ಬೆಳಗಾವಿ ಉಸ್ತುವಾರಿ ಜತೆ ರಮೇಶಗೆ ಡಿಸಿಎಂ ಪಟ್ಟ !

0
115

ರಾಜಶೇಖರಯ್ಯ ಹಿರೇಮಠ
ಬೆಳಗಾವಿ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ಸುಪ್ರೀಂಕೋರ್ಟ್‌ನಲ್ಲಿ ಅನರ್ಹರಾಗಿದ್ದ 12 ಶಾಕರು ಉಪಚುನಾವಣೆಯ ಜನತಾ ನ್ಯಾಯಾಲಯದಲ್ಲಿ ಅರ್ಹರಾಗಿದ್ದಾರೆ. ಅನರ್ಹರು ಎನ್ನುವ ಹಣೆಪಟ್ಟಿ ಕಳೆದುಕೊಂಡು ಸಿಎಂ ಯಡಿಯೂರಪ್ಪ ಸಚಿವ ಸಂಪುಟ ಸೇರಲು ಸಿದ್ಧರಾಗಿದ್ದಾರೆ. ಆದರೆ ಯಾರಿಗೆ ಯಾವ ಖಾತೆ ಸಿಗಲಿದೆ ಎನ್ನುವುದು ಮಾತ್ರ ನಿಗೂಢವಾಗಿದೆ.

ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣವಾಗಿದ್ದ ಅನರ್ಹ ಶಾಸಕರು ಜನತಾ ನ್ಯಾಯಾಲಯದಲ್ಲಿ ಗೆದ್ದು ಬೀಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸರಕಾರ ಸೇಫ್ ಆಗಿದೆ. ಆದರೆ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವೇಳೆ ಅಸಮಾಧಾನ ಶುರುವಾಗುವ ಆತಂಕವಿದ್ದು, ಸಿಎಂ ಯಡಿಯೂರಪ್ಪರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸುವುದರಲ್ಲಿ‌ ಎರಡು ಮಾತಿಲ್ಲ.

 

ಉಪಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಮತ್ತೆ ಬಂಡಾಯ ಭುಗಿಲೇಳುವ ಸಾಧ್ಯತೆ ಹೆಚ್ಚಾಗಿದೆ. ಉಪಚುನಾವಣೆ ಗೆದ್ದವರಿಗೆ ಸಚಿವ ಸ್ಥಾನ ನೀಡುವುದಾಗಿ ಈಗಾಗಲೇ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಹೀಗಾಗಿ ಸಚಿವಾಕಾಂಕ್ಷಿ ಶಾಸಕರಿಗೆ ಆತಂಕ ಶುರುವಾಗಿದೆ. ಉಮೇಶ್ ಕತ್ತಿ, ರೇಣುಕಾಚಾರ್ಯ ಸೇರಿದಂತೆ 15ಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳಿದ್ದು, ನೂತನ ಶಾಸಕೊಂದಿಗೆ ತಮ್ಮನ್ನು ಸಚಿವ ಸ್ಥಾ‌ನದ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಿಸುವಂತೆ ಸಿಎಂ ಯಡಿಯೂರಪ್ಪ ಗೆ ಮನವಿ ಮಾಡಿಕೊಂಡಿದ್ದಾರೆ.
ಉಪಚುನಾವಣೆಯಲ್ಲಿ ಗೆಲವು ಸಾಧಿಸಿದರುವ 12 ಶಾಸಕರಿಗೆ ಈಗಾಗಲೇ ಸಚಿವ ಸ್ಥಾನ ಖಚಿತವಾಗಿದೆ. ಆದರೆ ಉಪಚುನಾವಣೆಯಲ್ಲಿ ಗೆದ್ದಿರುವವರು ಪ್ರಬಲ ಖಾತೆಗೆ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಹೀಗಾಗಿ ಯಾರಿಗೆ ಯಾವ ಖಾತೆ ಸಿಗುತ್ತದೆ ಎನ್ನುವುದು ಕುತೂಹಲವಾಗಿದೆ.
ರಾಜ್ಯ ಬಿಜೆಪಿ ಸರಕಾರದಲ್ಲಿ ಸದ್ಯ ಮೂವರು ಉಪ ಮುಖ್ಯಮಂತ್ರಿಗಳಿದ್ದಾರೆ. ಆದರೆ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಡಿಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ. ಆರೋಗ್ಯ ಸಚಿವ ಶ್ರೀರಾಮುಲು, ಕಂದಾಯ ಆರ್.ಅಶೋಕ್ ಉಪಮುಖ್ಯಮಂತ್ರಿ ಸ್ಥಾನದ ಮೇಲೆ‌ ಕಣ್ಣಿಟ್ಟಿದ್ದಾರೆ‌

ಜನತಾ ನ್ಯಾಯಾಲಯದಲ್ಲಿ ಅನರ್ಹರು ಗೆದ್ದು ಬೀಗಿದ್ದಾರೆ. ಅಲ್ಲದೇ ಪ್ರಬಲ ಖಾತೆಗೂ ಪಟ್ಟು ಹಿಡಿಯುವ ಸಾಧ್ಯತೆ ಇದ್ದು, ಇದೇ ವಾರ ಸಂಪುಟ ವಿಸ್ತರಣೆ ಆಗಲಿದೆ ಎನ್ನಲಾಗುತ್ತಿದೆ. ಈ ವೇಳೆ ಯಾರಿಗೆ ಯಾವ ಖಾತೆ ಎನ್ನುವುದಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ.

loading...