ಮಕ್ಕಳು ಓದು ಬರಹದ ಜೊತೆಗೆ ಕ್ರೀಡೆ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಭಾಗವಹಿಸಬೇಕು

0
46


ಕಾರವಾರ: ಮಕ್ಕಳು ಶಿಕ್ಷಣದಿಂದ ವಂಚಿತರಾಗದೇ ನಿರಂತರವಾಗಿ ಕಲಿಕೆಯಲ್ಲಿ ಮುಂದುವರೆಯಬೇಕು. ಪಠ್ಯದ ಜೊತೆಗೆ ಕ್ರೀಡೆ ಹಾಗೂ ಇತರ ಸಹಪಠ್ಯ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಭಾಗವಹಿಸಬೇಕು. ಇದರಿಂದ ಮ್ಕಕಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇವೆಲ್ಲವೂ ಸಾಧ್ಯವಾಗಬೇಕಾದರೆ ಉತ್ತಮ ಆರೋಗ್ಯ ಅವಶ್ಯಕ. ಆದ್ದರಿಂದ ಮ್ಕಕಳು ಮುಂಚಿತವಾಗಿ ತಮ್ಮ ರಕ್ತದ ಗುಂಪನ್ನು ತಪಾಸಣೆ ಮಾಡಿಟ್ಟು ಕೊಳ್ಳವುದು ಅಗತ್ಯವಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಢಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ಗಾಯತ್ರಿಯವರು ತಿಳಿಸಿದರು. ಅವರು ಆಝಾದ್ ಯುಥ್ ಕ್ಲಬ್ ಕಾರವಾರ, ನೆಹರೂ ಯುವ ಕೇಂದ್ರ, ಪ್ರೇಮಾಶ್ರಮ ಚಾರಿಟೇಬಲ್ ಟ್ರಸ್ಟ್ ಆಮದಳ್ಳಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 153 ನೇ ಜನ್ಮ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದ ಮೂರನೇ ದಿನದ ಕಾರ್ಯಕ್ರಮವಾಗಿ ಸ.ಕಿ.ಪ್ರಾ.ಕ.ಶಾಲೆ ಶೇಜವಾಡದಲ್ಲಿ ಮೂರು ಶಾಲೆಯ ಮಕ್ಕಳಿಗಾಗಿ ಹಮ್ಮಿಕೊಂಡ ಉಚಿತ ರಕ್ತದ ಗುಂಪು ತಪಾಸಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಅತಿಥಿಗಳಾಗಿ ಉಪಸ್ಥಿತರಿದ್ದ ರಾಷ್ಟ್ರಪ್ರಶಸ್ತಿ ವಿಜೇತರೂ ಹಾಗೂ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿವಿಜೇತರೂ ಆದ ನಜೀರ್ ಅಹಮದ್ ಯು.ಶೇಖ್‍ರವರು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳನ್ನು ಕಾರವಾರದ ತಾಲೂಕಿನ ಅನೇಕ ಶಾಲೆಗಳಲ್ಲಿ ಹಮ್ಮಿಕೊಳ್ಳುತ್ತಿರುವುದಾಗಿ ಹೇಳಿದರು. ಅದ್ಯಕ್ಷತೆಯನ್ನು ವಹಿಸಿದ್ದ ಸಮಾಜ ಸೇವಕರಾದ ಗಜಾನನ ಆಳ್ವಾರವರು ಮಾತನಾಡಿ ಆಝಾದ್ ಯುಥ್ ಕ್ಲಬ್ ಕಾರವಾರದವರು ಅನೇಕ ಕಾರ್ಯಕ್ರಮಗಳನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಹಮ್ಮಿಕೊಂಡು ಸಾಧನೆಯನ್ನು ಮಾಡುತ್ತಾ ಬಂದಿರುತ್ತಾರೆ. ಅವರ ಕೊಡುಗೆ ಜಿಲ್ಲೆಗೆ ಅಪಾರವಾಗಿದೆ. 2 ನೇ ರಾಷ್ಟ್ರೀಯ ಯುವ ಪ್ರಶಸ್ತಿ ಗಳಿಸಿದ ಏಕೈಕ ಸಂಸ್ಥೆ ಇದಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸ.ಕಿ.ಪ್ರಾ.ಕ.ಶಾಲೆ ಶೇಜವಾಡ, ಸ.ಕಿ.ಪ್ರಾ.ಕ.ಶಾಲೆ ಮಖೇರಿ, ಹಾಗೂ ಸ.ಕಿ.ಪ್ರಾ.ಕನ್ನಡ ಶಾಲೆ ಸಾಸನವಾಡ ಈ ಮೂರೂ ಶಾಲೆಯ ಮಕ್ಕಳಿಗೆ ಉಚಿತ ರಕ್ತದ ಗುಂಪು ತಪಾಸಣೆಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಯುವ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಹಸನ್ ಶೇಖ್, ಶಿಕ್ಷಕರಾದ ಕುಸುಮಾ ಪಿ.ನಾಯ್ಕ, ಶ್ಯಾಮಲಾ ಬಂಟ, ಶಶಿಕಲಾ ಎಸ್.ನಾಯ್ಕ, ಅನುಪಮಾ ಎಮ್.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಲ್ಯಾಬ್ ಟೆಕ್ನೀಶಿಯನ್ ಶೋಭಾ ಹಡಗಿನಾಳ ರವರು ರಕ್ತದ ಗುಂಪು ತಪಾಸಣೆಯನ್ನು ಮಾಡಿದರು.
ಈ ಕಾರ್ಯಕ್ರಮವನ್ನು ಕ್ಲಬ್‍ನ ಕೋಶಾಧ್ಯಕ್ಷರಾದ ಮೊಹಮ್ಮದ್ ಉಸ್ಮಾನ್ ಶೇಖ್‍ರವರು ಸಂಘಟಿಸಿದ್ದರು. ಪ್ರಾರಂಭದಲ್ಲಿ ಮುಖ್ಯ ಶಿಕ್ಷಕಿ ಕುಸುಮಾ ಬಿ.ನಾಯಕ ರವರು ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕಿ ಸ್ಮಿತಾ ಬಿ.ನಾಯ್ಕ ರವರು ವಂದಿಸಿದರು.

loading...

LEAVE A REPLY

Please enter your comment!
Please enter your name here