ಮಣಗುತ್ತಿ ಶಿವಾಜಿ ಪ್ರತಿಮೆ ವಿವಾದ :ಮಿರಜ್ ವ್ಯಕ್ತಿಯ ಮೇಲೆ ಪ್ರಕರಣ ದಾಖಲು

0
78

ಮಣಗುತ್ತಿ ಶಿವಾಜಿ ಪ್ರತಿಮೆ ವಿವಾದ :ಮಿರಜ್ ವ್ಯಕ್ತಿಯ ಮೇಲೆ ಪ್ರಕರಣ ದಾಖಲು

ಕನ್ನಡಮ್ಮ ಸುದ್ದಿ -ಹುಕ್ಕೇರಿ :ತಾಲೂಕಿನ ಮಣಗುತ್ತಿಯಲ್ಲಿ ಕೆಲವು ಕಿಡಿಗೇಡಿಗಳು ಅನಧಿಕೃತವಾಗಿ ಶಿವಾಜಿ ಪುತ್ಥಳಿ ಸ್ಥಾಪಿಸಿ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಫೋಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಪ್ರಕಟಿಸಿದ್ದ ಮೀರಜ್ ವ್ಯಕ್ತಿ (ಹಾಲಿ ಪುಣೆ ನಿವಾಸಿ) ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ಮಣಗುತ್ತಿಯಲ್ಲಿ ಶಿವಾಜಿ ಮೂರ್ತಿ ಸ್ಥಳಾಂತರದ ಬಗ್ಗೆ ಗಲಾಟೆ ನಡೆದಿತ್ತು .
ಶಿವಾಜಿ ಪ್ರತಿಮೆ ವಿಷಯದ ಕುರಿತು ಮಿರಜ್ ದಿನೇಶ ಕದಮ್ ಎನ್ನುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಬೇರೆ ಬೇರೆ ಜಾತಿ, ಜನಾಂಗ, ಸಮುದಯಗಳ ಮಧ್ಯೆ ವೈಮನಸ್ಸು ಹುಟ್ಟಿಸುವಂತಹ ಬರಹ ಪ್ರಕಟಿಸಿ, ಶಾಂತ ಭಂಗ ಉಂಟುಮಾಡುವ ಸಂಭವ ಉಂಟಾಗಿದ್ದರಿಂದ ಈ ಪ್ರಕರಣ ದಾಖಲಿಸಲಾಗಿದೆ.

ಶಿವಾಜಿ ಪ್ರತಿಮೆ ಸ್ಥಳಾಂತರ ಬಗ್ಗೆ ನಡೆದ ವಿವಾದದ ಬಗ್ಗೆ ಸ್ಥಳಿಯರು ಬಗೆ ಹರಿಸಿಕೊಳ್ಳುವ ನಿರ್ಧಾನ ಮಾಡಿದ್ದಾರೆ , ಆದರೆ ಇದನ್ನೆ ಇಟ್ಟುಕೊಂಡು ಕಿಡಿಗೇಡಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಮದ್ಯ ಬೆಂಕಿ ಹಚ್ವುವ ಕಾರ್ಯ ಮಾಡುತ್ತಿದ್ದು ,ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಕದಡುವ ಪೋಸ್ಟ್ ಮಾಡಿದ್ದ ದಿನೇಶ ಕದಮ್ ಎಂಬುವರ ಮೇಲೆ ಯಮಕನಮರಡಿ ಪೋಲಿಸ ಪ್ರಕರಣ ದಾಖಲಿಸಿದ್ದಾರೆ .

loading...