ಬೀಜ ಬಿತ್ತದೆ ಬೆಳೆ ಬೆಳೆದ ಶರಣ ಇಲ್ಲಾಳ ಬೋಮ್ಮಯ್ಯ.

0
34

 ಬೀಳಗಿ-22, ಶರಣ ಇಲ್ಲಾಳ ಬೋಮ್ಮಯ್ಯ 12ನೇ ಶತಮಾನದ ಬಸವವಾದಿ ಶರಣರಿಗಿಂತಲು ಮೊದಲಿಗರು. ಇವರು ಬಾಗಲಕೋಟೆ ತಾಲೂಕಿನ ಇಲ್ಲಾಳ ಗ್ರಾಮದಲ್ಲಿ ಜನಿಸಿದವರು. ದುಡಿಮೆನೆ ದೇವರು ಎಂದು ಶ್ರಮದಿಂದ ದುಡಿದು ಬದುಕು ಸಾಗಿಸಿದವರು. ಕೃಷಿಯಲ್ಲಿ ಹೆಚ್ಚಿನ ಪರಿಶ್ರಮ ಮಾಡಿ ಸೈ ಎನಿಸಿಕೊಂಡವರು. ಬೀಜ ಬಿತ್ತದೆ ಬೆಳೆ ಬೆಳೆದು ಆ ಕಾಲದಲ್ಲಿ ಜನರಿಗೆ ಪವಾಡ ಮಾಡಿದ ಶರಣರು. ಆಗಿನ  ಜನರಿಗೆ ಯಾವದು ಆಸೆ ಪಡದೆ ನಮ್ಮಲ್ಲಿರುವದನ್ನು ಹಂಚಿಕೊಂಡು ತಿನ್ನುವದನ್ನು ರೂಡಿಸಿಕೊಳ್ಳಿ, ನಿಮ್ಮ ಪರಿಶ್ರಮವೇ ನಿಮ್ಮನ್ನು ಬೆಳೆಸುತ್ತದೆ. ಎಲೆ ಮರೆ ಕಾಯಿಯಾಗಿ ಇದ್ದ ಶರಣ ಇಲ್ಲಾಳ ಬೋಮ್ಮಯ್ಯ. ಶರಣರ ತತ್ವದಲ್ಲಿ ನೀವು ಯಾರಿಗೆ ಬಾರವಾಗದೆ ನೀವೆ ಎಲ್ಲರಿಗೆ ಆಸರೆಯಾಗಬೇಕು. ಸಾಮರಸ ಜೀವನದೊಂದಿಗೆ ಶರಣರು ಬಿಟ್ಟು ಹೋದ ವಚನಗಾರ ಇಲ್ಲಾಳ ಬೋಮ್ಮಯ್ಯ. ಶರಣರು ನಮ್ಮ ಸಂಸ್ಕ್ಕತಿಗೆ ತಮ್ಮ ಕೊಡುಗೆ ನೀಡಿರುವದು ಶ್ಲಾಗನಿಯ. ಶರಣ ಇಲ್ಲಾಳ ಬೋಮ್ಮಯ್ಯನವರು ತಮ್ಮ ಜೀವನದಲ್ಲಿ ನಡೆದ ಭಾವನೆಗಳನ್ನು ಬರೆದಿಟ್ಟ ವಚನಕಾರ ಎಂದು ಸ್ಥಳಿಯ ಎಂ.ವಾಯ್. ಚೂರಿಯವರ ಮನೆಯಲ್ಲಿ ಬಸವ ಬಳಗದ ಮಹಾಮನೆಯ ಕಾರ್ಯಕ್ರಮದ ಅಡಿಯಲ್ಲಿ ನಡೆದ ಸಮಾರಂಭದಲ್ಲಿ  ಮುಖ್ಯ ಅತಿಥಿಗಳಾಗಿ ಎಸ್.ಎಸ್.ತೆಕ್ಕೆಣ್ಣವರ. ಪ್ರಾಂಶುಪಾಲರು ರುದ್ರಗೌಡ ಪಾಟೀಲ ಸರಕಾರಿ ಪ್ರಥಮ ದರ್ಜಿ ಕಾಲೇಜು, ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಕೆ. ದಿವ್ಯ, ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮ ಬಿಜಾಪೂರ ವಹಿಸಿದ, ಮುಖ್ಯ ಅತಿಥಿಗಳಾಗಿ ಎಂ.ಜಿ. ದಾಸರ, ಕ್ಷೇತ್ರಶಿಕ್ಷಣಾಧಿಕಾರಿಗಳು. ಪ್ರಾಸ್ತಾವಿಕವಾಗಿ ವ್ಹಿ.ಜಿ.ರೇವಡಿಗಾರ. ಅಧ್ಯಕ್ಷರು ಬಸವ ಬಳಗ. ಸ್ವಾಗತವನ್ನು ಎಮ್.ವಾಯ್. ಚೂರಿ ಮಾಡಿದರು. ನಾಗರಾಜ ಬೆಣ್ಣಿರೊಟ್ಟಿ ನಿರೂಪಿಸಿ ಪಾತ್ರೌಟರವರು ವಂದಿಸಿದರು.

 

loading...

LEAVE A REPLY

Please enter your comment!
Please enter your name here