ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ : ನ್ಯಾ. ಕನ್ನೂರ

0
25

ಕನ್ನಡಮ್ಮ ಸುದ್ದಿ-ಶಿಗ್ಗಾವಿ : ಬಾಲಕರು ದೇಶದ ಆಸ್ತಿ ಅವರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸತ್ಪ್ರಜೆಗಳನ್ನಾಗಿ ಮಾಡುವದು ಎಲ್ಲರ ಕರ್ತವ್ಯ, ಶಾಲೆಗೆ ಕಳಿಸಬೇಕಾದ ಮಕ್ಕಳನ್ನು ಕೆಲಸಕ್ಕೆ ಕಳಿಸಿ ಅವರ ಶೈಕ್ಷಣಿಕ ಸಮಯವನ್ನು ವ್ಯರ್ಥ ಮಾಡಬಾರದು. ಶಿಕ್ಷಣ ಅವರ ಹಕ್ಕು ಅವರನ್ನು ಶಾಲೆಗೆ ಕಳಸಿರಿ ಶಿಕ್ಷಣದಿಂದ ಅವರ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದು ಹಿರಿಯ ದಿವಾಣಿ ನ್ಯಾಯಾದೀಶರಾದ ವಿಜಯಕುಮಾರ ಕನ್ನೂರ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಮಾದರಿ ಪ್ರಾಥಮಿಕ ಶಾಲೆ ನಂ1 ಆವರಣದಲ್ಲಿ ಗುರುವಾರ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಹಶೀಲ್ದಾರ ಕಛೇರಿ, ಪೋಲಿಸ್‌ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಬಾಲ ಕಾರ್ಮಿಕ ವಿರೋದಿ ದಿನಾಚರಣೆ ಅಂಗವಾಗಿ, ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ಕೊಡಿ ಸರ್ಕಾರ ಬಡಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಉಚಿತ ಶಿಕ್ಷಣ, ಸ್ಕಾಲರಸಿಪ್‌, ಬಿಸಿಯೂಟ, ಸ್ಯಕಲ್‌ ವಿತರಣೆ, ಸಮವಸ್ತ್ರ, ಶೂ, ಪುಸ್ತಕ ಸೆರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿದೆ ಅವುಗಲನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಎಂದು ಸಲಹೆ ನೀಡಿದರು.
ನ್ಯಾಯವಾದಿ ಜಿ.ಎನ್‌.ಎಲಿಗಾರ ಬಾಲ ಕಾರ್ಮಿಕ ವಿರೋದಿ ಕಾನೂನುಗಳ ಕುರಿತು ಉಪನ್ಯಾಸ ನೀಡಿದರು. ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಬಿ.ಎ.ಬಾಲೆಹೊಸೂರ, ಜಿ.ಎ.ಹಿರೇಮಠ, ಕೆ.ಎನ್‌. ಭಾರತಿ, ಎಮ್‌.ಜಿ.ವಿಜಾಪೂರ, ಪ್ರಭು ಹೊಂಡದಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಬಿ.ಹೆಳವರ,ವೇದಿಕೆಯಲ್ಲಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಾಲಕಾರ್ಮಿಕ ವಿರೋಧಿ ಜಾತಾ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಲಿಂಗೇಶ.ಕೆ.ಎಚ್‌, ಶ್ರೀಮತಿ ಜಿ.ಬಿ.ಕಟ್ಟಮನಿ, ಎಸ್‌.ಬಿ.ದೊಡ್ಡಮನಿ, ಸಹಶಿಕ್ಷಕರಾದ, ಲವಕುಮಾರ, ಬಿ.ಎಮ್‌.ಕಾಳೆ, ನಿವೇದಿತಾ ಎ.ಜಿ., ಎ.ಕೆ.ದೇಶಪಾಂಡೆ, ಪೋಲಿಸ್‌ ಇಲಾಖೆ ಸಿಬ್ಬಂದಿಗಳು, ನ್ಯಾಯಾಲಯದ ಸಿಬ್ಬಂದಿಗಳು, ತಹಶೀಲ್ದಾರ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸಿಬ್ಬಂದಿಗಳು, ವಿದ್ಯಾಥಿಗಳು ಉಪಸ್ಥಿತರಿದ್ದರು.

loading...