ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ

0
7

ನವದೆಹಲಿ:- ಕಪಿಲ್‌ ದೇವ್‌ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡ ಬಲಿಷ್ಠ ವೆಸ್ಟ್‌ ಇಂಡೀಸ್‌ ತಂಡವನ್ನು 43 ರನ್‌ಗಳಿಂದ ಮಣಿಸಿ 1983ರಲ್ಲಿ ಚೊಚ್ಚಲ ವಿಶ್ವಕಪ್‌ ಗೆದ್ದು ವಿಶ್ವ ಕ್ರಿಕೆಟ್‌ನಲ್ಲಿ ನೂತನ ಮೈಲಿಗಲ್ಲು ಸೃಷ್ಠಿಸಿದ್ದ ಸುವರ್ಣ ಗಳಿಗೆಗೆ ಇಂದಿಗೆ 36 ವರ್ಷಗಳು ತುಂಬಿವೆ.

1983ರ ಜೂನ್‌ 25 ರಂದು ಲಂಡನ್‌ನ ಲಾರ್ಡ್ಸ್ ಅಂಗಳದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ 54.4 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 183 ರನ್‌ ಗಳಿಸಿತ್ತು. ಬಳಿಕ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ 52 ಓವರ್‌ಗಳಿಗೆ 140 ರನ್‌ಗಳಿಗೆ ಆಲೌಟ್‌ ಆಗಿತ್ತು. ಈ ಪಂದ್ಯದಲ್ಲಿ ಮದನ್ ಲಾಲ್‌ ಹಾಗೂ ಎಂ. ಅಮರ್‌ನಾಥ್‌ ತಲಾ ಮೂರು ವಿಕೆಟ್‌ ಕಬಳಿಸಿದ್ದರು.

ಅಂದು ಲಾರ್ಡ್ಸ್ ನಲ್ಲಿ ಭಾರತ ತಂಡದ ನಿರ್ಮಿಸಿದ್ದ ಸಾಧನೆಗೆ ಇದೀಗ 36ರ ವರ್ಷಗಳು ತುಂಬಿವೆ. ಈ ಕುರಿತು ಬಿಸಿಸಿಐ ಕಪಿಲ್‌ದೇವ್‌ ವಿಶ್ವಕಪ್‌ ಟ್ರೋಫಿ ಸ್ವೀಕರಿಸುತ್ತಿರುವ ಫೋಟೊವನ್ನು ತನ್ನ ಟ್ವಿಟರ್‌ನಲ್ಲಿ ಶೇರ್‌ ಮಾಡಿದೆ. “ಇದೇ ದಿನ 1983ರಲ್ಲಿ ಭಾರತ ಲಂಡನ್‌ನ ಲಾರ್ಡ್ಸ್ ಅಂಗಳದಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿತ್ತು” ಎಂದು ಟ್ವಿಟ್‌ ಮಾಡಿದೆ.

ವಿಶ್ವಕಪ್‌ ಗೆದ್ದ ಭಾರತ ತಂಡವನ್ನು ಆಲ್ರೌಂಡರ್‌ ಕಪಿಲ್‌ ದೇವ್‌ ಮುನ್ನಡೆಸಿದ್ದರು. ಇವರ ಜತೆ ಸುನೀಲ್‌ ಗವಾಸ್ಕರ್, ಕೆ. ಶ್ರೀಕಾಂತ್‌, ಮಹೀಂದರ್‌ ಅಮರ್‌ನಾಥ್‌, ಯಶ್‌ಪಾಲ್‌ ಶರ್ಮಾ, ಎಸ್‌.ಎಂ ಪಾಟೀಲ್‌, ಕೀರ್ತಿ ಅಜಾದ್‌, ರೋಜರ್‌ ಬಿನ್ನಿ, ಮದನ್‌ ಲಾಲ್‌, ಸೈಹದ್‌ ಕಿರ್ಮಾನಿ, ಬಲ್ವಿಂದರ್‌ ಸಂಧು ತಂಡದಲ್ಲಿ ಇದ್ದರು.

1975ರಿಂದ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಭಾಗವಹಿಸಿತ್ತು. ಆದರೆ, ಮೊದಲ ಬಾರಿ 1983ರಲ್ಲಿ ಚೊಚ್ಚಲ ಚಾಂಪಿಯನ್ ಆಗಿ ಬೀಗಿತ್ತು. 1975 ಹಾಗೂ 1979 ಎರಡು ವಿಶ್ವಕಪ್‌ ಗೆದ್ದಿದೆ. 1983ರಲ್ಲಿ ಒಂದು ಬಾರಿ ರನ್ನರ್‌ ಅಪ್‌ ಆಗಿತ್ತು. ಭಾರತ 1983 ಹಾಗೂ 2011ರಲ್ಲಿ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಒಟ್ಟು ಎರಡು ಬಾರಿ ವಿಶ್ವಕಪ್‌ ಜಯಿಸಿದೆ.

ಪ್ರಸ್ತುತ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ್ದು. ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮುಂದಿನ ಪಂದ್ಯದ ಗುರುವಾರ ವೆಸ್ಟ್‌ ಇಂಡೀಸ್‌ ವಿರುದ್ಧ ಸೆಣಸಲಿದೆ.

loading...