ಬಿಜೆಪಿ ಕಾರ್ಯಕರ್ತರು ಕರಾಳ ದಿನಾಚರಣೆ

0
34

ವಿಜಯಪುರ: ಜೆಡಿಎಸ್-ಕಾಂಗ್ರೆಸ್ ಸರ್ಕಾರಗಳು ಅಪವಿತ್ರ ಮೈತ್ರಿ ಮೂಲಕ ಸರ್ಕಾರ ರಚನೆಗೆ ಮುಂದಾಗಿರುವುದನ್ನು ವಿರೋಧಿಸಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ಕರಾಳ ದಿನವನ್ನಾಗಿ ಆಚರಿದರು.

ನಗರದ ಗಾಂಧಿ ವೃತ್ತದ ಮುಂಭಾಗದಲ್ಲಿ ಬುಧವಾರ ಜಮಾಯಿಸಿದ ನೂರಾರು ಕಾರ್ಯಕರ್ತರು ಕೈಗೆ ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡೆಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಶಿವರುದ್ರ ಬಾಗಲಕೋಟ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಸಾಕಷ್ಟು ಬಾರಿ ಸಮ್ಮಿಶ್ರ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ ಆದರೆ ಆ ಎಲ್ಲ ಸರ್ಕಾರಗಳಿಗೆ ತನ್ನದೆ ಆದ ಗೌರವ ಇತ್ತು. ಆದರೆ ಈ ಬಾರಿ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನರು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದರ ಮೂಲಕ ರಾಜ್ಯದಲ್ಲಿ 104 ಶಾಸಕರನ್ನು ನೀಡುವ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರಹೋಮ್ಮಲು ಸಹಕರಿಸಿದರು ಎಂದರು.ರಾಜ್ಯದಲ್ಲಿ ಇದಂತಹ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಜನಮತವನ್ನು ನೀಡಿದ್ದಾರೆ. ಜೆಡಿಎಸ್‍ಗೂ ಕೂಡಾ ಜನ ಬರಿ 38 ಸ್ಥಾನಗಳನ್ನು ಕೊಟ್ಟು ಆ ಪಕ್ಷವನ್ನು ಕೂಡಾ ಜನರು ಇವತ್ತು ತಿರಸ್ಕರಿಸಿದ್ದಾರೆ. ಈ ಎಲ್ಲ ಅಂಶಗಳನ್ನು ನೋಡಿದರೆ ಇವತ್ತು ಅಸ್ತಿತ್ವಕ್ಕೆ ಬರಲಿರುವ ಕಾಂಗ್ರೆಸ್ ಜೆಡಿಎಸ್ ಪಕ್ಷದ ಸಮ್ಮಿಶ್ರ ಸರ್ಕಾರ ಕರ್ನಾಟಕ ರಾಜ್ಯದ ಜನರ ಆಸೆಯ ವಿರುದ್ಧ ಹೋಗಿ ನಮ್ಮದೆ ಅಧಿಕಾರ ಇರಲಿ ಎಂಬ ದುರದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷದವರು ಚುನಾವಣಾ ಫಲಿತಾಂಶ ಬಂದ ತಕ್ಷಣವೇ ಜೆಡಿಎಸ್ ಪಕ್ಷವನ್ನು ಬೆಂಬಲ ಸೂಚಿಸಿ ಶತಾಯ ಗತಾಯ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಮಾಡಿದ ಕೀಳುಮಟ್ಟದ ರಾಜಕಾರಣ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ವಿವೇಕ ಡಬ್ಬಿ, ಮಳುಗೌಡ ಪಾಟೀಲ, ವಿಕ್ರಮ ಗಾಯಕವಾಡ, ಡಾ.ಪ್ರಶಾಂತ ಕಟಕೊಳ್, ಸಿದ್ದು ಬೆಲ್ಲದ, ಶ್ರೀನಿವಾಸ ಬೇಟಗೆರಿ, ಶ್ರೀಹರಿ ಗೊಳ್ಳಸಂಗಿ, ಅಶೋಕ ನ್ಯಾಮಗೊಂಡ, ಭಾರತೀ ಭುಯ್ಯಾರ, ಸುಮಂಗಲಾ ಕೋಟಿ, ರಾಜು ಬಿರಾದಾರ, ಅನೀಲ ಸಬರದ, ಚಂದ್ರು ಚೌಧರಿ, ಕೃಷ್ಣಾ ಗುನ್ನಾಳಕರ, ಪಾಲಿಕೆ ಸದಸ್ಯರಾದ ರಾಹುಲ ಜಾಧವ, ಆನಂದ ಧುಮಾಳೆ, ಅಶೋಕ ಬೆಲ್ಲದ, ಮಹೇಶ ಒಡೆಯರ, ರಾಜೇಶ ತಾವಸೆ, ಶ್ರೀಕಾಂತ ಶಿಂಧೆ, ವಿನಾಯಕ ದಹಿಂದೆ, ಉಮೇಶ ವೀರಕರ್, ರಾಜು ಹುನ್ನೂರ, ಶ್ರೀಕಾಂತ ರಾಠೋಡ, ದತ್ತಾ ಗೋಲಾಂಡೆ, ಕರಿಬಸು ಲವಗಿ, ವಿಠ್ಠಲ ನಡುವಿನಕೇರಿ, ಸಂಗಮೇಶ ಉಕ್ಕಲಿ, ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಇದ್ದರು.

loading...