ಬಿಜೆಪಿಗೆ ಹಿಂದೂ ರಾಷ್ಟ್ರ ಸೇನಾ ಸಂಪೂರ್ಣ ಬೆಂಬಲ : ರವಿಕುಮಾರ

0
29

ಕನ್ನಡಮ್ಮ ಸುದ್ದಿ-ಬೆಳಗಾವಿ: ದೇಶಕ್ಕಾಗಿ ಮೋದಿ ಮತ್ತೆ ಪ್ರದಾನಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಬೇಕೆಂದು ಭಾರತೀಯ ಜನತಾ ಪಾರ್ಟಿಗೆ ಕರ್ನಾಟಕ ರಾಜ್ಯ ಹಿಂದೂ ರಾಷ್ಟ್ರ ಸೇನಾ ಸಂಪೂರ್ಣ ಬೆಂಬಲ‌ ಸೂಚಿಸುತ್ತೆವೆ ಎಂದು ಜಿಲ್ಲಾಧ್ಯಕ್ಷ ರವಿಕುಮಾರ ಕೋಕಿತಕರ ಹೇಳಿದರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ರಾಷ್ಟ್ರ ಸೇನಾದ ರಾಷ್ಟ್ರಾಧ್ಯಕ್ಷರ ಆದೇಶ ಮೇರೆಗೆ ಹಾಗೂ ಐದು ವರ್ಷದ ಆಡಳಿತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಭದ್ರತೆ, ಸುರಕ್ಷತೆ ಹೆಚ್ಚು ಒತ್ತು ಕೊಡುತ್ತಿರುವ ಹಾಗೂ ಜನರ ಜನ ಪರ ಯೋಜನೆಗಳನ್ನು ನೀಡುವ ಮೂಲಕ ಜನಪರ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ರಚನೆಯಾಗಬೇಕು. ಮೋದಿಯವರೆ ಮತ್ತೊಮ್ಮೆ
ಪ್ರದಾನಿಯಾಗಿ ಅಧಿಕಾರ ಸ್ವೀಕರಿಸಬೇಕು. ಆದ್ದರಿಂದ ಹಿಂದೂ ರಾಷ್ಟ್ರ ಸಂಘದ ಬಿಜೆಪಿಗೆ ಬೆಂಬಲ ಸೂಚಿಸುವ ಮೂಲಕ ಗೆಲುವು ಸಾಧಿಸಲು ಬೆನ್ನೆಲುಬಾಗಿ ನಿಲ್ಲುತ್ತವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರತಾಪ್ ಸೂರ್ಯವಂಶಿ, ಬಾಳು ಪವಾರ, ಪ್ರಕಾಶ ಕುರಣೆ, ಜ್ಯೋತಿಬಾ ನಾಕಡೆ ಸೇರಿದಂತೆ ಇತರರು ಇದ್ದರು.

loading...