ಬಿಜೆಪಿ ಕಾರ್ಯಕರ್ತರಿಂದ ಬೈಕ್ ರ್ಯಾಲಿ : ಶಾಸಕ ಅರವಿಂದ ಲಿಂಬಾವಳಿ ಚಾಲನೆ

0
26

ಕನ್ನಡಮ್ಮ ಸುದ್ದಿ- ಬೆಳಗಾವಿ : ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ, ಮೋದಿಯೇ ಪ್ರದಾನಿ ಅಧಿಕಾರ ಸ್ವೀಕರಿಸಲಿ ಎನ್ನುವ ಘೋಷವಾಕ್ಯದೊಂದಿಗೆ ಬೈಕ್ ರ್ಯಾಲಿ ನಡೆಸಿದರು. ಬೈಕ್ ರ‍್ಯಾಲಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಾಸಕ ಅರವಿಂದ ಲಿಂಬಾವಳಿ, ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಚಾಲನೆ ನೀಡಿದರು. ಬೆಳಗಾವಿ ನಗರದ ಗೋವಾವೇಸ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ, ಮಹಾತ್ಮಾ ಫುಲೆ ರೋಡ, ಎಸ್. ಪಿ. ಎಮ್. ರೋಡ, ಕಪಿಲೇಶ್ವರ ಓವರ್ ಬ್ರಿಜ್ ಕೆಳಗಿನಿಂದ, ೩ನೇ ಕ್ರಾಸ್ ಮಹಾದ್ವಾರ ರೋಡ, ಹಳೇ ಪಿ.ಬಿ ರೋಡ, ಹೊಸೂರ ಬಸವಣ ಗಲ್ಲಿ, ಬ್ಯಾಂಕ ಆಫ್ ಇಂಡಿಯಾ ಕ್ರಾಸ್, ಶಹಾಪೂರ ಖಡೇ ಬಜಾರ, ಶಹಾಪೂರ ನಾಥ ಪೈ ವೃತ್ತ, ಖಾಸಭಾಗ ಬಸವೇಶ್ವರ ವೃತ್ತ, ವಡಗಾವಿ ಸೇರಿದಂತೆ ವಿವಿಧ ಮಾರ್ಗವಾಗಿ ಗೊವಾವೇಸ್ ಬಸವೇಶ್ವರ ವೃತ್ತದಲ್ಲಿ ಮುಕ್ತಾಯವಾಯಿತು. ಬಸವನಗೌಡಾ ಯತ್ನಾಳ.ಜಗದೀಶ ಹಿರೇಮನಿ, ರಾಜೇಂದ್ರ ಹರಕುಣಿ, ಈರಣ್ಣಾ ಕಡಾಡಿ, ಎಂ.ಬಿ ಝಿರಲಿ, ರಾಜು ಚಿಕ್ಕನಗೌಡ್ರ, ಮಂಗೇಶ ಪವಾರ, ಶಶಿ ಪಾಟೀಲ ಸೇರಿದಂತೆ ಸಾವಿರಾರು ಬೈಕ್ ಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು.

loading...