ಭಾರತದಲ್ಲಿ ಮಹಿಳೆಯರಿಗೆ ಗೌರವವಿಲ್ಲ : ಸಾನಿಯಾ ಮಿರ್ಜಾ

0
30

ನವದೆಹಲಿ, ನ.27- ಭಾರತದಲ್ಲಿ ಮಹಿಳೆಯರಿಗೆ ಗೌರವಾದರಗಳಿಲ್ಲ ಎಂದು ಹೇಳುವ ಮೂಲಕ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೊಸದೊಂದು ವಿವಾದವನ್ನು ಸೃಷ್ಟಿಸಿದ್ದಾರೆ.
ಮಹಿಳೆ ಬಗ್ಗೆ ಸದ್ಭಾವನಾ ರಾಯಭಾರಿಯಾಗಿ ವಿಶ್ವಸಂಸ್ಥೆಯಿಂದ ನೇಮಕಗೊಂಡಿರುವ ಭಾರತದ ಮಗಳು ಹಾಗೂ ಪಾಕಿಸ್ತಾನದ ಸೊಸೆ ಸಾನಿಯಾ ಮಿರ್ಜಾ, ಭಾರತದಲ್ಲಿ ಲಿಂಗ ಅಸಮಾನತೆ ಅತಿಯಾಗಿದ್ದು, ನಾನು ಸಾನಿಯಾಮಿರ್ಜಾ ಆಗಿ (ಹೆಣ್ಣಾಗಿ) ಇಲ್ಲಿ ಬದುಕುವುದು ಕಷ್ಟವಾಗುತ್ತಿದೆ. ಭಾರತದಲ್ಲಿ ಹೆಣ್ಣಿಗೆ ಪ್ರಸಕ್ತ ಗೌರವ-ಮನ್ನಣೆ ಇಲ್ಲವಾಗಿದ್ದು, ಲಿಂಗ ಅಸಮಾನತೆ ತೊಡೆಯುವ ಮತ್ತು ಸಾಂಸ್ಕøತಿಕವಾದ ಬದಲಾವಣೆ ತರುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಒಬ್ಬ ಸ್ಟಾರ್ ಆಟಗಾರ್ತಿಯಾಗಿ ಭಾರತದಲ್ಲಿ ತಾನು ಎದುರಿಸಿದ ಸಂಕಷ್ಟಗಳು, ಸವಾಲುಗಳು ಹಾಗೂ ತಾನು ಅನುಭವಿಸಿದ ಅವಮಾನಗಳ ಬಗ್ಗೆ ವಿವರಿಸಿದ ಸಂದರ್ಭ ಸಾನಿಯಾ ಈ ಹೇಳಿಕೆ ನೀಡಿದ್ದಾರೆ.
ನಾನು ಮಹಿಳೆಯಾದ್ದರಿಂದಲೇ ದೇಶದಲ್ಲಿ ಅನೇಕ ಕಷ್ಟ-ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಒಂದು ವೇಳೆ ನಾನು ಪುರುಷ ಆಟಗಾರನಾಗಿದ್ದರೆ ಎಷ್ಟೋ ವಿವಾದಗಳು ಸೃಷ್ಟಿಯಾಗುತ್ತಲೇ ಇರಲಿಲ್ಲವೇನೋ ಎಂದಿದ್ದಾರೆ.
ನನ್ನ ಪ್ರಕಾರ, ಈ ಸಂಸ್ಕøತಿ ಬದಲಾದರೆ ಭಾರತದಲ್ಲಿ ಇನ್ನೂ ಅನೇಕ ಮಹಿಳೆಯರು ಕ್ರೀಡಾಕ್ಷೇತ್ರಕ್ಕೆ ಪ್ರವೇಶ ಮಾಡಲಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ಇದೆ. ಕೇಂದ್ರ ಕ್ರೀಡಾ ಸಚಿವರಾಗಿರುವ ಶರಭಾನಂದ ಸೋನೋವಾಲ್ ಈ ಬಗ್ಗೆ ಹೆಚ್ಚು ಆದ್ಯತೆ ನೀಡಿದ್ದಾರೆಂಬುದು ನನಗೆ ಗೊತ್ತು.
ಸರ್ಕಾರ ಕೂಡ ಲಿಂಗ ಅಸಮಾನತೆ ಬಗ್ಗೆ ಹೆಚ್ಚು ಒತ್ತು ಕೊಟ್ಟಿರುವುದು ಸಂತಸದ ವಿಷಯವಾಗಿದೆ. ಮಾಧ್ಯಮಗಳೂ ಕೂಡ ಈ ಬಗ್ಗೆ ಸಾಕಷ್ಟು ಕಾಳಜಿ ವಹಿಸಿವೆ ಎಂದು ಸಾನಿಯಾ ಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣದ ಮಹಿಳೆಯೊಬ್ಬಳನ್ನು ವಿಶ್ವಸಂಸ್ಥೆಯ ಮಹಿಳಾ ಸದ್ಭಾವನಾ ರಾಯಭಾರಿಯನ್ನಾಗಿ ಇದೇ ಮೊದಲ ಬಾರಿಗೆ ನೇಮಕ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಸಾನಿಯಾ ಹೇಳಿದ್ದಾರೆ.
ಮಹಿಳೆಯರೂ ಕೂಡ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕು. ಧೈರ್ಯದಿಂದ ಸವಾಲುಗಳನ್ನೆದುರಿಸಬೇಕು. ಮನಸ್ಥಿತಿಗಳು ಬದಲಾಗಬೇಕು. ತಮ್ಮಲ್ಲಿನ ಮೌಲ್ಯಗಳನ್ನು ಮೊದಲು ಮಹಿಳೆ ಅರಿಯಬೇಕು.
ಡಿಸೆಂಬರ್ 6ರಂದು ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಆಡಲು ತಾನು ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ ಸಾನಿಯಾ, ನಾನು ಈ ಕ್ಷಣದಿಂದಲೇ ಪಂದ್ಯಕ್ಕಾಗಿ ಅಭ್ಯಾಸ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

loading...

LEAVE A REPLY

Please enter your comment!
Please enter your name here