ಮಣಗುತ್ತಿ ಗ್ರಾಮಕ್ಕೆ ಕರವೇ ಜಿಲ್ಲಾದ್ಯಕ್ಷರ ಭೇಟಿ : ಶಿವಸೇನೆ ಪುಂಡಾಟಿಕೆ ಸಹಿಸಲ್ಲ- ಗುಡಗನಟ್ಟಿ ಗುಡುಗು

0
220

ಮಣಗುತ್ತಿ ಗ್ರಾಮಕ್ಕೆ ಕರವೇ ಜಿಲ್ಲಾದ್ಯಕ್ಷರ ಭೇಟಿ : ಶಿವಸೇನೆ ಪುಂಡಾಟಿಕೆ ಸಹಿಸಲ್ಲ- ಗುಡಗನಟ್ಟಿ ಗುಡುಗು

ಕನ್ನಡಮ್ಮ ಸುದ್ದಿ -ಯಮಕನಮರಡಿ- ನಿನ್ನೆ ಸಮೀಪದ ಮನಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ನೆರೆಯ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆಯನ್ನ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ,ಗಡಿಯಲ್ಲಿರುವ ಕನ್ನಡಗರ ಮೇಲೆ ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಶಿವಸೇನೆ ಪುಂಡಾಟಿಕೆಯನ್ನ ಕರವೇ ಜಿಲ್ಲಾದ್ಯಕ್ಷ ದೀಪಕ ಗುಡಗನಟ್ಟಿ ಖಂಡಿಸಿದ್ದಾರೆ ‌.

ಇಂದು ಮನಗುತ್ತಿ ಗ್ರಾಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭೇಟಿ ನೀಡಿದರು ‌. ನಿನ್ನೆ ಶಿವಾಜಿ ಪ್ರತಿಮೆ ಸ್ಥಳಾಂತರದ ಬಗ್ಗೆ ಸ್ಥಳಿಯರು ಸಮಸ್ಯೆಯನ್ನು ಶಿವಸೇನೆ ಕಾರ್ಯಕರ್ತರು ದುರುದ್ದೇಶದಿಂದ ಗಡಿಯಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸಿದ್ದಾರೆ ಎಂದು ಶಿವಸೇನೆ ವಿರುದ್ದ ಕರವೇ ಜಿಲ್ಲಾದ್ಯಕ್ಷ ದೀಪಕ ಗುಡುಗಟ್ಟಿ ಗುಡುಗಿದ್ದಾರೆ . ಗಡಿಯಲ್ಲಿ ಕನ್ನಡಿಗರು ಮರಾಠಿಗರು ಸೌಹಾರ್ದತೆಯಿಂದ ಇದ್ದು ,ಶಿವಸೇನೆ ತನ್ನ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಇಂತಹ ವಿಷಯವನ್ನು ದೊಡ್ಡದು ಮಾಡಿ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿವೆ ಎಂದು ಅಕ್ರೋಶ ವ್ಯಕ್ತ ಪಡಿಸಿದ್ದಾರೆ .

ನಿನ್ನೆಯ ಘಟನೆ ವೇಳೆ ಶಿವಸೇನೆ ಪುಂಡರು ಗಡಿ ಪ್ರವೇಶ ಮಾಡಿ ಮನಗುತ್ತಿ ಸ್ಥಳಿಯ ಸಮಸ್ಯೆಯಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿದೆ . ಶಿವಾಜಿ ಪ್ರತಿಮೆ ವಿವಾದವನ್ನು ಸ್ಥಳಿಯ ಮುಖಂಡರು ,ಅಧಿಕಾರಿಗಳು ಕಾನೂನು ರೀತಿ ಇತ್ಯರ್ಥ ಮಾಡುತ್ತಾರೆ .ಇದರಲ್ಲಿ ಶಿವಸೇನೆ ಮದ್ಯ ಪ್ರವೇಶಿದರೆ ಕರವೇ ಕಾರ್ಯಕರ್ತರು ಸುಮ್ಮನೆ ಕೂಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು .

ಕರವೇ ಹುಕ್ಕೇರಿ ತಾಲೂಕು ಅದ್ಯಕ್ಷ ಪ್ರಮೋದ್ ಹೊಸಮನಿ ,ಮುಖಂಡರಾದ ಮಹೇಶ ಹಟ್ಟಿಹೋಳಿ,ಗಣೇಶ ರೋಖಡೆ ,ವಿನಯ ಪಾಟೀಲ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು .

loading...