ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿಜೆಪಿಗರೇ ಆಗುತ್ತಾರೆ: ನೂತನ ರಾಜ್ಯಸಭಾ ಸದಸ್ಯ ಕಡಾಡಿ ವಿಶ್ವಾಸ

0
403

ಬೆಳಗಾವಿ

ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ. ಬಿಜೆಪಿ ಅಭ್ಯರ್ಥಿಗಳೇ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುತ್ತಾರೆ ಎಂದು ನೂತನ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಪತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು, ಬೆಳಗಾವಿಯ ಡಿಸಿಸಿ ಬ್ಯಾಂಕ್ ಸಹಕಾರ ಕ್ಷೇತ್ರದಲ್ಲಿ ತನ್ನದೆಯಾದ ಕೊಡುಗೆ ಇದೆ. ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆಯ ಬಗ್ಗೆ ಪಕ್ಷದ ವರಿಷ್ಠರ ಸೂಚನೆ ಮೆರೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುತ್ತಾರೆ. ಯಾರೇ ಅಧ್ಯಕ್ಷರಾದರೂ ಬಿಜೆಪಿಯವರೆ ಆಗುತ್ತಾರೆ ಎಂದರು.

ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೂ ರಾಜ್ಯಸಭೆಯಲ್ಲಿ ಆಯ್ಕೆ ಮಾಡಿರುವುದಕ್ಕೆ ಸಂತಸವಾಗಿದೆ. ರಾಜ್ಯಸಭೆ ಎಂದರೆ ಬೇರೆ ಕಲ್ಪನೆ ಇತ್ತು. ಆದರೆ ಈಗ ಬದಲಾಗಿದೆ. ಬಿಜೆಪಿ ಪಾರಂಪರೆಯನ್ನು ಬೇರೆ ಪಕ್ಷದಲ್ಲಿ ಕಾರ್ಯಕರ್ತರು ಕೇಳುತ್ತಿದ್ದಾರೆ ಎಂದರು.

ಬೆಳಗಾವಿ ಜಿಪಂ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ರಾಜ್ಯಸಭೆಯ ಅನುದಾನ ಸರಿಯಾಗಿ ಸದ್ಬಳಕೆಯಾಗದೆ ವಾಪಸ್ಸ ಹೋದ ಉದಾಹರಣೆ ಸಾಕಷ್ಟಿದೆ. ರಾಜ್ಯ ಸಭೆಗೆ ಯಾವ ಯಾವ ಇಲಾಖೆ ಒಳಪಡುತ್ತವೆ ಎಂಬುದನ್ನು ಅಧ್ಯಯನ ಮಾಡುತ್ತೇನೆ. ಬಳಿಕ ನನ್ನದೆಯಾದ ರೂಪರೇಷೆಗಳನ್ನು ಸಿದ್ದಪಡಿಸಿಕೊಂಡು ಎಲ್ಲರ ಸಹಕಾರದಿಂದ ಕರ್ನಾಟಕವನ್ನು ಅಭಿವೃದ್ಧಿ ಪತದತ್ತ ಕೊಂಡೊಯುವಲ್ಲಿ ಪ್ರಮುಖ ಪಾತ್ರ ವಹಿಸುವೆ ಎಂದರು.

loading...