ಬೆಳಗಾವಿ ಮೂರು ಕ್ಷೇತ್ರದ ಕಾಂಗ್ರೆಸ್ ಸೋಲಿಗೆ ಶೀಘ್ರದಲ್ಲೇ ಪೋಸ್ಟ ಮಾಟ್೯ಂ ಮಾಡಲಾಗುವುದು: ನಾವಲಗಟ್ಟಿ

0
68


ಬೆಳಗಾವಿ

ಬೆಳಗಾವಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಶೀಘ್ರದಲ್ಲೇ ಪೋಸ್ಟ ಮಾಟ್೯ಂ ಮಾಡಲಾಗುವುದು ಎಂದು ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಾಯಕ ನಾವಲಗಟ್ಟಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೆಳಗಾವಿಯ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿರುವುದರ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದ ಉಪಚುನಾವಣೆಯ ಫಲಿತಾಂಶ ಬಂದಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾವು ಸ್ವಾಗತ ಮಾಡುತ್ತೇವೆ.
ಕಾಂಗ್ರೆಸ್ ಎಂದಿಗೂ ಅಧಿಕಾರ, ಖುರ್ಚಿಗಾಗಿ ಹೋರಾಟ ಮಾಡಿಲ್ಲ. ಸೈದ್ದಾಂತಿಕವಾಗಿ ಬೆಳೆದು ಜನರಿಗೆ ನ್ಯಾಯ ಹಾಗೂ ಶಕ್ತಿ ತುಂಬುವ ಹೋರಾಟ ಮಾಡಿಕೊಂಡು ಬಂದಿದ್ದೇವೆ.
ಉಪಚುನಾವಣೆ ಫಲಿತಾಂಶ ನೈತಿಕ ಹೊಣೆ ಹೊತ್ತು ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸಿದ್ದಾರೆ‌.

ಚುನಾವಣೆ ಫಲಿತಾಂಶ ಈ ರೀತಿಯಾಗುತ್ತದೆ ಎಂದು ಊಹಿಸಿರಲಿಲ್ಲ. ಸಹಜವಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಕುಂದಿರುವಂಥದ್ದು, ಇಂಥ ಸಂದರ್ಭದಲ್ಲಿ ನಾಯದ ಮುಖಂಡರು ಅವರಿಗೆ ಆತ್ಮಸ್ಥೈರ್ಯ ತುಂಬಬೇಕಾಗಿದೆ. ಎಂದಿಗೂ ಸತ್ಯಕ್ಕೆ ಜಯ ಸಿಗುತ್ತದೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರು ದೃತಿಗೇಡಬಾರದು ಎಂದರು.

ಗುಂಡೂರಾವ್ ಹಾಗೂ‌ ಸಿದ್ದರಾಮಯ್ಯ ಅವರು ತೆಗೆದುಕೊಂಡ‌‌ ನಿರ್ಣಯದಿಂದ ಹಿಂದೆ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಬ್ಬರ ನಾಯಕರ ರಾಜೀನಾಮೆ ಅಂಗೀಕಾರ ಮಾಡದಂತೆ ವಿನಂತಿಸಿಕೊಳ್ಳುತ್ತೇವೆ.

ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ, ಅಥಣಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾತನಾಡಿದ ಡ್ಯಾಶ್.. ಡ್ಯಾಶ್… ಹೇಳಿಕೆಯಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣವಲ್ಲ. ಬಿಜೆಪಿಯ ಬಸವರಾಜ ಪಾಟೀಲ ಯತ್ನಾಳ ಅವರು ಸಹ ಡ್ಯಾಶ್.. ಡ್ಯಾಶ್.. ಅಂಥ ಹೇಳಿದ್ದಾರೆ ಎಂದರು.

ಬೆಳಗಾವಿ ‌ನಗರ ಜಿಲ್ಲಾಧ್ಯಕ್ಷ ರಾಜು ಸೇಠ್, ಪರಶುರಾಮ ಒಗ್ಗಣ್ಣವರ, ಸದಾ ಕೋಲಕಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...