ಮಕ್ಕಳಿಗೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ದೊಡ್ಡಮನಿ

0
14

ಕನ್ನಡಮ್ಮ ಸುದ್ದಿ-ಗದಗ: ಮಗುವಿನಲ್ಲಿ ವಿಶೇಷ ಸಾಮರ್ಥ್ಯ, ಸೃಜನಶೀಲತೆ, ಕಲ್ಪನಾ ಶಕ್ತಿ, ಬುದ್ದಿಮತ್ತೆ ಹಾಗೂ ಪ್ರತಿಭೆಯಂತರ ಸ್ವಭಾವಗಳಿದ್ದು ಅವರಲ್ಲಿಯ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ವೇದಿಕೆ ಸೂಕ್ತ ಎಂದು ಗದಗ ತಾ.ಪಂ ಹಂಗಾವಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಹೇಳಿದರು.
ಗದಗ ತಾಲೂಕಿನ ನಾರಾಯಣಪೂರ ಗ್ರಾಮದ ಹಿರಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕೋಟುಮಚಗಿ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜಿನಗಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ಪ್ರತಿಭಾ ಸಂಪನ್ನರಾಗಿದ್ದು, ಇವರ ಪ್ರತಿಭೆಗೆ ಅನುಗುಣವಾಗಿ ಪ್ರತಿಭಾ ಕಾರಂಜಿಯಂತಹ ವೇದಿಕೆಗಳು ಸ್ಪೂರ್ತಿದಾಯಕವಾಗಿವೆ ಎಂದರು.
ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಮಾಜಿ ನಿರ್ದೆಶಕ ಶಿವಯೋಗಿ ಹಿರೇಮಠ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಪದೋನ್ನತಿ ಹೊಂದಿದ ಶಾಲಾ ಶಿಕ್ಷಕ ಎನ್‌.ಜಿ.ಹಿರೇಗೌಡರ ಅವರನ್ನು ಸನ್ಮಾನಿಸಲಾಯಿತು. ಗ್ರಾಮಸ್ಥರ ಸಹಕಾರ ಆತ್ಮೀಯತೆಯನ್ನು ಸ್ಮರಿಸಿಕೊಂಡು ಈ ಪ್ರದೇಶದ ಮಕ್ಕಳ ಕಲಿಕಾ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮುತ್ತಪ್ಪ ಹಂಚಿನಾಳ ಮಾತನಾಡಿ, ಶಾಲೆಗೆ ಬೇಕಾದ ಸಹಾಯ ಸಹಕಾರವನ್ನು ಎಸ್‌ಡಿಎಂಸಿಯ ಸರ್ವ ಸದಸ್ಯರ ಸಹಕಾರದೊಂದಿಗೆ ನೀಡುವ ಭರವಸೆ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಸದಸ್ಯೆ ಸುಧಾ ಹತ್ತಿಕಟ್ಟಿ, ಕಸ್ತೂರಿ ಗದಗಿನಮಠ, ಕೃಷ್ಣಗೌಡ ಗೌಡರ, ವೀರಭದ್ರಗೌಡ ಪಾಟೀಲ ಹಾಗೂ ಗ್ರಾಮದ ಗಣ್ಯರು, ಯುವಕ ಮಂಡಳದ ಪದಾಧಿಕಾರಿಗಳು, ಸ್ತ್ರೀ ಶಕ್ತಿ ಗುಂಪಿನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಟಿ.ಮಮತಾ ಸ್ವಾಗತಿಸಿದರು, ರವಿ ಪಡೇಸೂರ ನಿರೂಪಿಸಿದರು, ಜರೀನಾ ರೀಸಲ್ದಾರ ವಂದಿಸಿದರು.
ಕ್ಲಸ್ಟರ್‌ ಸಿಆರ್‌ಪಿ ಎಸ್‌.ಎಸ್‌.ಲಕ್ಷಕೊಪ್ಪ, ಕೆ.ಎಸ್‌.ಬೇಲೇರಿ, ಪಿ.ಬಿ.ಮುಧೋಳಮಠ, ಎನ್‌.ಎಚ್‌.ಪಾಟೀಲ, ಎಲ್‌.ವ್ಹಿ.ದಾಸರ, ಜಿ.ಬಿ.ದೊಣ್ಣಿ, ಶೇಖರಪ್ಪ ಹಂಚಿನಾಳ, ಕುಮಾರಸ್ವಾಮಿ ಬಳಿಗೇರಿಮಠ, ನಾಗಪ್ಪ ಹಂಚಿನಾಳ, ಮಡಿವಾಳಯ್ಯ ಹಿರೇಮಠ, ಶೀಲವ್ವ ಹರಿಜನ, ರೇಖಾ ಡಾವಣಗೇರಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

loading...