ಬೆಳಗಾವಿಗೆ ಹೆರಿಟೇಜ್ ಪಾರ್ಕ್ಬೇಡ.. ಕೆಎನ್‌ಎನ್ ಸಿಟಿ ನ್ಯೂಸ್ ಸಂವಾದದಲ್ಲಿ ಸಾರ್ವಜನಿಕರ ಒತ್ತಾಯ – ಸ್ಮಾರ್ಟ್ ಅಧಿಕಾರಿಗಳು ಗೈರು – ಸ್ಥಳೀಯ ಆರ್ಕಿಟೆಕ್ಚರ್ ಕಡೆಗಣೆಗೆ ಆಕ್ರೋಶ

0
178

ಬೆಳಗಾವಿ
ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ಸಿಟಿ ಕಾಮಗಾರಿಯ ಕುರಿತಾಗಿ ಕೆಎನ್‌ಎನ್ ಸಿಟಿ ನ್ಯೂಸ್ ಹಾಗೂ ಕನ್ನಡಮ್ಮ ದಿನಪತ್ರಿಕೆಯಿಂದ ಶನಿವಾರ ಆಯೋಜಿಸಲಾಗಿದ್ದ ಸ್ಮಾರ್ಟ್ಸಿಟಿ ಕಾಮಗಾರಿಯ ವೈಫಲ್ಯ ಮತ್ತು ಯಶಸ್ವಿ ಕುರಿತ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಆದರ್ಶ ಪ್ಯಾಲೇಸ್‌ನ ಮಿಲೆನಿಯಂ ಸಭಾಂಗಣದಲ್ಲಿ ನಡೆದ ಚರ್ಚಾ ಸಂವಾದದಲ್ಲಿ ಮಾಜಿ ಮೇಯರ್, ಪ್ರೊಪೇಷನ್ ಪೋರಂ, ಸಿವಿಲ್ ಡಿಪಾರ್ಟ್ಮೆಂಟ್, ಇಲೆಕ್ಟಾçನಿಕ್ ಡಿಪಾರ್ಟ್ಮೆಂಟ್‌ನ ವಿದ್ಯಾರ್ಥಿಗಳು, ಸಾರ್ವಜನಿಕರು, ಆರ್ಕಿಟೆಕ್ಚರ್, ರಾಜಕೀಯ ಜನಪ್ರತಿನಿದಿಗಳು, ಅದಮ್ಯಾಪೌಂಡೇಷನ್‌ನ ಸದ್ಯರು ಸೇರಿದಂತೆ ವಿವಿಧ ಗಣ್ಯರು ಆಗಮಿಸಿ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ಸಿಟಿ ಕಾಮಗಾರಿಯಗಳ ವೈಫಲ್ಯ ಹಾಗೂ ಯಶಸ್ಸು ಕುರಿತು ಮುಕ್ತವಾಗಿ ಮಾತನಾಡಿದರು.
ವಿವಿಧ ವಿಷಯಗಳ ಮೇಲೆ ಸ್ಮಾರ್ಟ್ಸಿಟಿಯ ಕಾಮಗಾರಿಯ ಬಗ್ಗೆ ಉತ್ತಮ ಚರ್ಚೆಗಳು ನಡೆದವು. ಬೆಳಗಾವಿ ನಗರದ ಆರ್ಕಿಟೆಕ್ಚರ್ ಸ್ಮಾರ್ಟ್ಸಿಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯ ಆರ್ಕಿಟೆಕ್ಚರ್‌ಗಳಿಗೆ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಇವರು ಸ್ಮಾರ್ಟ್ಸಿಟಿ ಅಧಿಕಾರಿಗಳು ನಮ್ಮ ಸಲಹೆ ಪಡೆಯುತ್ತಿಲ್ಲ. ಬೆಳಗಾವಿಯ ಇತಿಹಾಸ ಅರಿಯದವರಿಗೆ ಸ್ಮಾರ್ಟ್ಸಿಟಿಯ ಕಾಮಗಾರಿ ನೀಡಿದ್ದಾರೆ. ಹೆರಿಟೆಜ್ ಪಾರ್ಕ್ ಬೇರೆಯವರಿಗೆ ನೀಡಿ ಅನುಮತಿ ನೀಡುತ್ತಿದ್ದಾರೆ. ಅವರಿಗೆ ಇದರ ಬಗ್ಗೆ ಯಾವುದೇ ಜ್ಞಾನ ಇಲ್ಲ. ಬೆಳಗಾವಿ ನಗರದಲ್ಲಿ ಹೆರಿಟೇಜ್ ಪಾರ್ಕ್ ಅವಶ್ಯಕತೆ ಇಲ್ಲ. ಬೇಕಾಬಿಟ್ಟಿಯಾಗಿ ಸ್ಮಾರ್ಟ್ಸಿಟಿ ಕಾಮಗಾರಿಯನ್ನು ಮಾಡುತ್ತಿದ್ದಾರೆ ಎಂದು ಆರ್ಕಿಟೆಕ್ಚರ್ ಸ್ಮಾರ್ಟ್ಸಿಟಿ ಕಂಪನಿಯ ಮೇಲೆ ಹರಿಹಾಯ್ದರು.

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಸ್ಮಾರ್ಟ್ಸಿಟಿಯ ಕಾಮಗಾರಿಗಳು ಬೆಳಗಾವಿ ನಗರದಲ್ಲಿ ಹೇಳಿಕೊಳ್ಳುವಷ್ಟು ಯಶಸ್ವಿಯಾಗಿಲ್ಲ. ಮೊದಲ 20 ನಗರಗಳಲ್ಲಿ ಬೆಳಗಾವಿ ಮಹಾನಗರ ಆಯ್ಕೆಯಾದರೂ ಸ್ಮಾರ್ಟ್ಸಿಟಿಯ ಬಿಇಎಲ್ ಹಾಗೂ ಪಿಎಂಸಿ ಕಂಪನಿಯಿAದ ಬೆಳಗಾವಿ ನಗರದಲ್ಲಿ ಸ್ಮಾರ್ಟ್ಸಿಟಿಯ ಕಾಮಗಾರಿಗಳು ಯಾವುದು ಪೂರ್ಣಗೊಂಡಿಲ್ಲ. ಅಲ್ಲದೆ ಸ್ಮಾರ್ಟ್ಸಿಟಿಯ ಕಾಮಗಾರಿಯನ್ನ ಉಪಗುತ್ತಿಗೆದಾರರಿಗೆ ನೀಡಿ ನಗರದ ಸೌಂದರ್ಯವನ್ನೆ ಹಾಳು ಮಾಡಿದ್ದಾರೆ ಎಂದು ಸಂವಾದದಲ್ಲಿ ಗಣ್ಯರು ಆರೋಪಿಸಿದರು.
ಸ್ಮಾರ್ಟ್ಸಿಟಿಯ ಯೋಜನೆಯಲ್ಲಿ ಮಹಿಳೆಯರಿಗೆ ಯಾವುದೇ ಯೋಜನೆ ರೂಪಿಸಿಲ್ಲ. ಮಹಿಳೆಯರು, ವೃದ್ದರಿಯಾಗಿ ಯಾವ ಯೋಜನೆಯನ್ನು ಸ್ಮಾರ್ಟ್ಸಿಟಿ ಅಧಿಕಾರಿಗಳು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಮಹಿಳೆಯರ ಸುರಕ್ಷತೆಗಾಗಿ ಸ್ಮಾರ್ಟ್ಸಿಟಿಯಲ್ಲಿ ಯಾವುದೇ ಯೋಜನೆ ರೂಪಿಸದಿರುವುದಕ್ಕೆ ಮಹಿಳಾ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಸೌಲಭ್ಯಗಳಿವೆ. ಆದರೆ ಬೆಳಗಾವಿ ನಗರದಲ್ಲಿರುವ ಬಡವರಿಗಾಗಿ ಯಾವ ಯೋಜನೆಯನ್ನು ಸ್ಮಾರ್ಟ್ಸಿಟಿ ಅಧಿಕಾರಿಗಳು ರೂಪಿಸಿದ್ದಾರೆ. ಆರೋಗ್ಯ ಸೌಲಭ್ಯ ವಿಲ್ಲ. ನಗರದ ಹಸಿರಿಕರಣವಂತೂ ಇಲ್ಲವೆ ಇಲ್ಲ. ಕಾಟಾಚಾರಕ್ಕೆ ಸ್ಮಾರ್ಟ್ಸಿಟಿ ಯೋಜನೆಯ ಅನುದಾವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಜ್ಞರ ಆರೋಪಿಸಿದರು.
ಪಿಎಂಸಿ ಮೊದಲಿನಿಂದಲೂ ಸರಿಯಿಲ್ಲ. ಟ್ರ‍್ಯಾಕ್ಟ್ ಬೆಲ್ ಇಂಡಿಯಾ, ಸರಿಯಾಗಿ ಸಿಬ್ಬಂದಿ ಇಲ್ಲ. ಉಪ ಗುತ್ತಿಗೆದಾರರಿಗೆ ಕೆಲಸ ಮಾಡಲಿಲ್ಲ ಅಂದರೂ ಅವರಿಗೆ ಬಿಲ್ ಪಾಸ್ ಮಾಡುತ್ತಿದ್ದಾರೆ. ಸ್ಮಾರ್ಟ್ ಸಿಟಿ ಕಾಮಗಾರಿಗಳ ತಜ್ಞರಿಲ್ಲ. ಅದನ್ನು ಯಾವ ಆಧಾರದ ಮೇಲೆ ಮಾಡುತ್ತಾರೆ. ಲಾಕ್ ಡೌನಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಅಭಯ ಪಾಟೀಲ ಸಭೆ ನಡೆಸಿದರೂ ಆದರೆ ಪಿಎಂಸಿ ಕಂಪನಿ ಬರಲಿಲ್ಲ. ಇಂಥ ಕಂಪನಿಯಿAದ ಬೆಳಗಾವಿ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಬಿಇಎಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರ ಕೆಲಸ ಸರಿ ಇಲ್ಲ. ಬೇಸಿಕ್ ಸಿಸ್ಟಮ್ ಸರಿ ಇಲ್ಲ. ಅವರ ಮೇಲೆ ಸ್ಮಾರ್ಟ್ಸಿಟಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೂ ಏನು ಎಂದು ಸಾರ್ವಜನಿಕರು ಪ್ರಶ್ನಿಸಿದರು.

ಕೆಎನ್‌ಎನ್ ಸಿಟಿ ನ್ಯೂಸ್ ಸಂಪಾದಕರಾದ ರಾಜಕುಮಾರ ಟೋಪಣ್ಣವರ, ಮಾಜಿ ಮೇಯರ್ ವಿಜಯ ಮೋರೆ, ಮಾಲೋಜಿರಾವ್ ಅಷ್ಟೇಕರ್, ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ, ಪ್ರೋಪೆಷನಲ್ ಪೋರಂನ ಆನಂದ ಹಾವಣ್ಣವರ, ವಿನಾಕಯಕ ಮಠಪತಿ, ನಿಖಿಲ್ ಪಾಟೀಲ, ಡಾ. ಪ್ರಭುರಾವ್ ಬಾಲಿ, ಪ್ರೊ. ರೂಪಾಲಿ ಕಾವಲಿಕರ, ಬಿಜೆಪಿ ನಗರಾಧ್ಯಕ್ಷ ಶಶಿಕಾಂತ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
——————–
ಪಿಎಂಸಿ, ಬಿಇಎಲ್ ಕಂಪನಿ ವಜಾ ಮಾಡಲಿ
ಬೆಳಗಾವಿ ನಗರದಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿಯ ವೈಫಲ್ಯಕ್ಕೆ ಸ್ಮಾರ್ಟ್ಸಿಟಿಯ ಪಿಎಂಸಿ ಹಾಗೂ ಬಿಇಎಲ್ ಕಂಪನಿ. ಈ ಕಂಪನಿಯಲ್ಲಿ ನುರಿತ ತಜ್ಞರಿಲ್ಲ. ಅನುಭವ ಇಲ್ಲದ ಯುವಕರನ್ನು ಕರೆಸಿಕೊಂಡು ಯೋಜನೆಗಳನ್ನು ರೂಪಿಸಿ ತಂತ್ರಜ್ಞಾನದ ಮಾಹಿತಿ ಇಲ್ಲದೆ ಬೇಕಾಬಿಟ್ಟಿಯಾಗಿ ಕಾಮಗಾರಿಗೆ ಅನುಮೋದನೆ ನೀಡುತ್ತಿದ್ದಾರೆ. ಪ್ರತಿ ತಿಂಗಳು ಸುಮಾರು 25 ಲಕ್ಷ ರು.ಗಳನ್ನು ಪಡೆಯುವ ಈ ಎರಡು ಕಂಪನಿಗಳಿAದ ಯಾವುದೇ ಲಾಭ ಇಲ್ಲ. ಕೂಡಲೇ ಸ್ಮಾರ್ಟ್ಸಿಟಿ ಅಧಿಕಾರಿಗಳು, ಜನಪ್ರತಿನಿದಿಗಳು ಈ ಕಂಪನಿಯನ್ನು ವಜಾ ಮಾಡಿ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂವಾದದಲ್ಲಿ ಸಾರ್ವಜನಿಕರು ಆಗ್ರಹಿಸಿದರು.
————————
ಸ್ಮಾರ್ಟ್ಸಿಟಿ ಅಧಿಕಾರಿಗಳ ಗೈರು
ಕೆಎನ್‌ಎನ್ ಸಿಟಿ ನ್ಯೂಸ್ ವತಿಯಿಂದ ಬೆಳಗಾವಿ ನಗರದ ಸ್ಮಾರ್ಟ್ಸಿಟಿ ಕಾಮಗಾರಿಯ ವೈಫಲ್ಯ ಹಾಗೂ ಯಶಸ್ಸು ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರಿಗೆ ಆಹ್ವಾನ ನೀಡಿದಂತೆ ಸ್ಮಾರ್ಟ್ ಸಿಟಿಯ ಅಧಿಕಾರಿಗಳಿಗೂ ಕೆಎನ್‌ಎನ್ ಸಿಟಿ ನ್ಯೂಸ್‌ನಿಂದ ಆಹ್ವಾನ ನೀಡಲಾಗಿತ್ತು. ಜನರಿಗೆ ಸೂಕ್ತ ಮಾಹಿತಿ ನೀಡಬೇಕಿದ್ದ ಸ್ಮಾರ್ಟ್ಸಿಟಿ ಅಧಿಕಾರಿಗಳು ಗೈರಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

loading...