ಬೆಳಗಾವಿ ಸ್ಮಾರ್ಟ್ಸಿಟಿಯಿಂದ ಬಡವರಿಗೆ ಯಾವ ಯೋಜನೆ ಇದೆ ?

0
23

ಬೆಳಗಾವಿ
ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಸ್ಮಾರ್ಟ್ಸಿಟಿಯ ಅನುದಾನದಲ್ಲಿ ಕೊಳಚೆ ಪ್ರದೇಶವನ್ನು ಅಭಿವೃದ್ದಿ ಪಡಿಸಬೇಕಿದ್ದ ಅಧಿಕಾರಿಗಳು ಸರಕಾರದ ಅನುದಾನಗಳನ್ನು ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ವೆಚ್ಚ ಮಾಡಿರುವುದು ಕೊಳಚೆ ಪ್ರದೇಶದ ರಹವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಸ್ಮಾರ್ಟ್ಸಿಟಿಯ ಪಿಎಂಸಿ ಹಾಗೂ ಬಿಇಎಲ್ ಕಂಪನಿಗೆ ಬೆಳಗಾವಿಯ ಇತಿಹಾಸದ ಬಗ್ಗೆ ತಿಳಿದುಕೊಂಡಿಲ್ಲ. ಅವರಿಗೆ ಮನಸಿಗೆ ಬಂದ ಹಾಗೆ ಸ್ಮಾರ್ಟ್ಸಿಟಿಯ ಕಾಮಗಾರಿಗಳಿಗೆ ಅನುಮೋದನೆ ನೀಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದರೂ ಸಂಬAಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಅಲ್ಲದೆ ಬೆಳಗಾವಿ ಸ್ಮಾರ್ಟ್ಸಿಟಿಗೆ ಆಯ್ಕೆಯಾದ ಬಳಿಕ ನಗರದಲ್ಲಿರುವ ಕೊಳಚೆ ಪ್ರದೇಶದವನ್ನು ಅಭಿವೃದ್ದಿ ಪಡಿಸುವ ಯೋಜನೆ ನಿರ್ಮಾಣ ಮಾಡಿಕೊಳ್ಳಬೇಕಿತ್ತು. ಸ್ಮಾರ್ಟ್ಸಿಟಿ ಅಧಿಕಾರಿಗಳು, ಪಿಎಂಸಿ ಹಾಗೂ ಬಿಇಎಲ್ ದಿವ್ಯ ನಿರ್ಲಕ್ಷö್ಯ, ಬೇಜವಾಬ್ದಾರಿ ತನದಿಂದ ಬೆಳಗಾವಿ ನಗರದ ಅಂದವನ್ನೆ ಹದಗೇಡಿಸಿದ್ದಾರೆ ಎನ್ನುವ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ.
ಬೆಳಗಾವಿಯ ನಗರದಲ್ಲಿ ಒಟ್ಟು ೩೯ ಕೊಳಚೆ ಪ್ರದೇಶಗಳಿವೆ. ಆದರೆ ಬೆಳಗಾವಿ ಸ್ಮಾರ್ಟ್ಸಿಟಿಯ ಅಧಿಕಾರಿಗಳು ರುಕ್ಮೀಣಿ ನಗರ, ಕಸಾಯಿಗಲ್ಲಿ, ಕುಂಚಿಕರಾಡಿಯಲ್ಲಿ ೬.೫೫ ಕೋಟಿ ರು. ವೆಚ್ಚದಲ್ಲಿ ಅಭಿವೃದ್ದಿ ಪಡಿಸುತ್ತಿರುವುದು ಉಳಿದ ಕೊಳಚೆ ಪ್ರದೇಶದ ಕಡೆಗಣನೆ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಒಂಟಮೂರಿ ಕಾಲೋನಿಯಲ್ಲಿರುವ ಕೊಳಚೆ ಪ್ರದೇಶ ಅಭಿವೃದ್ದಿಯಿಂದ ವಂಚಿತಗೊAಡಿದೆ. ಸಮರ್ಪಕವಾದ ಮೂಲಭೂತ ಸೌಕರ್ಯ ಇಲ್ಲ. ಸಾರ್ವಜನಿಕ ಶೌಚಾಲಯಗಳು ತುಂಬಿ ರಸ್ತೆಗೆ ಹರಿಯುತ್ತಿವೆ. ಸಾಕಷ್ಟು ಬಾರಿ ಸಂಬAಧಪಟ್ಟ ಅಧಿಕಾರಿಗಳಿಗೆ ಇಲ್ಲಿನ ಜನರು ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಬೆಳಗಾವಿ ನಗರದ ಒಂಟಮೂರು ಕಾಲೋನಿಯ ಕೊಳಚೆ ಪ್ರದೇಶದ ಪಕ್ಕದಲ್ಲಿರುವ ರುಕ್ಮೀಣಿನಗರ ಕೊಳಚೆ ಪ್ರದೇಶವನ್ನು ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಅಧಿಕಾರಿಗಳು ಅಭಿವೃದ್ದಿ ಪಡೆಸುತ್ತಿದ್ದಾರೆ. ಕಳೆದ ೨೫ ವರ್ಷಗಳಿಂದ ಅಧಿಕ ನಾವು ಒಂಟಮೂರಿ ಕಾಲೋನಿಯ ಕೊಳಚೆ ಪ್ರದೇಶದಲ್ಲಿಯೇ ವಾಸ ಮಾಡುತ್ತಿದ್ದೇವೆ. ನಮ್ಮಗೆ ಸರಿಯಾದ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿದಿಗಳು ಚುನಾವಣೆಯಲ್ಲಿ ಮಾತ್ರ ನಮ್ಮ ಪ್ರದೇಶಕ್ಕೆ ಬಂದು ಆಶ್ವಾಸನೆ ನೀಡುತ್ತಾರೆ ವಿನಃ ಚುನಾಯಿತರಾದ ಬಳಿಕ ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎನ್ನುವ ಅಸಹಾಯಕತೆಯನ್ನು ಇಲ್ಲಿನ ಜನರು ತೋಡಿಕೊಂಡಿದ್ದಾರೆ.
———————

ಹುಸಿಯಾದ ಸ್ಮಾರ್ಟ್ಸಿಟಿ ಭರವಸೆ
———-
ಏರಿಯಾ ಬೇಸ್ಡ್ ಯೋಜನೆಯಲ್ಲಿ ದಿನದ ೨೪ ಗಂಟೆ, ನೀರು, ಇ-ಬಿಲ್ಲಿಂಗ್, ಯುಜಿಡಿ, ಸಿವೇಜ್‌ಟ್ರೀಟ್‌ಮೆಂಟ್ ಪ್ಲಾ÷್ಯಂಟ್, ನೀರಿನ ಮರುಬಳಕೆ, ಸಮರ್ಪಕ ವಿದ್ಯುತ್, ಸೋಲಾರ್ ಎನರ್ಜಿ, ಘನತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ, ಸೆಟ್‌ಲೈಟ್ ಸಂಪರ್ಕದ ೮ ಬಸ್ ಟರ್ಮಿನಲ್‌ಗಳು, ಸೈಕಲ್ ಟ್ರಾ÷್ಯಕ್, ಫುಟ್‌ಪಾತ್, ಸಿಡಿಪಿ ಅನುಷ್ಠಾನ, ಮಳೆನೀರು ಕೊಯ್ಲು, ಹಸಿರು, ಉದ್ಯಾನಗಳ ಅಭಿವೃದ್ಧಿಸಿ, ಶುದ್ಧ ಹವೆ ಇರುವಂತೆ ನೋಡಿಕೊಳ್ಳುವುದು, ಗೃಹ, ವಾಣಿಜ್ಯ ಬಳಕೆಗೆ ಸಿಎನ್‌ಜಿ ಮತ್ತು ಪಿಎನ್‌ಜಿ ಗ್ಯಾಸ್ ಪೈಪ್‌ಲೈನ್ (ಕಾಂಪೋಸ್ಟ್ ನ್ಯಾಚುರಲ್ ಗ್ಯಾಸ್/ಪ್ರೆÊಶರೈಸ್ ನ್ಯಾಚುರಲ್ ಗ್ಯಾಸ್)ಅಳವಡಿಕೆ, ಬೆಳಗಾವಿ ಒನ್ ಸೆಂಟರ್, ವಾಣಿಜ್ಯ ಕಾರಿಡಾರ್, ೫ ಕಡೆಗೆ ಬಹುಪಯೋಗಿ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ, ಕ್ರೀಡೆಗೆ ಅವಕಾಶ, ಆರ್ಟ್ಗ್ಯಾಲರಿ, ಪ್ರದರ್ಶನ ಮಳಿಗೆ, ಧ್ಯಾನ ಕೇಂದ್ರ, ವಿದ್ಯುತ್ ಮತ್ತು ಇತರೆ ಸಂಪರ್ಕ ವೈಯರ್‌ಗಳನ್ನು ನೆಲದಲ್ಲಿ ಅಳವಡಿಸುವುದು ಒಳಗೊಂಡು ಅನೇಕ ಅಭಿವೃದ್ಧಿಗಳು ಅನುಷ್ಠಾನವಾಗುತ್ತವೆ ಎಂದು ಕೊಂಡಿದ್ದ ಜನತೆಗೆ ಸ್ಮಾರ್ಟ್ಸಿಟಿಯ ಯೋಜನೆಯನ್ನ ಕಂಡು ನೀರಾಸೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
—————–
ಹೇಳಿಕೆ
ಕೇಂದ್ರ ಸರಕಾರದ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಕೊಳಚೆ ಪ್ರದೇಶ ಅಭಿವೃದ್ದಿ ಪಡಿಸುವಲ್ಲಿ ಸ್ಮಾರ್ಟ್ಸಿಟಿಯ ಅಧಿಕಾರಿಗಳು, ಜನಪ್ರತಿನಿದಿಗಳು ಸಂಪೂರ್ಣ ವಿಫಲರಾಗಿದ್ದಾರೆ. ರುಕ್ಮೀಣಿನಗರದ ಕೊಳಚೆ ಪ್ರದೇಶವನ್ನು ಅಭಿವೃದ್ದಿ ಪಡೆಸಿದ ಹಾಗೆ ಒಂಟಮೂರಿಯಲ್ಲಿರುವ ಕೊಳಚೆ ಪ್ರದೇಶವನ್ನು ಅಭಿವೃದ್ದಿ ಪಡಿಸಬೇಕು.
-ಹನುಮಂತಪ್ಪ ಲಮಾಣಿ, ಒಂಟಮೂರಿ ಕಾಲೋನಿ ರಹವಾಸಿ

loading...