ಮನುಷ್ಯ ಉನ್ನತ ಸ್ಥಾನಕ್ಕೆರಲು ಕ್ರಿÃಯಾಶೀಲನಾಗಬೇಕು: ಡಾ. ವಿರೇಂದ್ರ

0
16

ಮನುಷ್ಯ ಉನ್ನತ ಸ್ಥಾನಕ್ಕೆರಲು ಕ್ರಿÃಯಾಶೀಲನಾಗಬೇಕು: ಡಾ. ವಿರೇಂದ್ರ

ಕನ್ನಡಮ್ಮ ಸುದ್ದಿ-ರಾಮದುರ್ಗ: ೭೦ ವರ್ಷಗಳ ಹಿಂದೆ ಬಡತನ ಇತ್ತು ಆದರೆ ಅದು ಈಗ್ ಮಾಯವಾಗಿ ದೇಶದಲ್ಲಿ ಅನೇಕ ಅವಕಾಶಗಳು ಹುಟ್ಟಿಕೊಂಡಿವೆ ಅವುಗಳನ್ನು ನಾವು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ತಲುಬಹುದು. ಸೋಮಾರಿಗಳಾಗದೆ ಕ್ರಿÃಯಾಶೀಲರಾಗಿ ಕೆಲಸ ಮಾಡುವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಶ್ರಿÃ ಕ್ಷೆÃತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಹೇಳಿದರು.
ಸ್ಥಳೀಯ ಸ್ಟೆÃಟ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ರಾಮದುರ್ಗ ತಾಲೂಕಾ ಮಟ್ಟದ ಸ್ವಸಹಾಯ ಸಂಘಗಳ ಪ್ರಗತಿ ಚಿಂತನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅವಕಾಶಗಳನ್ನು ನಿರ್ಮಾಣ ಮಾಡುವುದೇ ಪ್ರಗತಿಯ ಮೂಲವಾಗಿದೆ. ಅವಕಾಶಗಳು ಒದಗಿ ಬಂದಾಗ ಬಳಸಿಕೊಂಡು ಸದುಪಯೋಗ ಮಾಡಿಕೊಂಡು ಪ್ರಗತಿ ಪಥದತ್ತ ನಡೆಯುವುದು ಸಾಹಸಿಗಳ, ಸಾಧಕರು ಮಾಡುತ್ತಾರೆ ಇವರಿಗೆ ಬುದ್ಧಿವಂತರು ಎಂದು ಸಮಾಜ ಹೇಳಿದರೆ ಅವಕಾಶಗಳು ನಮ್ಮ ಬಳಿ ಬಂದರು ಅದರ ಉಪಯೋಗ ಮಾಡಿಕೊಳ್ಳದಿರುವ ವ್ಯಕ್ತಿಗಳಿಗೆ ಸೋಮಾರಿಗಳು ಎಂದು ಹೇಳಲಾಗುತ್ತದೆ ಎಂದರು.
ಸರ್ಕಾರಗಳು ರೈತರ ಮತ್ತು ಜನಸಾಮಾನ್ಯರು ಅಭಿವೃದ್ಧಿಯತ್ತ ಬರಬೇಕಾದರೆ ನೀರಾವರಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿಕೊಡಬೇಕು ಅಂದಾಗ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದರಲ್ಲದೆ ರೈತರು ಸಾಧಕರು ಶ್ರಮಜೀವಿಗಳಾಗಿದ್ದಾರೆ ಭೂತಾಯಿಯನ್ನು ನಂಬಿ ಜೀವನ ನಡೆಸುತ್ತಾರೆ ಅವರಿಗೆ ಮೂಲಭೂತ ಸೌಲಭ್ಯ ಒದಗಿಸಲು ಮತ್ತು ಅಧುನಿಕ ತಂತ್ರಜ್ಞಾನದ ಮಾಹಿತಿ ನೀಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿದ್ಧವಿದೆ ಮತ್‌ತು ರೈತರು ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಸ್ವಸಹಾಯ ಸಂಘಗಳ ಸದಸ್ಯರಿಗೆ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಡಿ ವಿವಿಧ ಸಹಾಯಧನದ ಪರಿಕರಗಳನ್ನು ವಿತರಿಸಿದ ಮಾಜಿ ಶಾಸಕ ಅಶೋಕ ಪಟ್ಟಣ ಮಾತನಾಡಿ ಶ್ರಿÃ ಕ್ಷೆÃತ್ರ ಗ್ರಾಮಾಭಿವೃದ್ಧಿ ಯೋಜನೆ ನಡೆಸುವ ಮಧ್ಯವ್ಯರ್ಜನ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಜನರ ಅಭಿವೃದ್ಧಿಗೆ ಪೂರಕವಾಗಿ ಶ್ಲಾಘನೀಯವಾಗಿವೆ ಕ್ಷೆÃತ್ರದ ಯೋಜನೆಗೆ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಎಸ್. ಯಾದವಾಡ ಮಾತನಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಶ್ರಿÃ ಕ್ಷೆÃತ್ರದ ಗ್ರಾಮಾಭಿವೃಧ್ಧಿ ಯೋಜನೆಯ ಎಲ್ಲ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಬಿವ್ಹಿವ್ಹಿ ಸಂಘದ ಅಶೋಕ ಸಜ್ಜನ, ಕಾರ್ಪೋರೇಶನ್ ಬ್ಯಾಂಕ ಹಿರಿಯ ಪ್ರಬಂಧಕ ನಾಗರಾಜ, ಎಸ್ಡಿಎಂ ಕಾಲೇಜಿನ ಅಮೀನ, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ವಿಠ್ಠಲ ಪಿಸೆ, ಯೋಜನಾಧಿಕಾರಿ ಸತೀಶ ಎಂ.ಅಶೋಕ ಕುಲಗೋಡ. ಸೇರಿದಂತೆ ಹಲವರಿದ್ದರು. ಜಿಲ್ಲಾ ನಿರ್ದೇಶಕ ಸುರೇಶ ಎಂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ಪ್ರೆಸ್‌ಕ್ಲಬ್ ಸಮೀಪದ ಹುತಾತ್ಮ ವೃತ್‌ದಿಂದ ವೇದಿಕೆ ವರೆಗೆ ವಿವಿಧ ವಾದ್ಯಮೇಳ ಮತ್ತು ಕುಂಬಮೇಳದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

loading...