ಬೈಲಹೊಂಗಲ : ಅದ್ದೂರಿ ರಾಜ್ಯೊತ್ಸವ ಆಚರಣೆ

0
47

ರವಿಕಿರಣ ಯಾತಗೇರಿ
ಬೈಲಹೊಂಗಲ 02: “ ಹಚ್ಚೇವು ಕನ್ನಡದ ದೀಪ, ಕರುನಾಡ ದೀಪ ಸಿರಿನುಡಿಯ ದೀಪ, ಒಲವೆತ್ತಿ ತೋರುವಾ ದೀಪ” ಕನ್ನಡ ನಾಡು ನುಡಿಯ ಹಬ್ಬ ಕನ್ನಡ ರಾಜ್ಯೋತ್ಸವವನ್ನು ಇಲ್ಲಿನ ತಾಲೂಕಾ ಆಡಳಿತ ಇವತ್ತು ಅತೀ ವಿಜೃಂಭನೆಯಿಂದ ಆಚರಿಸಿತು.
ಮುಂಜಾನೆ ಪುರಸಭೆ ಆವರಣದಲ್ಲಿ ಉಪವಿಭಾಗಾಧಿಕಾರಿಗಳಿಂದ ಕನ್ನಡ ಧ್ವಜಾರೋಹನ ನೆರವೇರಿಸುವ ಮೂಲಕ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಅದ್ದೂರಿ ಚಾಲನೆ ನೀಡಲಾಯಿತು, ನಂತರ ತಾಯಿ ಭುವನೇಶ್ವರಿ ದೇವಿಯ ಮೂರ್ತಿಗೆ ಪೂಜೆಯನ್ನು ನೆರವೇರಿಸಲಾಯಿತು. ರಾಜ್ಯೊತ್ಸವದ ಪ್ರಮುಖ ಆಕರ್ಷಣೆಯಾದ ಶಾಲಾ ವಿದ್ಯಾರ್ಥಿಗಳ ವಿವಿಧ ರೂಪಕಗಳ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಗರದ ರಾಣಿ ಚೆನ್ನಮ್ಮ ಸಮಾಧಿ ಸ್ಥಳಕ್ಕೆ ಬಂದು ತಲುಪಿತು. ಕೆ.ಎಸ್ ಕೌಜಲಗಿಯವರಿಂದ ಉಪನ್ಯಾಸ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಶಾಸಕ ಡಾ|| ವಿಶ್ವನಾಥ ಪಾಟೀಲ, ವಿಧಾನಪರಿಷತ ಸದಸ್ಯ ಮಹಾಂತೇಶ ಕೌಜಲಗಿ ಪುರಸಭೆ ಅಧ್ಯಕ್ಷೆ ಶೋಭಾ ವಾಲಿ, ಪುರಸಭೆಯ ಎಲ್ಲ ಸದಸ್ಯರು, ಎಲ್ಲ ಸರಕಾರಿ ಅಧಿಕಾರಿ ವರ್ಗದವರು ಹಾಗೂ ಕನ್ನಡ ಪರ ಸಂಘಟಣೆಗಳು ಕನ್ನಡಾಭಿಮಾನಿಗಳು, ನಗರದ ಸಾರ್ವಜನಿಕರು ಹಾಜರಿದ್ದರು.
ಕರ್ನಾಟಕ ನವ ನಿರ್ಮಾಣ ಪಡೆಯಿಂದ ರಾಜ್ಯೋತ್ಸವ :
“ಸಿದ್ದವೋ ಸಿದ್ದ ಕನ್ನಡಕ್ಕೆ ಸಿದ್ದ” ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ನಾಡಲಿ ಮೆಟ್ಟಬೇಕು” ಕನ್ನಡವೇ ನಮ್ಮ ಅಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು” ಎಂದು ತಾಲೂಕಿನ ನವ ನಿರ್ಮಾಣ ಪಡೆಯು ತನ್ನ ಕಾರ್ಯಕರ್ತರು, ಕನ್ನಡಾಭಿಮಾನಿಗಳ ಮಧ್ಯೆ ವಿಶಿಷ್ಟ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಿಸಿತು. ನವ ನಿರ್ಮಾಣ ಪಡೆಯ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ತುರಮರಿ ಹಾಗೂ ತಾಲೂಕಾ ಅಧ್ಯಕ್ಷ ಶಿವಾನಂದ ಇಂಚಲ ನೇತೃತ್ವದಲ್ಲಿ ಅದ್ದೂರಿಯಾಗಿ ಕನ್ನಡದ ಹಬ್ಬವನ್ನು ಆಚರಿಸಿತು. ಬೆಳಿಗ್ಗೆ 10ಕ್ಕೆ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಸಾರೋಟದಲ್ಲಿನ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಡಾಲ್ಬಿಯಲ್ಲಿನ ಕನ್ನಡಾಭಿಮಾನದ ಹಾಡು “ಈ ಕನ್ನಡ ಮಣ್ಣನು ಮರಿಬೇಡಾ ಓ ಅಭಿಮಾನಿ, ಕನ್ನಡ ರೋಮಾಂಚನವೀ ಕನ್ನಡ ಹಾಡಿಸು ಕೇಳಿಸು ಪ್ರೀತಿಸು ”ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕನ್ನಡ ನುಡಿ”ಎಂಬ ಮುಂತಾದ ಕನ್ನಡಾಭಿಮಾನದ ಹಾಡುಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯ ದಾರಿಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕ.ನ.ನಿ ಪಡೆಯ ಕಾರ್ಯಕರ್ತರು, ಕನ್ನಡಾಭಿಮಾನಿಗಳು ಕನ್ನಡದ ಜಯ ಘೋಷಗಳ ಜೊತೆಗೆ ಹಾಡುಗಳಿಗೆ ಕನ್ನಡ ಧ್ವಜದೊಂದಿಗೆ ನೃತ್ಯ ಮಾಡುವ ಸನ್ನಿವೇಶ ಎಲ್ಲೆಡೆ ಕಾಣುಸಿಗುತ್ತಿತ್ತು ಮೂಲಕ ತಮ್ಮ ಕನ್ನಡಾಭಿಮಾನವನ್ನು ಮೆರೆದರು. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಕನ್ನಡ ಅಭಿಮಾನಿಗಳು ಸಾರ್ವಜನಿಕರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here