ಬೀದಿ ವ್ಯಾಪಾರಸ್ಥರಿಂದ ಹಣ ವಸೂಲಿ ನಿಲ್ಲಿಸಲು ಒತ್ತಾಯ

0
32

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 27: ಪಟ್ಟಣದ ಕೆ.ಸಿ.ರಸ್ತೆ ಪಕ್ಕದಲ್ಲಿ ಸಣ್ಣ-ಪುಟ್ಟ ಹಣ್ಣು ವ್ಯಾಪಾರ ಮತ್ತು ತರಕಾರಿ ವ್ಯಾಪಾರಸ್ಥರಿಂದ ಪುರಸಭೆಯಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಶ್ರೀರಾಮ ಸೇನೆ ಮತ್ತು ತರಕಾರಿ ವ್ಯಾಪಾರಸ್ಥರು ಪುರಸಭೆ ಮುಖ್ಯಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಟ್ಟಣದ ಕೆ.ಸಿ.ರಸ್ತೆ ಮತ್ತು ಪಟ್ಟಣ ಪ್ರದೇಶದ ಕೆಲವು ಮುಖ್ಯ ರಸ್ಥೆಯಲ್ಲಿ ಚಹಾ ಅಂಗಡಿ, ಹಣ್ಣು ವಾಪಾರಿಗಳ ಗಾಡಾಗಳು ಮತ್ತು ಸಣ್ಣಪುಟ್ಟ ತರಕಾರಿ ಮಾರಾಟ ಮಾಡುವವರಿಂದ 15ರಿಂದ20ರೂ.ಗಳ ಹಣ ವಸೂಲಿ ಮಾಡುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು. ಒಂದು ವೇಳೆ ಇದಕ್ಕೆ ಕಡಿವಾನ ಹಾಕದಿದ್ದಲ್ಲಿ ಶ್ರೀರಾಮ ಸೇನೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪುರಸಭೆಗೆ ಎಚ್ಚರಿಕೆ ನೀಡಿದರು.
ಬೆಳಗಾವಿ ಜಿಲ್ಲಾ ಶ್ರೀರಾಮ ಸೇನೆ ಅಧ್ಯಕ್ಷ ವಿಕ್ರಮ ಬನಗೆ, ಬಾಳು ಕುದುರೆ, ಸದಾನಂದ ಮುಸಂಡಿ, ಅಪ್ಪಾಸಾಬ ಬನ್ನಟ್ಟಿ, ಲಕ್ಷ್ಮೀ ಪೂಜಾರಿ, ದೊಡ್ಡವ್ವಾ ಬೆಳಕೂಡೆ, ಪಾರ್ವತಿ ಈರಗಾರ, ಸರಸ್ವತಿ ಕೆಂಪವಾಡ, ರೇಖಾ ಪಾಟೀಲ, ರೇಣುಕಾ ಭಜಂತ್ರಿ, ಅನ್ನಪ್ಪ ಮಾಳಿ, ಉಮೇಶ ಲಿಂಗೋಟೆ, ರಮೇಶ ಮಡ್ಡೆ ಮುಂತಾದವರು ಉಪಸ್ಥಿತರಿದ್ದರು.

loading...