ಮಕ್ಕಳ ಎಲ್ಲ ವ್ಯವಹಾರÀ & ವರ್ತನೆಗಳ ಬಗ್ಗೆ ಪಾಲಕರು ಸೂಕ್ಷ್ಮ ದೃಷ್ಟಿ ಹೊಂದಿರಬೇಕು: ಭೂಶೆಟ್ಟಿ

0
32


ಧಾರವಾಡ,19: ಇಂದಿನ ಮೊಬೈಲ್ ಮತ್ತು ಅಂತರ್ಜಾಲದ ಯುಗದಲ್ಲಿ ಮಕ್ಕಳ ಎಲ್ಲ ವ್ಯವಹಾರಗಳ ಮತ್ತು ವರ್ತನೆಗಳ ಬಗ್ಗೆ ಪಾಲಕರು ಸೂಕ್ಷ್ಮ ಸಂಶೋಧನಾ ದೃಷ್ಟಿ ಹೊಂದಬೇಕು ಎಂದು ಹುಬ್ಬಳ್ಳಿ ಶಹರ ವಲಯ ಪ್ರೌಢ ವಿಜ್ಞಾನ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಸಂಜೀವಕುಮಾರ ಭೂಶೆಟ್ಟಿ ಹೇಳಿದರು.
ಬಿ.ಆರ್.ಪಿ ಪ್ರೌಢ ವಿಜ್ಞಾನ ವಿಭಾಗ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಪಾಲಕರ ಸಭೆಯಲ್ಲಿ ಮಾತನಾಡಿ, ಮುಕ್ಕಳಿಗೆ ವಿಧೇಯತೆ, ಚಾರಿತ್ರ್ಯ ಹಾಗೂ ಪ್ರಥಮ ಸಂಸ್ಕಾರಗಳು ಮನೆಯಿಂದಲೇ ದೊರೆಯುತ್ತವೆ. ಮನೆಯ ಸಾಮಾಜಿಕ ಮತ್ತು ಶೈಕ್ಷಣಿಕ ವಾತಾವರಣಗಳು ವಿದ್ಯಾಭ್ಯಾಸದ ಮೇಲೆ ನೇರವಾದ ಪ್ರಭಾವ ಬೀರುತ್ತವೆ. ವಿಭಕ್ತ ಅಥವಾ ಅವಿಭಕ್ತ ಕುಟುಂಬಗಳಿರಲಿ ಕಲಿಕೆಯ ಅನುಭವಗಳು ಮುಂದಿನ ಪೀಳಿಗೆಗೆ ವರ್ಗಾಯಿಸಲ್ಪಡುತ್ತವೆ. ಇತ್ತೀಚಿನ ದಿನಗಳಲ್ಲಿ ಸಾಮನ್ಯವಾಗಿ ಪಾಲಕರು ತಮ್ಮ ಮಕ್ಕಳು ಯಾವ ಮಾತನ್ನೂ ಕೇಳಲ್ಲ ಅನ್ನುವುದು ಇದೆ, ಇದಕ್ಕೆ ಪಾಲಕರಿಗೆ ಮಕ್ಕಳನ್ನು ಮುಂದಿನ ಜೀವನಕ್ಕೆ ಸಿದ್ಧಗೊಳಿಸಲು ಶಾಲೆಗಳೊಡನೆ ಸಕ್ರೀಯ ಸಂಪರ್ಕ ಇಟ್ಟುಕೊಳ್ಳಬೇಕಾಗಿದೆ ಎಂದರು.
ಶಿಕ್ಷಕರೊಡನೆ ಆಗಿಂದಾಗ್ಗೆ ಭೇಟಿಯಾಗಿ ಮಕ್ಕಳ ಪ್ರಗತಿಯ ಚಿತ್ರನವನ್ನು ತಿಳಿದುಕೊಳ್ಳುವ ಹಾಗೂ ಅಗತ್ಯ ಸಲಹೆ-ಸೂಚನೆಗಳನ್ನು ಪಾಲಿಸುವಂತಾಗಬೇಕು. ಅಲ್ಲದೇ ಮಕ್ಕಳ ನಡುವಳಿಕೆಗಳು ಮನೆಯವರಿಗೆ ಚೆನ್ನಾಗಿ ಗೊತ್ತಿರುವಷ್ಟು ಶಿಕ್ಷಕರಿಗೆ ಗೊತ್ತಿರುವುದಿಲ್ಲ, ಹಾಗಾಗಿ ಪಾಲಕರು ತಮ್ಮ ಮನೆಯ ಸಂಪ್ರದಾಯ, ಪರಿವಾರದಲ್ಲಿ ವಿವಿಧ ತಲೆಮಾರುಗಳ ಪ್ರಭಾವ ಮತ್ತು ಮಗುವಿನ ಬೆಳವಣಿಗೆಯ ರೀತಿಗಳನ್ನು ಹೇಳಿದಾಗ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ. ಮಕ್ಕಳು ದೂರದರ್ಶನ ವೀಕ್ಷಿಸುವ ಅಥವಾ ಮತ್ತಾವುದೋ ಸಮಯ ಹಾಳು ಮಾಡುವಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು, ಅಧ್ಯಯನಕ್ಕೆ ಪೂರಕವಾಗುವಂತಹ ವಾತಾವರಣ ನಿರ್ಮಿಸಬೇಕು ಎಂದರು.
ಪ್ರಾಚಾರ್ಯರಾದ ಎಮ್.ಎ.ಮಡಕೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಎ.ಎ.ಖತೀಬ, ಜಫ್ರುಲ್ಲಾ ಖಾನ್ ಪಠಾನ, ತಜಾಮುಲ್ ಹುಸ್ಸೇನ್ ಮೈಸೋರಿ, ಅಶ್ರಫ್‍ಅಲಿ, ಎಮ್.ಎ.ಪೀರ್‍ಜಾದೆ, ಎಮ್.ಎ.ಖತೀಬ್, ಎ.ಜಿ.ಖತೀಬ್,ಎಮ್.ಎಮ್.ಶಖಾನಾ,ಎ.ಎ.ಶೆರದಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here