ಬುಧವಾರವೇ ಬೆಳಗಾವಿ ಡಿಸಿಯಾಗಿ ಎಂ.ಜಿ.ಹಿರೇಮಠ ಅಧಿಕಾರ ಸ್ವೀಕಾರ

0
58

ಬೆಳಗಾವಿ

ಗದಗ ಜಿಲ್ಲೆಯಲ್ಲಿ ತಮ್ಮದೆ ಶೈಲಿಯಲ್ಲಿ ಕಾರ್ಯನಿರ್ವಹಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಜೂ.30ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಪ್ರವಾಹ, ಕೊರೋನಾ ವೈರಸ್ ಸಂದರ್ಭದಲ್ಲಿ ಸಾರ್ವಜನಿಕರ ಸಂಕಷ್ಟಗಳಿಗೆ ಮಿಡಿದಿದ್ದ ಬೊಮ್ಮನಹಳ್ಳಿ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಎಂ.ಜಿ.ಹಿರೇಮಠ ಅವರನ್ನು ಸರಕಾರ ನೇಮಕ ಮಾಡಿದ್ದು ಬುಧವಾರವೇ ಅಧಿಕಾರ ಸ್ವೀಕಾರ ಮಾಡುವುದಾಗಿ ಎಂ.ಜಿ.ಹಿರೇಮಠ ಕನ್ನಡಮ್ಮಕ್ಕೆ ತಿಳಿಸಿದ್ದಾರೆ.

loading...