ಭಾರತ ತಂತ್ರಜ್ಞಾನದಲ್ಲಿ ಉತ್ತಮ ಸ್ಥಾನವಿದೆ: ಗಣೇಶ

0
4

ಕನ್ನಡಮ್ಮ ಸುದ್ದಿ-ಬೆಳಗಾವಿ: ಭಾರತವು ಮಾಹಿತಿ ತಂತ್ರ ಜ್ಞಾನದ ಬಳಕೆಯಲ್ಲಿ ಉತ್ತಮ ಸ್ಥಾನದಲ್ಲಿದೆ. ಯುವಕರು ತಮ್ಮಲ್ಲಿರುವ ತಾಂತ್ರಿಕ ಕೌಶಲ್ಯಗಳ ಛಾಯೆಯನ್ನು ತೋರಿಸುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಕನ್ನಡ ಚಲನಚಿತ್ರ ನಿರ್ಮಾಪಕ ಗಣೇಶ ಪಾಟೀಲ ಹೇಳಿದರು. ಅವರು ನಗರದ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ ಗಣಕವಿಜ್ಞಾನ ವಿಭಾಗದ ವತಿಯಿಂದ ಮಂಗಳವಾರ ಒಂದು ದಿನದ “ರಾಷ್ಟçಮಟ್ಟದ ಉಗಮ-೨ಕೆ ೧೯ ತಾಂತ್ರಿಕ ಉತ್ಸವ”ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಸಂಪಾದಿಸುವದರೊಂದಿಗೆ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಮಾಹಿತಿ ತಂತ್ರಜ್ಞಾನದ ಕೌಶಲ್ಯಗಳನ್ನು ದೇಶ-ವಿದೇಶಗಳಲ್ಲಿ ಪ್ರಸಾರ ಮಾಡಬೇಕು. ಭಾರತದ ಮಾಹಿತಿ ತಂತ್ರಜ್ಞಾನದ ಸಫಲತೆಯನ್ನು ವಿಶ್ವಕ್ಕೆ ಪರಿಚಯಿಸುವ ಕರ‍್ಯಗೈಯಬೇಕು ಎಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವ್ಹಿ.ಡಿ. ಯಳಮಲಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಗಣಕ ವಿಜ್ಞಾನ ವಿಭಾಗವು ತಾಂತ್ರಿಕ ಉತ್ಸವವನ್ನು ಆಯೋಜಿಸುತ್ತಾ ಬಂದಿದೆ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಹುದುಗಿರುವ ತಾಂತ್ರಿಕ ಕೌಶಲ್ಯಗಳ ಅನಾವರಣಕ್ಕೆ ವೇದಿಕೆ ಒದಗಿಸಿದೆ. ವಿದ್ಯಾರ್ಥಿಗಳು ಜ್ಞಾನಾಧಾರಿತ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಸರ್ವರೀತಿಯ ಸಹಾಯ-ಸಹಕಾರವನ್ನು ಆಡಳಿತ ಮಂಡಳಿ ನೀಡುತ್ತದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಕರ‍್ಯಕ್ರಮಕ್ಕೆ ಪ್ರೊÃತ್ಸಾಹ ನೀಡಿದ ಎಲ್ಲಾ ಪ್ರಾಯೋಜಕರಿಗೆ ವಂದನೆಗಳನ್ನು ಸಲ್ಲಿಸಿದರು. ಕರ‍್ಯಕ್ರಮದಲ್ಲಿ ಮಹಾರಾಷ್ಟç, ಗೋವಾ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯದ ೩೦೦ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು. ಕರ‍್ಯಕ್ರಮದಲ್ಲಿ ರಸಪ್ರಶ್ನೆ, ಮಾರುಕಟ್ಟೆ, ದೃಶ್ಯವೀಕ್ಷಣೆ, ಖಜಾನೆ, ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಪೂರ್ವಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಏಕಾಂತಯ್ಯ ಸ್ವಾಮಿ ಸ್ವಾಗತಿಸಿದರು. ಅಮೀರ ಅತಿಥಿಗಳನ್ನು ಪರಿಚಯಿಸಿದರು. ಪ್ರಾಪ್ತಿ ವಂದಿಸಿದರು. ರುಮಾನಾ ಹಾಗೂ ಮನೋಜ ಕಾರ್ಯಕ್ರಮ ನಿರೂಪಿಸಿದರು. ಈ ಕರ‍್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತ ಸಿಬ್ಬಂಧಿವರ್ಗದವರು ಉಪಸ್ಥಿತರಿದ್ದರು.

loading...