ಭಾರತದ ಸರಣಿ ಗೆಲುವಿನ ರೂಟ್ ಬ್ರೆಕ್

0
18

ಲೀಡ್ಸ್​: ಜೋ ರೂಟ್​ ಸತತ ಎರಡನೇ ಶತಕ ಹಾಗೂ ನಾಯಕ ಇಯಾನ್​ ಮೋರ್ಗನ್​ ಅಜೇಯ ಅರ್ಧಶತಕದ ಬಲದಿಂದ ಅತಿಥೇಯ ಇಂಗ್ಲೆಂಡ್​ ವಿರುದ್ಧ ನಡೆದ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ೮ ವಿಕೆಟ್​ಗಳಿಂದ ಮಣಿಸಿದೆ. ಈ ಮೂಲಕ ಭಾರತ ಮೂರು ಪಂದ್ಯಗಳ ಸರಣಿಯನ್ನು ೨-೧ ಅಂತರದಿಂದ ಕೈಚೆಲ್ಲಿದೆ.
ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಆರಂಭಿಕ ರೋಹಿತ್ ಶರ್ಮಾ (೨) ವಿಕೆಟ್​ನ್ನು ಬೇಗನೆ ಕಳೆದುಕೊಂಡಿತು. ಬಳಿಕ ನಾಯಕ ಕೊಹ್ಲಿ ಹಾಗೂ ಶಿಖರ್ ಧವನ್ ೨ನೇ ವಿಕೆಟ್​ಗೆ ೭೧ ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ನೆರವಾದರು. ಈ ವೇಳೆಗೆ ಧವನ್ (೪೪) ರನ್​ ನೀಡಿ ಔಟಾದರು.
ಬಳಿಕ ಕೆ.ಎಲ್​.ರಾಹುಲ್​ ಬದಲು ತಂಡದಲ್ಲಿ ಸ್ಥಾನ ಪಡೆದ ದಿನೇಶ್​ ಕಾರ್ತಿಕ್ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಲಿಲ್ಲ. ಕಾರ್ತಿಕ್ ಕೇವಲ ೨೧​ರನ್​ಗೆ ವಿಕೆಟ್​ ಒಪ್ಪಿಸಿದರು.​ ಈ ವೇಳೆ ಉತ್ತಮವಾಗಿ ಆಡುತ್ತಿದ್ದ ನಾಯಕ ಕೊಹ್ಲಿ ವಿರಾಟ್ ಕೊಹ್ಲಿ ೭೧ ರನ್​ ಬಾರಿಸಿ ರಶೀದ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ವಿರಾಟ್​ ವಿಕೆಟ್​ ಪತನದ ನಂತರ ಬಂದ ಸುರೇಶ್​ ರೈನಾ ಕೇವಲ ೧ ರನ್​ ಗಳಿಸಿ ಪೆವಿಲಿಯನ್​ ಸೇರಿದರು.
ನಂತರ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ ಕೂಡ ೨೧ ರನ್​ಗೆ ಔಟ್​ ಆಗಿದ್ದು ತಂಡದ ಉತ್ತಮ ಮೊತ್ತದ ನಿರೀಕ್ಷೆಯನ್ನು ಹುಸಿಯಾಗಿಸಿತು. ಈ ನಡುವೆ ಮಾಜಿ ನಾಯಕ ಎಂ.ಎಸ್ ಧೋನಿ ೪೨ ರನ್ ಗಳಿಸಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ಬೌಲರ್​ಗಳಾದ ಭುವನೇಶ್ವರ್ ಕುಮಾರ್ (೨೧) ಹಾಗೂ ಶಾರ್ದೂಲ್ ಠಾಕೂರ್ (೨೨) ತಂಡದ ಮೊತ್ತವನ್ನು ೨೫೦ರ ಗಡಿ ದಾಟಿಸಿದರು. ಅಂತಿಮವಾಗಿ ಭಾರತ ೫೦ ಓವರ್​ಗಳಲ್ಲಿ ೮ ವಿಕೆಟ್​ ನಷ್ಟಕ್ಕೆ ೨೫೬ ರನ್​ ಗಳಿಸಿತು
ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಆದಿಲ್ ರಶೀದ್ ಮತ್ತಿ ಡೆವಿಡ್ ವಿಲ್ಲಿ ೩ ವಿಕೆಟ್ ಕಿತ್ತು ಗಮನ ಸೆಳೆದರು.
ಬಳಿಕ ೨೫೭ ರನ್​ಗಳ ಗುರಿ ಬೆನ್ನತ್ತಿದ್ದ ಆಂಗ್ಲರಿಗೆ ಜಾನಿ ಬೇರ್ಸ್ಟೋ ಹಾಗೂ ಜೇಮ್ಸ್ ವಿನ್ಸ್​ ಅಬ್ಬರದ ಆರಂಭ ಒದಗಿಸಿದರು. ೭ ಬೌಂಡರಿ ಸಿಡಿಸಿದ ಜಾನಿ ಬೇರ್ಸ್ಟೋ ಕೇವಲ ೧೩ ಎಸೆತಗಳಲ್ಲಿ ೩೦ ರನ್​ ಗಳಿಸಿ ಶಾರ್ದುಲ್​ ಠಾಕುರ್​ ಬೌಲಿಂಗ್​ನಲ್ಲಿ ವಿಕೆಟ್​​ ಒಪ್ಪಿಸಿದರು. ಇನ್ನು ಜೇಮ್ಸ್ ವಿನ್ಸ್​ ೨೭ ರನ್​ ಬಾರಿಸಿ ರನ್​​ ಔಟ್​ ಆದರು.
ಬಳಿಕ ಮಧ್ಯಮ ಕ್ರಮಾಂಕದ ಆಟಗಾರ ಜೋ ರೂಟ್ ಸತತ ಎರಡನೇ ಶತಕ (೧೦೦)​​ ಹಾಗೂ ನಾಯಕ ಇಯಾನ್​ ಮೋರ್ಗನ್ (೮೮)​ ಅರ್ಧಶತಕ ಗಳಿಸಿ ಭಾರತದ ರಿಸ್ಟ್ ಸ್ಪಿನ್ನರ್ಸ್ ಸೇರಿದಂತೆ ಎಲ್ಲ ಬೌಲರ್​ಗಳ ಬೆವರಿಳಿಸಿದರು. ಈ ಜೋಡಿ ನಿರಾಯಾಸವಾಗಿ ೩ನೇ ವಿಕೆಟ್​ಗೆ ೧೮೬ ರನ್​ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು. ಅಂತಿಮವಾಗಿ ಇಂಗ್ಲೆಂಡ್​ ೪೪.೩ ಓವರ್​ಗಳಲ್ಲಿ ಗೆಲುವಿನ ನಗೆಬೀರಿತು.
ಟೀಂ ಇಂಡಿಯಾ ಪರ ಶಾರ್ದುಲ್​ ಠಾಕೂರ್​ ಏಕೈಕ ವಿಕೆಟ್ ಪಡೆದರು. ಈ ಗೆಲುವಿನ ಮೂಲಕ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯನ್ನು ೨-೧ ಅಂತರದಿಂದ ವಶಪಡಿಸಿಕೊಂಡಿತು. ಸ್ಪಿನ್ನರ್​ ಆದಿಲ್ ರಶೀದ್​ ಪಂದ್ಯ ಪುರುಷ ಹಾಗೂ ಶತಕವೀರ ಜೋ ರೂಟ್​ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

loading...