ಬೆದರಿಕೆಗೆ ಯುವಪ್ರೇಮಿ ನೇಣಿಗೆ ಶರಣು

0
19

ಕನ್ನಡಮ್ಮ ಸುದ್ದಿ
ಕಾಗವಾಡ 07: ಯುವತಿದೊಂದಿಗೆ ಪ್ರೇಮ ಸಂಬಂಧ ಬೆಳೆಸಿದ ಹಿನ್ನಲೆ ಯುವತಿಪರ ಏಳು ಯುವಕರು ಕೊಲೆ ಬೆದರಿಕೆ ಹಾಕಿದ್ದರಿಂದ, ಹೆದರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಜರುಗಿದೆ.
ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಕಾಗವಾಡ-ಗಣೇಶವಾಡಿ ಮಾರ್ಗದ ತೋಟದ ಮನೆಯಲ್ಲಿ ತೊಲೆಗೆ ಐಟಿಐ ಓದುತ್ತಿರುವ ವಿದ್ಯಾರ್ಥಿ ನೀಲೇಶ್ ಬಾಬಾಸಾಹೇಬ ಕವಟೆಕರ್(19) ನೇಣಿಗೆ ಶರಣಾಗಿದ್ದಾನೆ. ಬೆಳಗ್ಗೆ 9:30 ಗಂಟೆಗೆ ತಂದೆ ಬಾಬಾಸಾಹೇಬ ಕವಟೆಕರ್ ತೋಟದ ಮನೆಗೆ ಬಂದಾಗ ಆತನ ಮಗ ನೀಲೇಶ್ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.
ಯುವಕನ ಕುಟುಂಬ ಮೂಲತಃ ನೆರೆಯ ಮಹಾರಾಷ್ಟ್ರದ ಶಿರೋಳ ತಾಲೂಕಿನ ಗಣೇಶವಾಡಿ ಗ್ರಾಮದವರು. ಅದರೆ ಕಾಗವಾಡ ಗ್ರಾಮದಲ್ಲಿ ಜಮೀನ ಖರೀದಿಸಿ, ಬೇಸಾಯ ಮಾಡುತ್ತಿದ್ದಾರೆ. ನೀಲೇಶ್ ಇತನು ಅಥಣಿಯ ಬಸವೇಶ್ವರ್ ಐಟಿಐ ಕಾಲೇಜಿನಲ್ಲಿ ಓದುತ್ತಿದ್ದನು. ಬೆಳಗ್ಗೆ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ, ತೋಟದ ಮನೆಯಲ್ಲಿ ಬಂದು ನೇಣು ಹಾಕಿಕೊಂಡಿದ್ದಾನೆ. ಪಾಲಕರು ಇತನ ಜೇಜು ತಪಾಸಣೆ ಮಾಡಿದಾಗ, ಅದರಲ್ಲಿ ಆತ ಬರೆದ ಪತ್ರ ಸಿಕ್ಕಿದೆ. ಅದರಲ್ಲಿ ನನಗೆ ಉಗಾರ ಖುರ್ದ ಗ್ರಾಮದ ಮುಸ್ಲಿಂ ಯುವತಿ ಮತ್ತು ಗಣೇಶವಾಡಿ ಗ್ರಾಮದ ಆರ್‍ಜೆ ಗ್ರುಪ್‍ದ 7 ಜನ ನನಗೆ ಜೀವದ ಬೇದರಿಕೆ ಹಾಕಿ, ಹೆದರಿಸುತ್ತಿದ್ದಾರೆ. ಇದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು, 8 ಜನರ ಹೆಸರು ನಮೂದಿಸಿದ ಪತ್ರ ಪೊಲೀಸ್ ಕೈಯಲ್ಲಿ ಸಿಕ್ಕಿದೆ.
ಕಾಗವಾಡ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಎ.ಎಸ್.ಸಾವಳಗಿ ದೂರು ದಾಖಲಿಸಿಕೊಂಡು ಆ 8 ಜನರ ಮೇಲೆ ಐಪಿಸಿ ಕಲಂ 306, 341, 506, 149 ಪ್ರಕಾರ ದೂರು ದಾಖಲಿಸಿದ್ದು. ಇವರ ಹುಡುಕಾಟ ಪೊಲೀಸ್‍ರು ಪ್ರಾರಂಭಿಸಿದ್ದಾರೆ.

loading...