ಮತದಾರರ ಜಾಗೃತಿಗೆ ಛಾಯಾಚಿತ್ರ ಪ್ರದರ್ಶನ

0
3

ಗದಗ: ಮತದಾರರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಚುನವಣಾ ಆಯೋಗದ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿದ ಛಾಯಾಚಿತ್ರ ಪ್ರದರ್ಶನ ಸಹಕಾರಿಯಾಗಲಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
ಗದುಗಿನ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಮತದಾರ ಜಾಗೃತಿಗಾಗಿ ಜರುಗಿದ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಮತದಾನ ಪ್ರಕ್ರಿಯೆಯಯಲ್ಲಿ ಎಲ್ಲ ಅರ್ಹ ಮತದಾರರೂ ತಪ್ಪದೇ ಪಾಲ್ಗೊಳ್ಳುಬೇಕು. ಯಾವುದೇ ಅಮಿಷಕ್ಕೊಳಗಾಗದೇ ನೈತಿಕವಾಗಿ ಮತದಾನ ಮಾಡುವುದು ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಅವಶ್ಯಕವಾಗಿದೆ. ಮತದಾರ ಜಾಗೃತಿಯ ಛಾಯಾಚಿತ್ರ ಪ್ರದರ್ಶನದ ಸದುಪಯೋಗವನ್ನು ಪ್ರಯಾಣಿಕರೂ ಸೇರಿದಂತೆ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಅವರು ವಾರ್ತಾ ಇಲಾಖೆ ಕೇಂದ್ರ ಕಚೇರಿಯು ಪ್ರಕಟಿಸಿದ ರೇಖೆಗಳಲ್ಲಿ ಚುನಾವಣೆ ೨೦೧೯ ಚಿತ್ರಾವಳಿ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ವಾರ್ತಾ ಇಲಾಖೆ ಕೇಂದ್ರ ಕಚೇರಿಯು ಎಲ್ಲ ಜಿಲ್ಲೆಗಳಲ್ಲಿ ಮತದಾರರ ಜಾಗೃತಿಗಾಗಿ ಮಾಹಿತಿಯ ಹಾಗೂ ಪ್ರೆÃರಣಾತ್ಮಕ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿರುವುದು ಶ್ಲಾಘನೀಯ ಎಂದರು. ಗದಗ ಹೊಸ ಬಸ್ ನಿಲ್ದಾಣದಲ್ಲಿ ೧೪ ರಿಂದ ೧೬ ರವರೆಗೆ ಪ್ರದರ್ಶಿತವಾಗುವ ಮತದಾರರ ಜಾಗೃತಿಯ ಈ ಕಾರ್ಯಕ್ರಮವನ್ನು ವಿವಿಧ ಜಿಲ್ಲೆಗಳ ಮತದಾರರೂ ಹಾಗೂ ಪ್ರಯಾಣಿಕರೂ ಸೇರಿದಂತೆ ಜಿಲ್ಲೆಯ ಸಾರ್ವಜನಿಕರೂ ಇದನ್ನು ವೀಕ್ಷಿಸಬಹುದಾಗಿದೆ.
ಮತದಾರರ ಜಾಗೃತಿಯಲ್ಲಿ ಗದಗ ಜಿಲ್ಲಾ ಸ್ವಿÃಪ್ ಸಮಿತಿಯು ವಿವಿಧ ರಚನಾತ್ಮಕ ಹಾಗೂ ಜನರನ್ನು ಪ್ರೆÃರೇಪಿಸುವ ಜಾಗೃತಿ ಕರ‍್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಪ್ರಿಲ್ ೨೩ ರಂದು ನಡೆಯುವ ಲೋಕಸಭೇಯ ಮತದಾನ ದಿನದಂದು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕೆಂದು ಚವ್ಹಾನ ಮನವಿ ಮಾಡಿದರು. ಪ್ರತಿ ಮತವೂ ಎಷ್ಟು ಅಮೂಲ್ಯ ಎಂಬುದರ ಜೊತೆಗೆ ಯುವ ಸಮೂಹ, ಹಿರಿಯರು, ವೃದ್ಧರು, ಮಹಿಳೆಯರು, ವಿಶೇಷ ಚೇತನರು ಒಳಗೊಂಡಂತೆ ಎಲ್ಲ ವರ್ಗಗಳಿಗೂ ಆತ್ಮವಿಶ್ವಾಸ ತುಂಬುವ ಸಂದೇಶಗಳು ಹಾಗೂ ಚುನಾವಣಾ ಅಕ್ರಮಗಳ ತಡೆಗೆ ಸಾರ್ವಜನಿಕರ ಸಹಭಾಗಿತ್ವದ ಮಹತ್ವ ಸಾರವ ಹಲವು ಸಂದೇಶಗಳು ಸುಗಮ ಹಾಗೂ ನೈತಿಕ ಮತದಾನಕ್ಕೆ ಸ್ಪೂರ್ತಿ ತುಂಬುವ ಸಂದೇಶಗಳನ್ನು ಸಾರುವ ಫಲಕಗಳನ್ನು ಈ ಛಾಯಾಚಿತ್ರ ಪ್ರದರ್ಶನ ಒಳಗೊಂಡಿದೆ.
ಛಾಯಾಚಿತ್ರ ಪ್ರದರ್ಶನದಲ್ಲಿ ಗದಗ ತಹಶೀಲ್ದಾರ ಶ್ರಿÃನಿವಾಸ ಮೂರ್ತಿ ಕುಲಕರ್ಣಿ, ವಾ.ಕ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ. ಹಿರೇಮಠ, ನಿಲ್ದಾಣ ಅಧಿಕಾರಿ ಪಿ.ಎಂ. ತೇರದಾಳ ಇದ್ದರು.

loading...