಠಾಣ, ಸೈಯ್ಯದ ಅಹ್ಮದಬಾಷಾ ಫೀರಜಾದೆ ಇದ್ದರು.
ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ, ಮಾಜಿ ಸಚಿವ ಮನೋಹರ ತಹಶೀಲ್ದಾರ್‌ ಹಾನಗಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗನಗೌಡ ಪಾಟೀಲ, ಹಾನಗಲ್‌ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ.ಹುಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...