ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳು ಪೂರ್ಣ: ತಿಪ್ಪೆರುದ್ರಸ್ವಾಮಿ

0
74
 

ಗಂಗಾವತಿ: ಇಡಿ ವಿಶ್ವವೆ ಭಾರತದತ್ತ ಮುಖ ಮಾಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ರೈಲ್ವೆ, ರಸ್ತೆ ಹಾಗು ನೀರಾವರಿ ಯೋಜನೆಗಳು ಪೂರ್ಣವಾಗಲಿದ್ದು ಕಮಲ ಚಿಹ್ನೆಗೆ ಮತ ನೀಡುವ ಮೂಲಕ ಕರಡಿ ಸಂಗಣ್ಣ ಇವರನ್ನು ಮತ್ತೆ ಸಂಸದರನ್ನಾಗಿ ಆಯ್ಕೆ ಮಾಡುವಂತೆ ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪೆÃರುದ್ರಸ್ವಾಮಿ ಹೇಳಿದರು.

ಅವರು ಸಮೀಪದ ಉಡುಮಕಲ್ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೆÃಶಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಭರವಸೆಯ ಪಕ್ಷ ಬಿಜೆಪಿ ಕೇಂದ್ರದಲ್ಲಿ ಹಗರಣ ಮುಕ್ತ ಸರಕಾರ ನೀಡಿದ ಹೆಗ್ಗಳಿಕೆ ನರೇಂದ್ರ ಮೋದಿಜಿಯವರಿಗೆ ಸಲ್ಲುತ್ತದೆ ವಿನಾಕಾರಣ ವಿರೋಧಿಗಳು ರೆಫಲ್ ಹಗರಣ ಎಂದು ಬೊಬ್ಬೆ ಹೊಡೆಯುತ್ತಿದ್ದು ಕುಟುಂಬ ರಾಜಕಾರಣ ಮಾಡುವ ಇಂದಿನ ದಿನಗಳಲ್ಲಿ ಕುಟುಂಬ ತ್ಯೆಜಿಸಿ ದೇಶಕ್ಕಾಗಿ ಹದಿನಾರು ಗಂಟೆ ದುಡಿಯುವ ಪ್ರಧಾನಿ ಸಿಕ್ಕಿರುವುದು ನಮ್ಮ ಸುಧೈವ ಇಂಥ ಪ್ರಧಾನಿಯನ್ನು ನಾವು ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಶಾಸಕ ಪರಣ್ಣ ಮುನಳ್ಳಿ ಮಾತನಾಡಿ, ದೇಶದ ಹಿತ ಕಾಯುವ ನಾಯಕರು ನಮಗೆ ಬೇಕಿದೆ, ಸ್ವಂತ ಅಭಿವೃದ್ಧಿಗೆ ಶ್ರಮಿಸುವವರ ಮಾತಿಗೆ ಬೆಲೆ ನೀಡದೆ, ವಿಶ್ವದೆತ್ತರಕ್ಕೆ ಭಾರತವನ್ನ ಕೊಂಡ್ಯೊಯ್ಯುತ್ತಿರುವ ಮೋದಿಯವರಿಗಾಗಿ ಕಮಲಕ್ಕೆ ಮತ ಹಾಕಿ ನದಿಗಳ ಜೋಡಣೆ, ರೈತರಿಗೆ ಪಿಂಚಣಿ ವ್ಯವಸ್ಥೆ, ಜನರನ್ನು ಸೋಮಾರಿಗಳನ್ನಾಗಿ ಮಾಡದೆ, ಜನರಿಗೆ ದುಡಿಯುವ ಮಾರ್ಗ ತೋರಿಸುವ ದೂರದೃಷ್ಟಿಯುಳ್ಳ ನಾಯಕರು ನಮಗೆ ಬೇಕಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ್, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಯಮುನಪ್ಪ ವಿಠಲಾಪುರ, ಹನುಮಂತಪ್ಪ ನಾಯಕ, ವೀರಭದ್ರಪ್ಪ ನಾಯಕ, ಕಾಮದೊಡ್ಡಿ ದೇವಪ್ಪ ಸೇರಿದಂತೆ ಇತರರಿದ್ದರು. ನಂತರ ಉಡುಮಕಲ್, ವೆಂಕಟಗಿರಿ ಸರ್ಕಲ್‌ನ ಗಡ್ಡಿ, ಬಂಡ್ರಾಳ್, ದಾಸನಾಳ್, ಮುಕ್ಕುಂಪಿ ಇತರೆಡೆ ವ್ಯಾಪಕ ಪ್ರಚಾರ ನಡೆಸಿದರು.

loading...