ಬೆಳಗಾವಿ ಜಿಲ್ಲಾ ಉಸ್ತುವಾರಿ ವಾಟ್ಸಪ್ ಗ್ರೂಪನಲ್ಲಿ ಅಮಿತ್ ಶಾ ವಿರುದ್ದ ವ್ಯಂಗ್ಯ ಪೋಸ್ಟ್

0
311

ಬೆಳಗಾವಿ

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಎಂಬ ಗ್ರೂಪ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ವ್ಯಂಗ್ಯ ಪೋಸ್ಟ್ ಮಾಡಿರವುದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ‌ ಬಂದಿದೆ. ಅಲ್ಲದೆ ಆ ಸಂದರ್ಭದಲ್ಲಿ ಬಿಜೆಪಿಯವರು ಸಮ್ಮಿಶ್ರ ಸರಕಾರದಲ್ಲಿರುವ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್, ಜೆಡಿಎಸ್ ನ ಮುಖಂಡರು ಆರೋಪ ಮಾಡುತ್ತಿದ್ದರು.

ಆದರೆ ಸದ್ಯ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಎಂಬ ವಾಟ್ಸಪ್ ಗ್ರೂಪನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ದ ವ್ಯಂಗ್ಯ ಪೋಸ್ಟ್ ಮಾಡಿರುವುದು ಮತ್ತೇ ತೀವ್ರ ಚರ್ಚೆಗೆ ಎಡೆ ಮಾಡಿಕೊಡುತ್ತಿದೆ.

ಶಾಸಕರ ಖರೀದಿ ಕೇಂದ್ರವನ್ನು 14 ದಿನಗಳ ಕಾಲ ಮುಚ್ಚಲಾಗಿದೆ. ಮ್ಯಾನೇಜರ್ ಗೆ ಕೊರೋಣಾ ಪಾಸಿಟಿವ್ ಬಂದಿರುವ ಕಾರಣ ಹೀಗಾಗಿ ಯಾವುದೇ ಅನ್ಯ ಪಕ್ಷದ ಶಾಸಕರು ಸಂಪರ್ಕಿಸಬಾರದು ಎಂದು ಕೋರುತ್ತೇನೆ. ಇಂತಿ ನಿಮ್ಮ ಮ್ಯಾನೇಜರ್ ಪಿ.ಎ. ಎಂದು ಪೋಸ್ಟ್ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

loading...