ಭಾರತ್ ಬಂದ್ ಕರೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

0
12

ಬಾಗಲಕೋಟ : ಕೇಂದ್ರ ಸರಕಾರದ ಪೆಟ್ರೊÃಲ್, ಡಿಜೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಭಾರತ್ ಬಂದ್ ಕರೆಗೆ ಬಾಗಲಕೋಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿತು.
ಮುಂಜಾನೆಯಿಂದ ಮದ್ಯಾಹ್ನದ ವರೆಗೆ ಗದ್ದನಕೇರಿ ಕ್ರಾಸ್, ನವನಗರ, ಬಾಗಲಕೋಟ ಸೇರಿದಂತೆ ಮುಂತಾದ ಕಡೆಗಳಿಂದ ಸಾರಿಗೆ ಸಂಸ್ಥೆ ಹೊರತುಪಡಿಸಿ ಉಳಿದೆಲ್ಲ ಖಾಸಲಿ ವಾಹನಗಳು ಸಾರ್ವಜನಿಕರನ್ನು ಹೊತ್ತು ತರುತ್ತಿರುವ ದೃಷ್ಯ ಕಂಡುಬಂದಿತು. ರಸ್ತೆ ಬದಿ ವ್ಯಾಪಾರಸ್ಥರು ಎಂದಿನಂತೆ ತಮ್ಮ ವ್ಯಾಪಾರ ಪ್ರಾರಂಭಿಸಿದ್ದರು, ದೊಡ್ಡ ದೊಡ್ಡ ಅಂಗಡಿ ಮುಂಗಟ್ಟುಗಳು, ಶೋರೂಮ್‌ಗಳು ಮಾತ್ರ ಬಂದ್ ಮಾಡಲಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಬಂದ್ ಬಾಗಶಃ ಮಿಶ್ರ ಫಲ ನೀಡಿದೆ.
ಕಾಂಗ್ರೆÃಸ್ನ ವಿಧಾನ ಸಭೆ ಸದಸ್ಯ ಎಸ್.ಆರ್.ಪಾಟೀಲ, ಸೈಕಲ್ ಮೇಲೆ ಆಗಮಿಸಿ ಸೈಕಲ್ ಸವಾರಿ ಮಾಡುವ ಮೂಲಕ ಕೇಂದ್ರ ಸರಕಾರದ ಪೆಟ್ರೊÃಲ್ ಬೆಲೆ ಏರಿಕೆಯನ್ನು ಪ್ರತಿಭಟಿಸಿದರು.

loading...