ಮಂದಿರ ಶಿಲಾನ್ಯಾಸ ಮಾಡಲು ಹೊರಟವರಿಗೆ ಶ್ರೀರಾಮನೇ ಕಾಪಾಡಬೇಕು: ಮಾಜಿ ಸ್ಪೀಕರ್ ರಮೇಶಕುಮಾರ

0
45

ಬೆಳಗಾವಿ
ತಿರುಪತಿ ತಿಮ್ಮಪ್ಪನ ಬಾಗಿಲು ಹಾಕಿದವರು ನಾವು. ಇಡೀ ಜಗತ್ತಿನಲ್ಲಿ ಕೊರೋನಾ ಸೋಂಕು ದಟ್ಟವಾಗಿ ಹರಡಿದೆ. ಹೀಗಿರುವಾಗ ರಾಮಮಂದಿರ ಶಿಲಾನ್ಯಾಸ ಮಾಡಲು ಹೊರಟ್ಟಿದ್ದಿರಿ. ಆ ರಾಮನೇ ನಿಮ್ಮನ್ನು ಕಾಪಾಡಬೇಕೆಂದು ಮಾಜಿ ಸ್ಪೀಕರ್ ರಮೇಶ ಕುಮಾರ ಪರೋಕ್ಷವಾಗಿ ಬಿಜೆಪಿಯವರಿಗೆ ಟಾಂಗ್ ನೀಡಿದರು.
ಮಂಗಳವಾರ ನಗರದ ಆರ್‌ಟಿಒ ವೃತ್ತದ ಬಳಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಸಿಸಿ ಮಾತನಾಡಿದರು. ದೇಶ ಸೇರಿದಂತೆ ವಿಶ್ವದಲ್ಲಿ ಕೊರೋನಾ ಸೋಂಕು ದಟ್ಟವಾಗಿ ವ್ಯಾಪಿಸಿದೆ. ಈ ಸಂದರ್ಭದಲ್ಲಿ ಯಾವುದೇ ಸಮಾವೇಶ, ಸಭೆ, ಧಾರ್ಮಿಕ ಕೆಲಸಗಳು ನಡೆಯುವಂತಿಲ್ಲ ಎಂದು ಹೇಳಿ ಎಲ್ಲರಿಗೂ ನಿರ್ಬಂಧ ಹಾಕಿದ್ದರು. ಇಡೀ ದೇಶದ ಜವಾಬ್ದಾರಿ ಹೊತ್ತಿದ್ದವರು. ಬಿಜೆಪಿಯವರು ಅವರು ದೊಡ್ಡವರು ಯೋಚನೆ ಮಾಡಬೇಕು ಶ್ರೀರಾಮನ ಶಿಲಾನ್ಯಾಸ ಮಾಡಲು ಹೊರಟ್ಟಿದ್ದಾರೆ ಅವರಿಗೆ ಆ ರಾಮನೇ ಕಾಪಾಡಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅನಾರೋಗ್ಯಕ್ಕೆ ಒಳಗಾದಾಗ ಆರೋಪ ಮಾಡುವುದು ಸದಾಚಾರ ಅಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಕೊರೋನಾ ಸೋಂಕು ತಗುಲಿದೆ. ಅವರಿಬ್ಬರೂಈ ಶೀಘ್ರದಲ್ಲಿಯೇ ಆರೋಗ್ಯವಾಗಿ ಬರಲಿ ಎಂದು ಹಾರೈಸುತ್ತೇನೆ ಎಂದರು.
ಕೊರೋನಾ ವೈರಸ್ ಆರಂಭದಲ್ಲಿ ವಿಧಾನ ಮಂಡಳದ ಅಧಿವೇಶನವನ್ನು ಮುಂದಕ್ಕೆ ಹಾಕಲಾಗಿದೆ. ವಿಪತ್ತು ಬಂದ ಸಂದರ್ಭದಲ್ಲಿ ನಾವು ಸರಕಾರಕ್ಕೆ ಸಹಕಾರ ನೀಡಿದ್ದೇವೆ. ನಾವು ಸರಕಾರಕ್ಕಾರ ಸಹಕಾರ ನೀಡಿದ್ದೇವೆ. ಆದರೆ ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಸರಕಾರ ಕೊರೋನಾ ವಿಚಾರದಲ್ಲಿ ಹಣ ಖರ್ಚು ಮಾಡುವಲ್ಲಿ ಯಡವಿದೆ. ಈ ಕುರಿತು ಸರಕಾರಕ್ಕೆ ವಿಪಕ್ಷ ನಾಯಕರು ಎಚ್ಚರಿಕೆ ನೀಡಿದರು. ಹಣದ ದುರುಪಯೋಗ ಆಗಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇದಕ್ಕೆ ಇಬ್ಬರು ಸಚಿವರು ಉತ್ತರ ನೀಡಿದರು ಎಂದರು.
ಈ ಕುರಿತಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ೨೦ ಪತ್ರಗಳನ್ನು ಸರಕಾರಕ್ಕೆ ಬರೆದಿದ್ದಾರೆ. ಆರೋಪಗಳಿಗೆ ದಾಖಲೆ ಒದಗಿಸಿ ನ್ಯಾಯಾಂಗ ತನಿಖೆಗೆ ಆಗ್ರ ಮಾಡಲಾಗಿದೆ. ಇದಕ್ಕೆ ಸಂಪುಟದ ಐದು ಜನ ಸಚಿವರು ಪ್ರತ್ಯಾರೋಪ ಮಾಡಿದರು. ಪ್ರಜಾಪ್ರಭುತ್ವದಲ್ಲಿ ವಿಪಕ್ಷ ವಾಚ್ ಡಾಗ್ ಆಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಸರಕಾರ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

loading...