ಬಿಜೆಪಿ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ

0
19

ಉಳ್ಳಾಗಡ್ಡಿ ಖಾನಾಪೂರ 23- ರಾಜ್ಯದ ಭಾರತೀಯ ಜನತಾ ಪಕ್ಷದ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಎಂದು ಯಮಕನಮರಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾತನಾಡಿ ಪ್ರಸ್ತುತ ಸರ್ಕಾರ ಜನಸಾಮಾನ್ಯರ ಯಾವುದೇ ಸಮಸ್ಯೆ ಗಳಿಗೆ ಸ್ಪಂದಿಸುತ್ತಿಲ್ಲ. ಪಡಿತರ ಚೀಟಿ ವಿತರಣೆಯಲ್ಲಿ ಗೊಂದಲ ಗ್ಯಾಸ  ಸಿಲೆಂಡರಗಳ ಅಕ್ರಮ ವಿತರಣೆ ನಿರುದ್ಯೌಗಿ ಭತ್ಯೆ ನೀಡುವ ಭರವಸೆ, ರೈತರ ಪಂಪಸೆಟ್ಗಳಿಗೆ ಉಚಿತ ವಿದ್ಯುತ್ ಮುಂತಾದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಈ ಸರ್ಕಾರದ ಸಚಿವರು, ಮುಖ್ಯ ಮಂತ್ರಿ ಗಳು ಆರೋಪಿತರಾಗಿ ಜೈಲು ಸೇರು ತ್ತಿದ್ದಾರೆ. ಕರ್ನಾಟಕವು ಭ್ರಷ್ಟಾಚಾರದಲ್ಲಿ ನಂ. 1 ಪಟ್ಟ ಗಳಿಸಿ ಇಡೀ ರಾಷ್ಟ್ತ್ರದ ಮುಂದೆ ಕರ್ನಾಟಕ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ವೀರಣ್ಣ ಬಿಸಿರೊಟ್ಟಿ ಸಭೆಯನ್ನುದ್ದೇಶಿಸಿ  ಮಾತನಾಡಿದರು.

ಯಮಕನಮರಡಿ ಗ್ರಾ.ಪಂ. ದಿಂದ ರ್ಯಾಲಿ ಮೂಲಕ ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ಮನವಿ ಅರ್ಪಿಸಲಾಯಿತು. ಉಪ ತಹಶೀಲ್ದಾರ ಎಲ್.ವಾಯ್. ಕಮಟೇಕರ ಮನವಿ ಸ್ವೀಕರಿಸಿದರು. ರ್ಯಾಲುಯಲ್ಲಿ ಕಾಂಗ್ರೆಸ್ ಧುರೀಣರು ಆರ್.ಕೆ. ದೇಸಾಯಿ, ರವಿ ಜಿಂಡ್ರಾಳಿ, ನಾಗರಾಜ ದುಂದುರ, ಜೋಮಲಿಂಗ ಪಟೋಳಿ, ಮಹಾದೇವ ಪಟೋಳಿ, ದಸ್ತಗೀರ ಬಸಾಪುರಿ, ಕಿರಣ ರಜಪೂತ, ಡಿ.ಎಸ್. ಪಾಟೀಲ, ಮಲ್ಲಿಕಾರ್ಜುನ ಮಡಲಗಿ, ಶೌಕತ ಖಾಜಿ, ಅಪ್ಪಾಗೌಡಾ ಪಾಟೀಲ, ಪಾರೇಶಗೌಡಾ ಪಾಟೀಲ, ಅಶೋಕ ಸಾಳೆ, ವಿಠ್ಠಲ ಕಡಗಾಂವಿ, ರಾಜು ಮಾರ್ಯಾಳಿ ಮೊದಲಾದ ಕಾರ್ಯಕರ್ತರು ಪಾಲ್ಗೊಂಡಿದ್ದರು.

 

loading...

LEAVE A REPLY

Please enter your comment!
Please enter your name here