ದಸರಾ ಕುಸ್ತಿಯಲ್ಲಿ ಸಿದ್ಧರಾಮೇಶ್ವರ ಶಾಲೆ ವಿದ್ಯಾರ್ಥಿಗಳು ಸಾಧನೆ

0
21
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಶಿವಬಸವ ನಗರದ ಸಿದ್ಧರಾಮೇಶ್ವರ ಪ್ರೌಢ ಶಾಲೆಯ ಐದು ವಿದ್ಯಾರ್ಥಿಗಳು ಮೈಸೂರು ದಸರಾದಲ್ಲಿ ರಾಜ್ಯ ಮಟ್ಟದ ಹಿರಿಯರ ಮತ್ತು ಕಿರಿಯರ ದಸರಾ ಕುಸ್ತಿಯಲ್ಲಿ ಸಾಧನೆ ಮಾಡಿದ್ದಾರೆ.

ಮಹಿಳೆ ಕುಸ್ತಿ ವಿಭಾಗದಲ್ಲಿ ಗೋಪವ್ವಾ ಖೋಡ್ಕಿ ಪ್ರಥಮ, ಜ್ಯೋತಿ ಘಾಡಿ ದ್ವಿತೀಯ ರೇಶ್ಮಾ ಮುರುಗುಣಿ ತೃತೀಯ ಹಾಗೂ ಪುರುಷರ ವಿಭಾಗದಲ್ಲಿ ಮಹೇಶಕುಮಾರ ಲಂಗೋಟಿ ದ್ವಿತೀಯ, ಮಾಲಿಂಗರಾಯ ತೇಜಿ ತೃತೀಯ ಸ್ಥಾನ ಪಡೆಯುವ ಮೂಲಕ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತೀ ತಂದಿದ್ದಾರೆ.

ಸಂಸ್ಥೆಯ ಅಧ್ಯಕ್ಷರಾದ ಡಾ. ಸಿದ್ಧರಾಮ ಮಹಾಸ್ವಾಮಿಗಳು, ರುದ್ರಾಕ್ಷಿಮಠ ನಾಗನೂರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಾಚಾರ್ಯ ಕೆ.ಬಿ.ಹಿರೇಮಠ ಹಾಗೂ ದೈಹಿಕ ಶಿಕ್ಷಕರಾದ ಆರ್.ಎಲ್.ಸಜ್ಜನ ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

loading...