ಭಾರತ ಉಳಿಯಲಿ

0
19

ನರೇಂದ್ರ ಮೋದಿ ಒಂದೊಮ್ಮೆ ಪ್ರಧಾನಮಂತ್ರಿಯಾದರೆ ಗಾಂಧಿ ನೆಹರು ಕಂಡ ಕನಸಿನ ಭಾರತ ಉಳಿಯುವದಿಲ್ಲ ಎಂದು ಜ್ಞಾನಪೀಠಿ ಯು.ಆರ್ ಅನಂತಮೂರ್ತಿ ಹೇಳಿರುವದು ಅತ್ಯಂತ ವಿಷಾದಕರವಾಗಿದೆ. ಭಾರತೀಯ ಜನತಾ ಪಕ್ಷವೆಂದರೆ ಜಾತಿಯ ಪಕ್ಷ ಅದು ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಈ ಪಕ್ಷ ಉಪಯೋಗವಿಲ್ಲ ಇತಂಹ ಪಕ್ಷದ ವ್ಯಕ್ತಿ ಪ್ರಧಾನಿಯಾದರೆ ದೇಶಕ್ಕೆ ಉಳಿಗಾಲವಿಲ್ಲ ಎಂಬ ಅಭಿಪ್ರಾಯ ಎಳ್ಳಷ್ಟೂ ಸರಿಯಲ್ಲ ಈ ಹಿಂದೊಮ್ಮೆ  ಭಾರತೀಯ ಜನತಾ ಪಕ್ಷವೇ ಅಟಲ್ ಬಿಹಾರಿ ವಾಜಪೇಯ ಸರಕಾರ ಪೂರ್ಣ ಆಡಳಿತ ನಡೆಸಿದ್ದನ್ನು ಕಂಡಿದ್ದೇವೆ ಆಗ ಆಗಿರುವ ಅಭಿವೃದ್ದಿ ಪರ ಕೆಲಸಗಳು ನಂತರ ಬಂದ ಯುಪಿಎ ಸರಕಾರದಲ್ಲಿ ಆಗಲೇ ಇಲ್ಲ ದೇಶದ ಜನತೆಯ ಗಮನವನ್ನು ಬೇರೆಡೆಗೆ ಸೆಳೆದು ಅನೇಕ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದೆ. ಅಡ್ಡಾದಿಡ್ಡಿ ಬೆಲೆ ಕದನ ವಿರಾಮ ಉಲ್ಲಂಘನೆ, ಚೀನಾದ ತೀರದ ಭೂ ದಾಹಕ್ಕೆ  ತಲೆಕೂಡುವ ಯತ್ನ ಮಹತ್ವದ ಯೋಜನೆಗಳ ನಿಲುಗಡೆ, ಹೆದ್ದಾರಿಗಳ ನಿರ್ಮಾಣಗಳಲ್ಲಿ ವಿಳಂಬ ಇವು ಯುಪಿಎ ಸರಕಾದ ಸಾಧನೆಗಳೆಂದು ಹೇಳಲು ಸಾಧ್ಯವೇ ?ಕಳೆದ ಒಂದೂವರೆ ತಿಂಗಳಗಳಿಂದ ದೇಶದಲ್ಲಿ ರೂಪಾಯಿಯ ಅಪಮೌಲ್ಯ ಸಾಮಾನ್ಯಜನ ಸಹಿತ ನಾಚಿಕೆ ಪಡುವಷ್ಟು ಮಟ್ಟದಲ್ಲಿ ಇಳಿದು ಹೋಗಿದೆ. ವಿದೇಶಗಳಲ್ಲಿ ಹಣಕಾಸು ವ್ಯವಸ್ಥೆಯ ದೃಷ್ಟಿಯಿಂದ ಭಾರತದ ಮಾನ ಕಾಸಿಗೆ ಪಂಚೆರು ಆಗಿದೆ. ಇದು ಸಹಿತ ಯುಪಿಎ ಸರಕಾರದ ಸಾಧನೆ ಆಗಿದೆ ಇವೆಲ್ಲಾ ನಿವಾರಿಸಲು ಹೊಸ ಆಡಳಿತದ ವ್ಯವಸ್ಥೆ ಅವಶ್ಯವಾಗಿದೆಂಬುವದನ್ನು ಅನಂತಮೂರ್ತಿಯಂತಹ ಜ್ಞಾತಿಗಳು ಅರಿತುಕೊಳ್ಳುವದು ಸೂಕ್ತ

loading...

LEAVE A REPLY

Please enter your comment!
Please enter your name here