ಭಾರತ ರತ್ನ ಡಾ.ಅಂಬೇಡ್ಕರ ಜಯಂತಿ

0
3

ಭಾರತ ರತ್ನ ಡಾ.ಅಂಬೇಡ್ಕರ ಜಯಂತಿ
ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೆಸಿ. ಪ್ರೌಢ ಶಾಲೆಯಲ್ಲಿ ಡಾ. ಅಂಬೇಡ್ಕರ ೧೨೮ ಜನ್ಮ ದಿನಾಚರಣೆಯನ್ನು ಭಕ್ತಿ ಮತ್ತು ಶ್ರಧ್ಧೆಯಿಂದ ಆಚರಿಸಲಾಯಿತು.
ಶಾಲೆಯ ಸಿಬ್ಬಂದಿಯವರು ಡಾ. ಬಿ.ಆರ್.ಅಂಬೇಡ್ಕರ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬಿ.ಆರ್.ಅಂಬೇಡ್ಕರ ಎನ್ನುವದು ಭೀಮರಾವ ಅಂಬೇಡ್ಕರ ಅಷ್ಟೆÃ ಅಲ್ಲ ಭಾರತ ರತ್ನ ಅಂಬೇಡ್ಕರ, ಭಾರತಾಂಬೆಯ ಪುತ್ರರತ್ನ ಅಂಬೇಡ್ಕರ ಎಂದು ಅರ್ಥ. ಜಗತ್ತಿಗೆ ಮಾದರಿಯಾದ ಲಿಖಿತ ಸಂವಿದಾನವನ್ನು ದೇಶಕ್ಕೆ ನೀಡಿದ ಮಹಾಪುರುಷರವರು. ರಾಷ್ಟçದ ಪ್ರಥಮ ಕಾನೂನು ಮಂತ್ರಿಯಾಗಿ, ನಾಡಿನ ದಲಿತರ ಕಲ್ಯಾಣಕ್ಕಾಗಿ ಅನೇಕ ಕಾನೂನುಗಳನ್ನು ರಚಿಸಿ ಅವರ ಉಧ್ದಾರಕ್ಕಾಗಿ ಜೀವನವನ್ನೆ ಮುಡಿಪಿಟ್ಟ ಮಹಾಮಹಿಮ ಅವರಾಗಿದ್ದಾರು. ಅವರ ಜೀವನವೇ ನಮಗೆಲ್ಲರಿಗೆ ಆದರ್ಶ.ಶಿಕ್ಷಣ ಪಡೆದು ಜಾಣರಾಗಿ ಭಾರತಮಾತೆಯ ಸೇವೆಯಲ್ಲಿ ನಮ್ಮನ್ನು ನಾವು ಅರ್ಪಿಸಿಕೊಳ್ಳುವ ಪ್ರತಿಜ್ಞೆ ಮಾಡಬೇಕು”. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ/ನಿ ಹಾಗೂ ಪಾಲಕರು ಮತ್ತು ಶಿಕ್ಷಕರಾದ ಸುರೇಶ ಲಮಾಣಿ, ಎಂ.ಬಿ.ತೋಟಗಿ. ಮತ್ತು ವ್ಹಿ.ಎಸ್.ಭೂತಿ ಮತ್ತು ಮಧು ಶಾಪೂರಕರ ಅವರು ಉಪಸ್ಥಿತರಿದ್ದರು.

loading...