ಬಿಸಿಸಿಐ ಮುಂದೆ ಭಿಕ್ಷೆ ಬೇಡುವುದಿಲ್ಲ: ಕಿರ್ಮಾನಿ

0
34

ಬೆಂಗಳೂರು, ಮೇ.25: ಭಾರತದ ಮಾಜಿ ವಿಕೆಟ್ ಕೀಪರ್ ಸೈಂುುದ್ ಕಿರ್ಮಾನಿಗೆ ತುಂಬಾ ದುಃಖ, ಅಪಮಾನವಾಗಿದೆ. ಕಪಿಲ್ ದೇವ್ ಹಾಗೂ ಅಜಾರುದ್ದೀನ್ ಅವರಿಗೆ ಸನ್ಮಾನ ಮಾಡದಿರಲು ಬಿಸಿಸಿಐ ಬಳಿ ನಾನಾ ಕಾರಣಗಳಿತ್ತು. ಆದರೆ, ಕಿರ್ಮಾನಿಂುುನ್ನು ನಿರ್ಲಕ್ಷಿಸಿದ್ದು ಮಾತ್ರ ಅಕ್ಷಮ್ಯವಾಗಿದೆ.

ಆದರೆ, ಐಪಿಎಲ್ 5 ರ ಪೇ ಆಪ್ ನಂತರ ಮಾಜಿ ಕ್ರಿಕೆಟರ್ಸ್ಗಳಿಗೆ ನೀಡುವ ಗೌರವ ಮೊತ್ತದ ಸಂಭಾವನೆ ಸಿಗಲಿಲ್ಲ ಎಂದು ನಾನು ಕೊರಗುವುದಿಲ್ಲ, ಬಿಸಿಸಿಐ ಮುಂದೆ ಅಂಗಲಾಚಿ ಬೇಡುವುದಿಲ್ಲ ಎಂದು ನಮ್ಮ ಪ್ರತಿನಿಧಿ ಅಪ್ರಮೇಂುು ಅವರೊಡನೆ ನೋವು ತೋಡಿಕೊಂಡಿದ್ದಾರೆ.

ಭಾರತ ಪರ 88 ಟೆಸ್ಟ್ ಪಂದ್ಯಗಳನ್ನಾಡಿದ ಕಿರ್ಮಾನಿ ಅದ್ಬುತ ವಿಕೆಟ್ ಕೀಪರ್ ಎಂಬುದರಲ್ಲಿ ಎರಡು ಮಾತಿಲ್ಲ. 62 ವರ್ಷದ ಹಿರಿಂುು ಕ್ರಿಕೆಟರ್ ಕಿರ್ಮಾನಿ ಅವರನ್ನು ಬಿಸಿಸಿಐ ನಡೆಸಿಕೊಂಡ ರೀತಿ ಮಾತ್ರ ಖೇದಕರ.

1976ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಕಾಲಿರಿಸಿದ ಕಿರ್ಮಾನಿ ಅವರು 160 ಕ್ಯಾಚ್ ಹಾಗೂ 38 ಸ್ಟಂಪಿಂಗ್ ಮಾಡಿದ್ದಾರೆ. 1986ರಲ್ಲಿ ಕೊನೆ ಟೆಸ್ಟ್ ಆಡಿದ ಕಿರ್ಮಾನಿ 2,756 ರನ್ ಬಾರಿಸಿದ್ದು ಇದರಲ್ಲಿ 2 ಶತಕ ಹಾಗೂ 12 ಅರ್ಧಶತಕ ಗಳಿಸಿದ್ದಾರೆ.

1975 ರಿಂದ 99 ವಿಭಾಗದ ಕ್ರಿಕೆಟರ್ಸ ಗುಂಪಿಗೆ ಸೇರುವ ಕಿರ್ಮಾನಿಗೆ ಸೇರಬೇಕಾದ 1 ಕೋಟಿ ರು ಏನಾಂುು್ತು ಬಿಸಿಸಿಐ ಅಧಿಕಾರಿಗಳೇ ಉತ್ತರಿಸಬೇಕು.

ದೇವರ ಮುಂದೆ ಮಾತ್ರ ನನ್ನ ತಲೆತಗ್ಗಿಸುತ್ತೇನೆ. ಹಣಕ್ಕಾಗಿ ಂುುಾರ ಹತ್ತಿರವೂ ಬೇಡುವುದಿಲ್ಲ. ಕಾಡುವುದಿಲ್ಲ. ಮಾಜಿ ಕ್ರಿಕೆಟ್ರ್ಗಳನ್ನು ಗೌರವಿಸುವುದು ಉತ್ತಮ ಕೆಲಸ. ಆದರೆ, ಬಿಸಿಸಿಐ ನಿರ್ಲಕ್ಷದಿಂದ ಬೇಸರವಾಗಿರುವುದು ನಿಜ. ಈವರೆಗೂ ಂುುಾವುದೇ ಬಿಸಿಸಿಐ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿಲ್ಲ ಎಂದು ಹೇಳಿದರು.

ಪಟ್ಟಿಂುುಲ್ಲಿದ್ದ ಹೆಸರು ಮಾಯ: ಹಿಂದೊಮ್ಮೆ 1995 ರಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಸಹಾಂುುಾರ್ಥ ಪಂದ್ಯ ನಡೆಸಲು ಬಿಸಿಸಿಐ ಅನುಮತಿ ನೀಡಿತ್ತು. ಪಂದ್ಯದ ನಂತರ 25 ಲಕ್ಷ ಕೈ ಸೇರುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು. ಬಿಸಿಸಿಐ ನಿಂದ ಚಿಕ್ಕಾಸಿನ ಸಹಾಂುು ಕೂಡಾ ಸಿಗಲಿಲ್ಲ.

ಮಾಜಿ ಕ್ರಿಕೆಟರ್ಗಳ ಪಟ್ಟಿಂುುಲ್ಲಿ ಜಿಆರ್ ವಿ(ವಿಶ್ವನಾಥ್), ಜಿಮ್ಮಿ(ಮೊಹಿಂದರ್ ಅಮರ್ ನಾಥ್) ಹಾಗೂ ನನ್ನ ಹೆಸರು ಪಟ್ಟಿಂುುಲ್ಲಿದೆ ಎಂದು ಮಾಧ್ಯಮಗಳಲ್ಲಿ ವರದಿಂುುಾಗಿತ್ತು. ಆದರೆ, ಸನ್ಮಾನಿತರ ಪಟ್ಟಿಂುುಲ್ಲಿ ನಮ್ಮ ಹೆಸರು ನಾಪತ್ತೆಂುುಾಗಿದ್ದು ಹೇಗೆ ಗೊತ್ತಾಗಲಿಲ್ಲ” ಎಂದು ಕಿರ್ಮಾನಿ ಪ್ರಶ್ನಿಸಿದ್ದಾರೆ.

ಐಪಿಎಲ್ ಂುುುವ ಪ್ರತಿಬೆಗಳಿಗೆ ಒಳ್ಳೆ ವೇದಿಕೆ ಒದಗಿಸುತ್ತದೆ ಎಂದು ಕಿರ್ಮಾನಿಂುು ಕೈಗೆ ಬಿಸಿಸಿಐ ಸನ್ಮಾನ ಪತ್ರ, ಗೌರವ ಧನ ಸೇರುವಂತಾಗಲಿ ಎಂದು ನಮ್ಮ ಆಶಯ.

 

 

loading...

LEAVE A REPLY

Please enter your comment!
Please enter your name here