ಬ್ರೆಜಿಲ್ ಫಿಪಾ ಪಯಣ ಅಂತ್ಯ, ಸೆಮಿಸ್ಗೆ ಲಗ್ಗೆ ಇಟ್ಟ ಬೆಲ್ಜಿಯಂ

0
29

ಮಾಸ್ಕೋ: ಫಿಫಾ ವಿಶ್ವಕಪ್​ನ ಎರಡನೇ ಕ್ವಾರ್ಟರ್​ ಫೈನಲ್​ ಪಂದ್ಯ ಬ್ರೆಜಿಲ್​ ತಂಡವನ್ನು 2-1ರ ಅಂತರದಲ್ಲಿ ಸೋಲಿಸಿದ ಬೆಲ್ಜಿಯಂ ಸೆಮೀಸ್​ ಹಂತಕ್ಕೆ ಸ್ಥಾನ ಪಡೆದಿದೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಕ್ವಾರ್ಟರ್​ ಫೈನಲ್​ ಪಂದ್ಯದ ಆರಂಭದಿಂದಲೇ ಬೆಲ್ಜಿಯಂ ಹಿಡಿತ ಸಾಧಿಸಿತ್ತು. ಬೆಲ್ಜಿಯಂ ಪರ ಫೆರ್ನಾಂಡಿನ್ಹೋ 13ನೇ ನಿಮಿಷದಲ್ಲಿ ಗೋಲ್​ ದಾಖಲಿಸುವ ಮೂಲಕ ತಂಡ ಮುನ್ನಡೆ ಸಾಧಿಸುವಂತೆ ಮಾಡಿದರು.
31 ನೇ ನಿಮಿಷದಲ್ಲಿ ಬೆಲ್ಜಿಯಂನ ಮತ್ತೊಬ್ಬ ಆಟಗಾರ ಕೆವಿನ್​ ಡಿ ಬ್ರೂನೆಯ ಕಾಲಿನಿಂದ ಬಂದ ಚೆಂಡು ಗೋಲ್​ ಕೀಪರನ್ನು ವಂಚಿಸಿ ನೇರವಾಗಿ ಗೋಲ್​ಪೋಸ್ಟ್​ನ್ನು ಸೇರಿತ್ತು. ಇದರೊಂದಿಗೆ ಪ್ರಥಮಾರ್ಧ ಮುಗಿಯುವುದಕ್ಕೂ ಮೊದಲೇ 2-0 ಅಂತರದಲ್ಲಿ ಬ್ರೆಜಿಲ್ ವಿರುದ್ಧ ಮುನ್ನಡೆ ಪಡೆದುಕೊಂಡಿತು.

ದ್ವಿತಿಯಾರ್ಧದಲ್ಲಿ ಹೆಚ್ಚು ರಕ್ಷಣಾತ್ಮಕವಾದ ಆಟಕ್ಕೆ ಮೊರೆ ಹೋದ ಬೆಲ್ಜಿಯಂ ಎದುರಾಳಿ ತಂಡ ಗೋಲ್​ ಗಳಿಸದೇ ಇರುವಂತೆ ಎಚ್ಚರ ವಹಿಸಿತು. ಆದರೆ ಪಂದ್ಯದ 76 ನೇ ನಿಮಿಷದಲ್ಲಿ ಬ್ರೆಜಿಲ್​ನ ರೆನಾಟೋ ಆಗುಸ್ಟೋ ಗೋಲ್​ ಗಳಿಸುವುದರ ಮೂಲಕ ಗೋಲ್​ನ ಅಂತರವನ್ನು 2-1 ಕ್ಕೆ ಕುಗ್ಗಿಸಿದರು.

ಆದರೆ, ಇದರಿಂದ ಎಚ್ಚೆತ್ತಕೊಂಡ ಬೆಲ್ಜಿಯಂ ತನ್ನ ಕೋಟೆಯನ್ನು ಮತ್ತಷ್ಟು ಭದ್ರವಾಗಿಸಿತು. ಅದಾದ ಮೇಲೆ ಬ್ರೆಜಿಲ್​ ಯಾವುದೇ ಕಾರಣಕ್ಕೂ ಗೋಲ್​ ಗಳಿಸದಂತೆ ಬೆಲ್ಜಿಯಂ ಎಚ್ಚರ ವಹಿಸಿತು. ಈ ಮೂಲಕ ಪೂರ್ಣಾವಧಿ ಮುಗಿಯುವ ವೇಳೆ ಬೆಲ್ಜಿಯಂ, ಬ್ರೆಜಿಲ್​ ವಿರುದ್ಧ 2-1 ಅಂತರದಲ್ಲಿ ಗೆದ್ದು ಬೀಗುತ್ತಿತ್ತು. ಈ ಮೂಲಕ ಬೆಲ್ಜಿಯಂ ತಂಡ 2018ರ ಫಿಫಾ ವಿಶ್ವಕಪ್​ ಫುಟ್ಬಾಲ್​ನ ಸೆಮಿಫೈನಲ್​ಗೆ ಲಗ್ಗೆಇಟ್ಟಿದೆ.

loading...