ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ನಾಳೆಯಿಂದ ಕೊರೋನಾ ವರದಿ ಸಿಗುವುದಿಲ್ಲ.. ?

0
186

ಬೆಳಗಾವಿ

ವಿಶ್ವದಾದ್ಯಂತ ರಣಕೇಕೆ ಹಾಕುತ್ತಿರುವ ಕೋವಿಡ್-19 ಕೊರೋನಾ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿದೆ. ಸೋಂಕಿತರ ಸಂಖ್ಯೆಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಗಣನೀಯವಾಗಿದ್ದರೂ ಸರಕಾರಿ ವೈದ್ಯರ ಬೇಡಿಕೆ ಈಡೇರಿಸದ ಸರಕಾರದ ನಡೆಗೆ ಸರಕಾರಿ ವೈದ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಒಂದು ಕಡೆ ಕೊರೋನಾ ಆತಂಕ ಕಡಿಮೆಯಾಗಿಲ್ಲ. ಒಂದೇ ದಿನಕ್ಕೆ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ನಾಳೆಯಿಂದ ರಾಜ್ಯಾದ್ಯಂತ ಕೊರೋನಾ ವರದಿಗಳು ಸಿಗುವುದು ಅನುಮಾನ.

ಆರೋಗ್ಯಾಧಿಕಾರಿಗಳ ಅಸಹಕಾರದ ಪ್ರತಿಭಟನೆ ಜತಗೆ ಒಪಿಡಿಯನ್ನು ಬಂದ್ ಮಾಡಲು ತೀರ್ಮಾನ ತೆಗೆದುಕೊಂಡಿದ್ದಾರೆ. ಸರಕಾರಕ್ಕೆ ಈಗಾಗಲೇ ಹಲವಾರು ಬಾರಿ ಸರಕಾರಕ್ಕೆ ಸರಕಾರಿ ವೈದ್ಯರ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರೂ ಸರಕಾರ ಮಾತ್ರ ಅವರ ಸಮಸ್ಯೆ ಬಗೆ ಹರಿಸಿಲ್ಲ.

ಆದ್ದರಿಂದ ನಾಳೆಯಿಂದ ಕೊರೋನಾ ಪಾಸಿಟಿವ್, ನೆಗೆಟಿವ್ ವರದಿ ಬರುವುದಿಲ್ಲ. ಇದು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದರೂ ವಾಸ್ತವ್ಯವಾಗಿ ಸರಕಾರಿ ವೈದ್ಯರ ಸಮಸ್ಯೆ ಬಗೆ ಹರಿಸುವುದು ಮುಖ್ಯವಾಗಿದೆ. ಇಲ್ಲಿಯವರೆಗೂ ಸರಕಾರ ವೈದ್ಯರ ಸಮಸ್ಯೆಯ ಬಗ್ಗೆ ಚಕಾರ್ ಎತ್ತದಿರುವುದು ದುರ್ದೈವದ ಸಂಗತಿಯಾಗಿದೆ.

loading...