ಬೆಳಗಾವಿಯಲ್ಲಿ ಒಂದೇ ದಿನಕ್ಕೆ ದ್ವಿಶತಕ ಬಾರಿಸಿದ ಕರೋನಾ

0
13

ಬೆಳಗಾವಿ

 

ಜಗತ್ತಿನಾದ್ಯಂತ ತನ್ನ ರೌದ್ರ ನರ್ತನವನ್ನು ಮುಂದುವರೆಸಿರುವ ಮಹಾಮಾರಿ ಕೊರೊನಾ ವೈರಸ್ ಬುಧವಾರ ಒಂದೇ ದಿನ ದ್ವಿಶತಕ ದಾಟಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸದಿಂದ ಜನರಲ್ಲಿ ಆತಂಕ ಮಣೆ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ ೧೩೧೫ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿ ಬುಲೆಟಿನಲ್ಲಿ ೨೧೯ ಜನರಿಗೆ ಸೊಂಕು ತಗುಲಿರುವ ದೃಢಪಡಿಸಿದೆ. ಅಲ್ಲದೇ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮಕ್ಕೆ ಬೆಂಬಿಡದ ಬೂತದಂತೆ ಕೊರೊನಾ ಮತ್ತೆ ವಕ್ಕರಿಸಿದ್ದು, ಗ್ರಾಮದ ಇಬ್ಬರಿಗೆ ಸೊಂಕು ದೃಢವಾಗಿದೆ. ಅಲ್ಲದೇ ಈ ಸೊಂಕಿತರ ಪೈಕಿ ಒರ್ವ ವ್ಯಕ್ತಿ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಬಂದು ಹೋಗಿದ್ದರಿಂದ ಕೇವಲ ಜನರಲ್ಲಿ ಅಷ್ಟೆ ಅಲ್ಲ ಪೊಲೀಸ್ ಸಿಬ್ಬಂದಿಗೂ ಆತಂಕ ಹೆಚ್ಚಿದೆ.

loading...