ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪಾದಯಾತ್ರೆ

0
43

ಗುಳೇದಗುಡ್ಡ: ಬಾದಾಮಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಗುರುವಾರ ರಾತ್ರಿ ನಗರದ ಪುರಸಭೆಯ ಬಳಿಯಿಂದ ಪಾದಯಾತ್ರೆಯ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಗ್ರಾಮದೇವತೆ ಶ್ರೀ ಮೂಕೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಮೂಕೇಶ್ವರಿ ದೇವರಿಗೆ ಉಡಿ ತುಂಬಿ, ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ವಿಪ ಸದಸ್ಯ ಅರುಣ ಶಹಾಪೂರ, ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಮಲ್ಲಿಕಾರ್ಜುನ ಬನ್ನಿ, ನಾರಾಯಣಸಾ ಬಾಂಡಗೆ, ಮಹಾಂತೇಶ ಮಮದಾಪೂರ, ಕುಮಾರಗೌಡ ಜನಾಲಿ, ತಾಲೂಕು ಅಧ್ಯಕ್ಷ ಶಾಂತಗೌಡ ಪಾಟೀಲ, ಜಿಪಂ ಸದಸ್ಯ ಆಸಂಗೆಪ್ಪ ನಕ್ಕರಗುಂದಿ, ಕಮಲಕಿಶೋರ ಮಾಲಪಾಣಿ, ಸಂಪತಕುಮಾರ ರಾಠಿ, ಸಿದ್ದು ಅರಕಾಲಚಿಟ್ಟಿ, ದೀಪಕ ನೇಮದಿ, ಈರಣ್ಣ ಬಂಡಿವಡ್ಡರ, ಭುವನ ಪೂಜಾರಿ, ಅಶೋಕ ಹೆಗಡೆ, ದತ್ತು ಸಿಂತ್ರೆ, ರಾಜು ಚಿತ್ತರಗಿ, ಮನೋಹರ ಶಿರೋಳ, ಸಂಗಪ್ಪ ಆಲೂರ, ಬಾಳು ನಿರಂಜನ, ಸಿದ್ದಾರ್ಥ ಸಿಂಗದ, ಪ್ರಕಾಶ ಕಾವಡೆ, ವಸಂತಸಾ ಧೋಂಗಡೆೆ, ಜಿಲ್ಲಾ ಮಹಿಳಾ ಅಧ್ಯಕ್ಷೆ ಭಾಗ್ಯಾ ಉದ್ನೂರ, ಸಾವಿತ್ರಿ ಜೋಗುರ ಸೇರಿದಂತೆ ಸಾವಿರಾರು ಕಾರ್ಯಕರ್ತರು ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದರು.

loading...