ಬಿಜೆಪಿ ಅಭ್ಯರ್ಥಿ ಬದಲಾವಣೆಗೆ ವಕೀಲರ ಒತ್ತಾಯ

0
23

ಕನ್ನಡಮ್ಮ ಸುದ್ದಿ-ಬೆಳಗಾವಿ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ನ್ಯಾಯವಾದಿ ಅನೀಲಕುಮಾರ ಮುಳವಾಡಮಠ ಅವರಿಗೆ ಬಿಜೆಪಿ ಟಿಕೇಟ್ ನೀಡಬೇಕೆಂದು ಒತ್ತಾಯಿಸಿ ಬೆಳಗಾವಿ ವಕೀಲರಿಂದ ಬೆಳಗಾವಿ ಜಿಲ್ಲಾ ಗ್ರಾಮೀಣ ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ ಅವರಿಗೆ ಮನವಿ ನೀಡಿದರು. ಬುಧವಾರ ಖಾಸಗಿ ಹೋಟೆಲ್‌ನಲ್ಲಿ ಮನವಿ ಸಲ್ಲಿಸಿದ ಅವರು, ಕಳೆದ ಐದು ವರ್ಷಗಳಿಂದ ಸಂಸದ ಸುರೇಶ ಅಂಗಡಿ ಸಾಮಾನ್ಯ ಜನರ ಅಭಿವೃದ್ಧಿಗಾಗಿ ಯಾವುದೆ ಕೆಲಸವನ್ನು ಮಾಡಿಲ್ಲ ಜಿಲ್ಲೆಯಲ್ಲಿ ಅಭಿವೃದ್ಧಿಪರ ಕೆಲಸಗಳೂ ನಡೆದಿಲ್ಲ. ಆದ್ದರಿಂದ ಈ ಬಾರಿ ಅಭ್ಯರ್ಥಿಯನ್ನು ಬದಲಾಯಿಸಬೇಕು. ನ್ಯಾಯವಾದಿ ಅನೀಲಕುಮಾರ ಮುಳವಾಡಮಠ ಅವರು ಬೆಳಗಾವಿ ಜಿಲ್ಲೆಯ ನ್ಯಾಯವಾದಿಗಳ ಅದ್ಯಕ್ಷರಾಗಿ, ರಾಜಕೀಯ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಲಕ್ಷಾಂತರ ಕಕ್ಷಿದಾರರ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಇವರ ಸಾಮಾಜೀಕ ಸೇವೆಯನ್ನು ಪರಿಗಣಿಸಿ ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯು ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಎನ್. ಆರ್ ಲಾತೂರ ಮಾತನಾಡಿ ಬೆಳಗಾವಿಯಲ್ಲಿ ನ್ಯಾಯವಾದಿ ಅನೀಲಕುಮಾರ ಮುಳವಾಡಮಠ ಅವರಿಗೆ ಬಿಜೆಪಿ ಅಭ್ಯರ್ಥಿಯಾಗಿ ಟಿಕೇಟ್ ನೀಡಿದರೆ ಜಿಲ್ಲೆಯ ಎಲ್ಲ ವಕೀಲರು ಬಿಜೆಪಿಗೆ ಬೆಂಬಲವಾಗಿ ನಿಲ್ಲುತ್ತೆವೆ ಸಾಮಾನ್ಯ ಜನರ ಅಭಿವೃದ್ಧಿಯಲ್ಲಿ ಸಂಸದ ಸುರೇಶ ಅಂಗಡಿಯವರ ಕೆಲಸ ಶೂನ್ಯವಾಗಿರುವುದರಿಂದ ಅಭ್ಯರ್ಥಿಯ ಬದಲಾವಣೆ ಅನಿವಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ವಕೀಲರಾದ ಆರ್.ಕೆ ಪಾಟೀಲ, ಜೆ.ಆರ್ ಹಿರೇಮಠ, ಅರುಣ ಮರೆಣ್ಣವರ, ಪ್ರಭು ಯತ್ನಟ್ಟಿ, ವಿನೋಧ ಪಾಟೀಲ, ನಾಗರಾಜ ತರಗಾರ, ಸಚೀನ ಪಾಟೀಲ ಸೇರಿದಂತೆ ಇನ್ನಿತರರು ಹಾಜರಿದ್ದರು.

loading...