ಬಿಜೆಪಿಯ ಮತ್ತೊಂದು ಅಚ್ಚರಿಯ ಆಯ್ಕೆ… ಉತ್ತರಕ್ಕೆ ರಾಷ್ಟ್ರಪತಿ, ದಕ್ಷಿಣಕ್ಕೆ ಉಪರಾಷ್ಟ್ರಪತಿ !

0
1529

ಕನ್ನಡಮ್ಮ ವಿಶೇಷ
ಬೆಳಗಾವಿ:17 ರಾಷ್ಟ್ರಪತಿ ಆಯ್ಕೆಯಲ್ಲಿ ದಲಿತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಜಾಣ್ಮೆ ಮೆರೆದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಷಾ ಜೊಡಿ ಉಪಾರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆಯಲ್ಲಿಯೂ ಅಂಥ ಅಚ್ಚರಿಯನ್ನು ನೀಡಿದೆ. ರಾಷ್ಟ್ರಪತಿ ಹುದ್ದೆಗೆ ರಾಮನಾಥ ಕೋವಿಂದ ಉತ್ತರ ಭಾರತದ ಆಯ್ಕೆಯಾಗಿದ್ದು, ಅವರೊಬ್ಬ ದಲಿತರೆನ್ನುವುದು ವಿಶೇಷ . ಸೋಮವಾರ ರಾಷ್ಟ್ರಪತಿಗೆ ಚುನಾವಣೆ ನಡೆದಿದ್ದು ಕೋವಿಂದ ಬಹುತೇಕ ಆಯ್ಕೆಯಾಗುವುದು ನಿಶ್ಚಿತ.
ಇನ್ನೂ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಮಹಾತ್ಮಾ ಗಾಂಧಿ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿಯನ್ನು ಆಯ್ಕೆಮಾಡಿದ್ದಾರೆ. ಬಿಜೆಪಿ ನೇತೃತ್ವದ ಎನ್‍ಡಿಎ ದಕ್ಷಿಣ ಭಾರತದ ಆಂದ್ರಪ್ರದೇಶ ಮೂಲದ ಹಾಗೂ ಈ ಹಿಂದೆ ಕರ್ನಾಟಕದಿಂದ ಹಲವು ಸಲ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆಮಾಡಿದೆ. ರಾಜ್ಯ ಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯಿದ್ದು ಪಕ್ಷವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಅತ್ಯುತಮ ಸಂಸದೀಯಪಟುವಾಗಿರುವ ವೆಂಕಯ್ಯ ನಾಯ್ಡು ಅವರಿಗೆ ಈ ಪ್ರತಿಷ್ಠಿತ ಹುದ್ದೆಯನ್ನು ನೀಡುವ ಮೂಲಕ ಉತ್ತರ ಭಾರತ ದಕ್ಷಿಣ ಭಾರತದವರಿಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಯನ್ನು ದಯಪಾಲಿಸಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಷ್ಟು ನೆಲೆಯಿಲ್ಲ. ಅದನ್ನು ಗಮದಲ್ಲಿ ಇರಿಸಿಕೊಂಡೆ ನಾಯ್ಡುಗೆ ಮಣೆ ಹಾಕಿದೆ. ಕೇಂದ್ರ ನಗರಾಭಿವೃದ್ಧಿ ಸಚಿವರಾಗಿ ನಾಯ್ಡು ತಮ್ಮ ವಿಶೇಷ ಕಾರ್ಯಯೋಜನೆಯ ಮೂಲಕ ಮೋದಿಯ ಮನಗೆದಿದ್ದರು. ಅದರಲ್ಲೂ ಮೋದಿ ಸರಕಾರದ ಮಹತ್ವಾ ಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಕಳೆದ ಮೂರು ವರ್ಷಗಳಿಂದ ನಾಯ್ಡು ಸಮರ್ಥವಾಗಿ ಕರ್ತವ್ಯ ನಿಭಾಯಿಸುತ್ತಿರುವುದು ಅವರನ್ನು ಉಪಾರಾಷ್ಟ್ರ ಪತಿ ಹುದ್ದೆಯನ್ನು ಅಲಂಕರಿಸುವಂತೆ ಮಾಡಿದೆ.
ಒಟ್ಟಾರೆ ಮೋದಿ ಮತ್ತು ಷಾ ತಮ್ಮ ನಿಷ್ಠರಾದವರಿಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಯ ಕೊಡುಗೆ ನೀಡಿದ್ದಾರೆ. ವೆಂಕಯ್ಯ ನಾಯ್ಡ ಸದ್ಯ ಉಪರಾಷ್ಟ್ರ ಪತಿ ಹುದ್ದೆಗೆ ಅಭ್ಯರ್ಥಿಯಾಗಿದ್ದು, ಬಿಜೆಪಿಗೆ ಬಹುಮತವಿರುವುದರಿಂದ ರಾಷ್ಟ್ರಪತಿ, ಉಪರಾಷ್ಟ್ರ ಪತಿ ಸ್ಥಾನಕ್ಕೆ ಸಂಬಂಧಿಸಿ ಈ ಮೊದಲು ತಮ್ಮ ಹೆಸರು ಪ್ರಸ್ತಾಪವಾದಗಲೇಲ್ಲ. ನಾಯ್ಡು ಅದನ್ನು ನಿರಾಕರಿಸುತ್ತ ಬಂದಿದ್ದರು. ಉಪರಾಷ್ಟ್ರ ಪತಿ ಹುದ್ದೆಗೆ ಏರಿಗೆ ನಂತರ ಭವಿಷ್ಯದಲ್ಲಿ ಅವರು ರಾಷ್ಟ್ರಪತಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಹಿಂದೆ ಕಾಂಗ್ರೆಸ್ ಉಪರಾಷ್ಟ್ರಪತಿಯಾದವರನ್ನು ರಾಷ್ಟ್ರಪತಿ ಹುದ್ದೆಗೆ ಏರಿಸಿದ ಉದಾರಣೆ ಇದ್ದು, ವೆಂಕಯ್ಯ ನಾಯ್ಡು ಮುಂದೊಂದು ದಿನ ದೇಶದ ಪ್ರಥಮ ಪ್ರಜೆಯೂ ಆಗಬಹುದು.

loading...