ಭಾವಸಾರ ವ್ಹಿಜನ್‍ದಿಂದ ಶ್ರದ್ಧಾಂಜಲಿ

0
2

ಗದಗ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿರುವ ಸೈನಿಕರ ಮೇಲೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ವೀರಮರಣವನ್ನಪ್ಪಿದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಗದಗ ಭಾವಸಾರ ವ್ಹಿಜನ್ ಇಂಡಿಯಾ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿತು.
ರವಿವಾರ ಸಂಜೆ ಬೆಟಗೇರಿಯ ಕಿತ್ತೂರ ಚೆನ್ನಮ್ಮ ಉದ್ಯಾನವನದಲ್ಲಿ ವ್ಹಿಜನ್‍ದಿಂದ ಎರ್ಪಡಿಸಿದ್ದ ‘ವೀರಮರಣ ಹೊಂದಿದ ಯೋಧರಿಗೆ ನಮನ’ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಸಾರ ವ್ಹಿಜನ್‍ದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮೊಂಬತ್ತಿ ಬೆಳಗಿಸಿ ಮೌನ ಆಚರಿಸಿದರು.

loading...