ಮದುವೆ ಬೇಡ, ಲಿವ್ ಇನ್ ಓಕೆ ಎಂದ ಕೋರ್ಟ್…!

0
36

ಗುಜರಾತಿನ ಹೈಕೋರ್ಟ್ 20 ವರ್ಷದ ಯುವತಿಗೆ ಆಕೆ ಬಾಯ್ ಫ್ರೆಂಡ್ ಜೊತೆ ಲಿವ್ ಇನ್ ನಲ್ಲಿರಲು ಅನುಮತಿ ನೀಡಿದೆ. ಯುವತಿ ಪ್ರೇಮಿಗೆ ಇನ್ನೂ 19 ವರ್ಷವಾಗಿದ್ದು, ಮದುವೆ ಸಾಧ್ಯವಿಲ್ಲ. ಹಾಗಾಗಿ ಲಿವ್ ಇನ್ ನಲ್ಲಿರಬಹುದೆಂದು ಕೋರ್ಟ್ ಹೇಳಿದೆ.

20 ವರ್ಷದ ಯುವತಿ 19 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಾಳೆ. ಜಾತಿ ಬೇರೆಯಾದ ಕಾರಣ ಯುವತಿ ಮನೆಯವರು ಇದಕ್ಕೆ ಒಪ್ಪುತ್ತಿಲ್ಲ. ಜೋಡಿಯ ಓಡಿ ಹೋಗುವ ಪ್ರಯತ್ನವೂ ವಿಫಲವಾಗಿದೆ. ಇದಾದ ನಂತ್ರ ಯುವಕ ಕೋರ್ಟ್ ಮೊರೆ ಹೋಗಿದ್ದ. ಯುವತಿಯನ್ನು ಮನೆಯಲ್ಲಿ ಬಂಧಿಸಿಡಲಾಗಿದೆ. ಯುವತಿ ಜೊತೆ ಲಿವ್ ಇನ್ ನಲ್ಲಿ ವಾಸವಾಗಿರಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದ.

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಯುವತಿಯನ್ನು ತನ್ನ ಮುಂದೆ ಹಾಜರುಪಡಿಸುವಂತೆ ಸೂಚನೆ ನೀಡಿತ್ತು. ಯುವತಿ ತಾಯಿ ಮನೆಗೆ ಹೋಗಲು ನಿರಾಕರಿಸಿದ್ದಾಳೆ. ಯುವತಿ ವಯಸ್ಕಳಾಗಿರುವ ಕಾರಣ ಆಕೆ ಬಯಸಿದಲ್ಲಿ ವಾಸವಾಗಬಹುದು. ಆದ್ರೆ 19 ವರ್ಷದ ಯುವಕನನ್ನು ಮದುವೆಯಾಗಲು ಸಾಧ್ಯವಿಲ್ಲವೆಂದು ಕೋರ್ಟ್ ಹೇಳಿದೆ. ಯುವತಿಯನ್ನು ಆಕೆ ಹೇಳಿದ ಜಾಗಕ್ಕೆ ಸುರಕ್ಷಿತವಾಗಿ ತಲುಪಿಸುವ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತಿದೆ.

loading...