ಬೆಳಗಾವಿ ಜಿಲ್ಲಾಸ್ಪತ್ರೆಯ ಸೋಂಕಿತರಿಗೆ ಬೈಲಹೊಂಗಲ್ ಆಸ್ಪತ್ರೆಗೆ ಶಿಪ್ಟ್ – ಆತಂಕದಲ್ಲಿ ಬೈಲಹೊಂಗಲ ಜನತೆ

0
9

ಬೆಳಗಾವಿ
ಇಲ್ಲಿಯವರೆಗೆ ಕರೊನಾ ಭಯವಿಲ್ಲದೆ ಒಡಾಡುತ್ತಿರುವ ಬೈಲಹೊಂಗಲ ಪಟ್ಟಣದ ಜನತೆ ಇನ್ಮೂಂದೆ ಹುಷಾರಾಗಿರಬೇಕು. ಏಕೆಂದರೆ ಬೆಳಗಾವಿ ಜಿಲ್ಲಾಸ್ಪತ್ರೆಯ ಕರೊನಾ ಸೊಂಕಿತ ರೋಗಿಗಳನ್ನು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ಶಿಪ್ಟ್ ಮಾಡುವ ತುರಾತುರಿ ಕೆಲಸ ನಡೆದು ಕೊವಿಡ್ ವಾರ್ಡ ನಿರ್ಮಾಣ ಮಾಡುತ್ತಿರುವ ಸುದ್ದಿ ಜನತೆಯನ್ನು ಆತಂಕಕ್ಕೀಡು ಮಾಡಿದೆ.
ಬೈಲಹೊಂಗಲ, ಚಿಕ್ಕೋಡಿ ತಾಲೂಕಾ ಕೇಂದ್ರಗಳಲ್ಲಿ ಕೊವಿಡ್ ವಾರ್ಡ ಸಿದ್ದತೆ ಭರದಿಂದ ನಡೆದಿದೆ. ದಿನ ನಿತ್ಯ ಸಾವಿರ ಸಂಖ್ಯೆಯಲ್ಲಿ ಪಟ್ಟಣ, ಹಳ್ಳಿಯ ಬಡ ಜನತೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದು ಇಲ್ಲಿ ಕರೊನಾ ಸೊಂಕಿತರಿಗೆ ಚಿಕಿತ್ಸೆ ಕೊಡುವದಾದರೆ ಅವರ ಗತಿ ಏನು ಎಂಬ ಪ್ರಶ್ನೆ ಉದ್ಭವಿಸಿದ್ದು, ಸಾರ್ವಜನಿಕ ವಲಯವನ್ನು ಆತಂಕಕ್ಕಿಡು ಮಾಡಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಮೇಲಾಧಿಕಾರಿಗಳ ಆದೇಶದಂತೆ ಬೆಳಗಾವಿ ಸಿವಿಲ್ ಆಸ್ಪತ್ರೆಯಲ್ಲಿ ಹೆಚ್ಚಾದ ಸೊಂಕಿತರನ್ನು ಶಿಪ್ಟ್ ಮಾಡಲು ವ್ಯವ್ಯಸ್ಥೆ ನಡೆಸಲಾಗಿದೆ ಎಂದು ಹೇಳಿದರು.
ಜಿಲ್ಲಾಡಳಿತ ಇಂತಹ ಕ್ರಮಕ್ಕೆ ಮುಂದಾಗದೆ ಜಿಲ್ಲಾ ಪ್ರದೇಶದಲ್ಲಿಯೇ ಸೊಂಕಿತರಿಗೆ ಚಿಕಿತ್ಸೆ ಮುಂದುವರೆಸಬೇಕು ತಾಲೂಕಾ ಕೇಂದ್ರಗಳಿಗೆ ಸೊಂಕಿತರನ್ನು ಸ್ಥಳಾಂತರಿಸುವ ಕಾರ್ಯ ಸೂಕ್ತವಲ್ಲ ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊವಿಡ್ ವಾರ್ಡ ಪ್ರಾರಂಭಿಸುವದು ಸೂಕ್ತವಲ್ಲ ಬೆಳಗಾವಿ ಸಿವಿಲ್ ಆಸ್ಪತ್ರೆಯಲ್ಲಿಯೇ ಕರೊನಾ ಸೊಂಕಿತರಿಗೆ ಚಿಕಿತ್ಸೆ ಮುಂದುವರೆಸಬೇಕು. ಸ್ಥಳದ ಕೊರತೆ ಇದ್ದರೆ ಹೆಚ್ಚಿನ ವಾರ್ಡ ಅಲ್ಲಿಯೇ ನಿರ್ಮಿಸಿಕೊಳ್ಳಿ. ಇದರಿಂದ ಹಳ್ಳಿಹಳ್ಳಿಗೂ ಸೊಂಕು ಹರಡುವ ಸಾಧ್ಯತೆ ಇದೆ ಸೊಂಕಿತರ ಸ್ಥಳಾಂತರ ಮಾಡುವ ಕಾರ್ಯ ಕೂಡಲೇ ನಿಲ್ಲಿಸಬೇಕು ಎಂದು ವಿಶ್ವ ಹಿಂದೂ ಪರಿಷತ ಮುಖಂಡ ಅಶೋಕ ಸವದತ್ತಿ, ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ, ಶ್ರೀರಾಮ ಸೇನೆ ಹಿಂದುಸ್ತಾನ ಸಂಘಟಣೆಯ ಉಪಾಧ್ಯಕ್ಷ ಕುಮಾರ ವಿಠಲ ಹೂಗಾರ, ಕುರುಬ ಸಮಾಜದ ಮುಖಂಡ ವಿಠ್ಠಲ ಅಜ್ಜನಕಟ್ಟಿ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಪರಶುರಾಮ ರಾಯಬಾಗ, ಶಂಕರ ಕೊರಿಕೊಪ್ಪ, ಪುಂಡಲೀಕ ಭಜಂತ್ರಿ ಒತ್ತಾಯಿಸಿದ್ದಾರೆ.

loading...