ಮಂದಿರಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ: ನಿಯಮ ತಪ್ಪಿದಲ್ಲಿ ಕಾನೂನು ಕ್ರಮ- ಕೊಂಗನೋಳಿ

0
43

ಮಂದಿರಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ: ನಿಯಮ ತಪ್ಪಿದಲ್ಲಿ ಕಾನೂನು ಕ್ರಮ- ಕೊಂಗನೋಳಿ

ಕನ್ನಡಮ್ಮ ಸುದ್ದಿ -ಸಂಕೇಶ್ವರ: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬೆನ್ನಲೇ, ಗಣೇಶ ಮೂರ್ತಿಯನ್ನು ಸಾರ್ವಜನಿಕ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡದೇ ಸಮೀಪದಲ್ಲಿರುವ ಮಂದಿರಗಳಲ್ಲಿ ಪ್ರತಿಷ್ಠಾಪನೆ ಮಾಡಬೇಕು ,ಸರಕಾರದ ನಿಯಮ ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಿಎಸ್ಐ ಗಣಪತಿ ಕೊಂಗನೋಳಿ ಹೇಳಿದರು.

ಇಂದು ನಗರದ ಪೋಲೀಸ್ ಠಾಣೆಯ ಆವರಣದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಗಣೇಶ ಉತ್ಸವದ ಶಾಂತಿ ಸಭೆಯಲ್ಲಿ ಮಾತನಾಡುತ್ತಾ ಮಂಡಳಗಳ ಗಣೇಶನ ಮೂರ್ತಿಯು 4 ಫೂಟ್ ಗಿಂತ ಎತ್ತರ ಇರಬಾರದು. ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶನ ಮೂರ್ತಿ ಎರಡು ಪೂಟ್ ಗಿಂತ ಎತ್ತರ ಇರಬಾರದು,ಗಣೇಶ ಮೂರ್ತಿಯನ್ನು ತರುವಾಗ ಮತ್ತು ವಿಸರ್ಜನೆ ಮಾಡುವಾಗ ಪಟಾಕಿ, ಡಿಜೆ, ಧ್ವನಿವರ್ಧಕ ಹಾಗೂ ಮೆರವಣಿಗೆ ಹೊರಡಿಸಬಾರದು ಎಂದರು.

ಗಣೇಶ ಉತ್ಸವದ ಸಂದರ್ಭದಲ್ಲಿ ಐದು ಜನಕ್ಕಿಂತ ಹೆಚ್ಚು ಜನ ಆರತಿ ಮಾಡುವಾಗ ಸೇರಬಾರದು,ಹೆಚ್ಚು ಜನ ಸೇರುವ ಭಜನೆ ಕೀರ್ತನೆ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎನ್ನುವ ಅನೇಕ ಷರತ್ತುಗಳನ್ನು ಹೇರುವ ಮೂಲಕ ಬೆಳಗಾವಿ ಜಿಲ್ಲಾಡಳಿತ ಈ ಬಾರಿಯ ಗಣೇಶ ಉತ್ಸವಕ್ಕೆ ಷರತ್ತು ಬದ್ಧ ಅವಕಾಶ ಕಲ್ಪಿಸಿದೆ ಈ ಮಾರ್ಗದರ್ಶನದಲ್ಲಿ ಗಣೇಶ ಮಂಡಳಿಯವರು ನಡೆಯಬೇಕು ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪೊಲೀಸ ಸಿಬ್ಬಂದಿ ವರ್ಗ ,ಗಣೇಶ ಉತ್ಸವ ಮಂಡಳದ ಪ್ರಮುಖರು ಉಪಸ್ಥಿತರಿದ್ದರು .

loading...