ಮಕ್ಕಳಿ ಉತ್ತಮ ಸಂಸ್ಕಾರ ಕಲಿಸುವ ಅಗತ್ಯವಿದೆ: ಶಾಸಕ ಪಾಟೀಲ

0
12

ಕನ್ನಡಮ್ಮ ಸುದ್ದಿ-ಹಿರೇಕೆರೂರು: ನಾವುಗಳು ಇಂದು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಕೆಲಸ ಮಾಡಬೇಕಿದೆ. ಇಂದಿನ ದಿನದಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದೆ. ವಿದ್ಯಾರ್ಥಿಗಳ ಇದರ ಸದುಪಯೋಗ ಪಡೆಯಬೇಕಿದೆ. ಶ್ರಿÃಮಂತ ಕುಟುಂಬಗಳಲ್ಲಿ ಹ¯ವಾರು ಜನರು ಅವರ ತಂದೆ ತಾಯಿಯರನ್ನು ಅನಾಥ ಆಶ್ರಮದಲ್ಲಿ ಇಟ್ಟಿದ್ದಾರೆ ಇದು ಬದಲಾವಣೆಯಾಗಬೇಕು ಎಂದು ಶಾಸಕ ಬಿ.ಸಿ.ಪಾಟೀಲ್ ಹೇಳಿದರು.
ತಾಲೂಕಿನ ಮಾಸೂರು ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ೨೦೧೮-೧೯ ನೇ ಸಾಲಿನ ಮಾಸೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರಿÃಡಾಕೂಟ ಶನಿವಾರ ಜರುಗಿದವು.

ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಈಗಿನಿಂದಲೇ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಹೇಳುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದ ಭೋದನೆಯಾಗಬಾರದು ನಮ್ಮ ಆಚಾರ ವಿಚಾರಗಳ ಬಗ್ಗೆ ಶಿಕ್ಷಕರು ತಿಳಿಸಬೇಕು. ಹೀಗೆ ಮಾಡುವುದರಿಂದ ವಿದ್ಯಾರ್ಥಿಗಳು ಮುಂದೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ ನಂತರ ದೇಶದ ಬೆಳವಣಿಗೆ ಉತ್ತಮವಾಗಿರುತ್ತದೆ ಹಾಗೂ ವಿದ್ಯಾರ್ಥಿಗಳು ಕೂಡಾ ಶಿಕ್ಷಕರು ಹೇಳುವುದನ್ನು ಜವಾಬ್ದಾರಿಯಿಂದ ಸ್ವಿÃಕರಿಸಿ ಎಂದರು.

ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಕೆ.ಕರಿಯಣ್ಣನವರ ಮಾತನಾಡಿ, ವಿದ್ಯಾರ್ಥಿಗಳು ಕ್ರಿÃಡೆಗಳಲ್ಲಿ ಭಗವಹಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು.
ಶಾಸಕ ಬಿ.ಸಿ ಪಾಟೀಲ್ ಕ್ರಿÃಡಾಧ್ವಜಾರೋಹಣ ನೆರವೇರಿಸಿದರು. ಕ್ರಿÃಡಾಜ್ಯೊÃತಿಯನ್ನು ಕ್ಷೆÃತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪರವರು ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ದೈಹಿಕ ಶಿಕ್ಷಕ ಮಂಜುನಾಥ ಯಡಗೋಡಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಹ.ಮು.ತಳವಾರ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕಣ್ಷ ಸಂಯೋಜಕ ಪಿ.ಬಿ ನಿಂಗನಗೌಡ್ರ. ಪ್ರಭಯ್ಯ ವಿರಕ್ತಮಠ, ಮಂಜುನಾಥ ತಳವಾರ, ರುದ್ರಗೌಡ ಹಳ್ಳಪ್ಪಗೌಡ್ರ, ಅಲ್ತಾಫ್, ಲಿಂಗನಗೌಡ ಹಳ್ಳಪ್ಪಗೌಡ್ರ, ಹನುಮಂತಪ್ಪ ಗಿರಿಯಣ್ಣನವರ, ಪುಟ್ಟಪ್ಪ ನೆಗಳೂರು, ಶಂಭುಗೌಡ ಪಾಟೀಲ, ಮಾರುತ್ತೆಪ್ಪ ಗಿರಿಯಣ್ಣನವರ, ನಾಹರಾಜ ಹಿರೇಮಠ, ವಿಜಯಕುಮಾರ, ನಾರಾಯಣಪ್ಪ ಗಾಯಕವಾಡ, ತಿಮ್ಮಪ ್ಪಚನ್ನಗಿರಿ, ನಾಗರಾಜ ನಾಗೇನಹಳ್ಳಿ, ಷಣ್ಮುಖಪ್ಪ ಚಳಗೇರಿ, ಬಸವರಾಜ್ ಗಿರಿಯಣ್ಣನವರ, ವೀರನಗೌಡ ದೊಡ್ಡಗೌಡ್ರ, ಗೋಪಾಲ ಪ್ಪಕ್ಷತ್ರಿ, ಎಲ್.ಕೆ.ಮನೋಚಾರಿ, ದೈಹಿಕ ಶಿಕ್ಷಕ ಪಿ.ಬಿ.ಐರಣಿ, ಪಾಟೀಲ್ ಇದ್ದರು.
ಮಂಜುಳಾ ಮಾಸೂರು ನಿರೂಪಿಸಿದರು, ಗಣೇಶ ಕರೆಮುದುಕರ ಸ್ವಾಗತಿಸಿದರು, ನಂದಿನಿ. ಹೆಚ್.ಜಿ ವಂದಿಸಿದರು.

loading...