ಮನುಷ್ಯ ಪರಿಸರಕ್ಕೆ ಮಾಡುತ್ತಿರುವ ಹಾನಿ ಮುಂದಿನ ಪೀಳಿಗೆಗೆ ಮಾರಕ: ಬೊಮ್ಮಾಯಿ

0
11

ಕನ್ನಡಮ್ಮ ಸುದ್ದಿ-ಶಿಗ್ಗಾವಿ: ಮನುಷ್ಯನ ಆಸೆಗೆ ಮಿತಿಯಿಲ್ಲದೆ ಎಲ್ಲ ಜೀವಿಗಳಿಗೆ ಉಸಿರಾಗಿರುವ ಗಿಡಮರಗಳನ್ನು ಕಡಿದು ನಾವು ಪರಿಸರಕ್ಕೆ ಮಾಡುತ್ತಿರುವ ಹಾನಿ ನಮ್ಮ ಮುಂದಿನ ಪೀಳಿಗೆಗೆ ಮಾರಕವಾಗಲಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ವಿರಕ್ತ ಮಠದ ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ ಮಠದ ವತಿಯಿಂದ ತಾಲೂಕಿನ ಚಾಕಾಪುರ ಗ್ರಾಮದಲ್ಲಿ ಪರಿಸರ ಸಂರಕ್ಷಣೆ ಅಭಿಯಾನದ 2ನೇ ವರ್ಷದ ಸಸ್ಯ ಶ್ರಾವಣ ಕಾರ್ಯಕ್ರÀಮದಲ್ಲಿ ಸಸಿನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ನಾಶದಿಂದ ಮಣ್ಣು ಸಡಿಲಗೊಂಡು ಹೆಚ್ಚು ಮಳೆಯಾದಾಗ ಬೆಟ್ಟಗುಡ್ಡಗಳ ಮಣ್ಣು ಕುಸಿದು ಬಂಡೆಗಳು ಸಡಿಲಗೊಂಡು ಅನಾಹುತಗಳಿಗೆ ದಾರಿಮಾಡಿದಂತಾಗುತ್ತದೆ. ಹಿಂದಿನ ನಮ್ಮ ಹಿರಿಯರು ಕೆರೆಕಟ್ಟೆ ಭಾವಿ ಮರಗಿಡಗಳನ್ನು ಉಳಿಸಿ ಹೋಗಿರುವುದಕ್ಕೆ ನಾವು ಇಂದು ಚೆನ್ನಾಗಿ ಬದುಕುತ್ತಿದ್ದೇವೆ. ಮುಂದೆ ನಮ್ಮ ಪೀಳಿಗೆಗೆ ನಾವು ಜಾಗೃತರಾಗಿ ಗಿಡ, ಮರ ಹಾಗೂ ಶುದ್ಧ ಪರಿಸರ ಉಲಿಸಬೇಕಿದೆ ಎಂದರು.ಮಹಾಂತರುದ್ರ ಸ್ವಾಮೀಜಿ ಆಶಿರ್ವಚನ ನೀಡಿ, ಭೂಮಿಯ ಮೆಲಿನ ಯಾವ ಜೀವಿಯಿಂದಲೂ ಪರಿಸರಕ್ಕೆ ಹಾನಿ ಇಲ್ಲ ಆದರೆ ಮನುಷ್ಯನ ದುರಾಸೆಗೆ ಪರಿಸರ ಹಾಳಾಗಿ ಪ್ರಕೃತಿ ವಿಕೋಪಗಳಿಗೆ ನಾಂದಿಯಾಗುತ್ತದೆ. ಇದನ್ನು ತಡೆಯಲು ಶಿಗ್ಗಾಂವ ವಿರಕ್ತಮಠದ ಶ್ರೀಗಳು ಶ್ರಾವಣ ಮಾಸದಲ್ಲಿ ಗ್ರಾಮಗಳಿಗೆ ಆಗಮಿಸಿ ಮನೆಮನೆಗೆ ತೆರಳಿ ಸಸಿಗಳನ್ನು ನಿಡಿ ಪರಿಸರ ಜಾಗೃತಿ ಮೂಡಿಸುತ್ತಿರುವದು ತಾಲೂಕಿನಲ್ಲಿ ಶ್ರಾವಣ ಮಾಸಕ್ಕೆ ಹೊಸ ಮೆರಗು ನೀಡಿದೆ ಎಂದರು.
ಎಸ್.ಜಿ.ಪೂಜಾರ ಮಾತನಾಡಿ, ವಿರಕ್ತ ಮಠದ ಸಂಗನಬಸವ ಮಹಾಸ್ವಾಮಿಗಳು ಮಾಡುತ್ತಿರುವ ಪರಿಸರ ಜಾಗೃತಿಯ 2 ನೇ ವರ್ಷದ ಸಸ್ಯ ಶ್ರಾವಣ ಕಾರ್ಯಕ್ರಮ ವಿನೂತನವಾದ ಕಾರ್ಯಕ್ರಮವಾಗಿದೆ ಎಂದ ಅವರು ಗ್ರಾಮಸ್ತರಿಗೆ ಕೃಷಿ ಅರಣ್ಯಿಕರಣ ರಿಯಾತಿದರದಲ್ಲಿ ಸಸಿ ನೀಡುವದು ಹಾಗು ಪ್ರೋತ್ಸಾಹದನ ನಿಡುವ ಕುರಿತು ವಿವರವಾದ ಸಲಹೆ ನೀಡಿದರು. ವಿರಕ್ತಮಠದ ಸಂಗನಬಸವ ಶ್ರಿಗಳು ಹಾಗೂ ಮಣಕಟ್ಟಿ ವಿರಕ್ತಮಠದ ವಿಶ್ವಾರಾದ್ಯ ಸ್ವಾಮೀಜಿ ಸಾನಿದ್ಯವಹಿಸಿ ಆಶೀರ್ವಚನ ನೀಡಿದರು. ಕೃಷಿ ಸಂಶೋಧಕ ಎಸ್.ಎಸ್.ದೇಸಾಯಿ ಪರಿಸರ ಜಾಗೃತಿ ಕುರಿತು ಉಪನ್ಯಾಸ ನೀಡಿದರು.
ತಿಪ್ಪಣ್ನ ಸಾತಣ್ಣವರ, ಚಂದ್ರಶೇಖರ, ವಿಶ್ವನಾಥ ಹರವಿ, ಯಲ್ಲಪ್ಪ ನರಗುಂದ, ದೇವಣ್ನ ಚಾಕಲಬ್ಬಿ, ಸಂತೋಷಗೌಡ ಪಾಟೀಲ ಹಾಗೂ ಪದಾಧಿಕಾರಿಗಳು, ಆರ್.ಎಸ್.ಪಾಟೀಲ, ಶಿವನಗೌಡ್ರ ಪಾಟೀಲ, ಯಲ್ಲಪ್ಪ ಬಗಾಡೆ, ವಿಠ್ಠಲ ಮೋತೆನವರ, ಗುತ್ತಿಗೆದಾರ ಎಮ್.ಎಸ್.ಪಾಟೀಲ, ಎಮ್.ಬಿ.ಮೇಟಿ, ಮಲ್ಲೆಶಪ್ಪ ಬಾಲೆಹೊಸೂರ, ರಾಮಣ್ಣ ಹೈಬತ್ತಿ, ವಿರುಪಾಕ್ಷಪ್ಪ ಮೇಟಿ, ವಿರುಪಾಕ್ಷಪ್ಪ ಹೈಬತ್ತಿ, ಅರ್ಜುನ ಹರಿಜನ, ಬಂಕಣ್ಣಾ ಬಡಿಗೇರ ಇದ್ದರು. ಭೂಮಿಯಮೇಲೆ ಮಳೆಯ ಪ್ರಮಾಣ ಕಡಿಮೆಯಾಗಿಲ್ಲ ಪರಿಸರ ನಾಶದಿಂದ ಮಳೆಯ ಹಂಚಿಕೆಯಲ್ಲಿ ವ್ಯತ್ಯಾಸವಾಗಿ ಅತಿವೃಷ್ಠಿ-ಅನಾವೃಷ್ಠಿ ಹಾಗೂ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ.
ಕೃಷಿ ಸಂಶೋಧಕ ಎಸ್.ಎಸ್.ದೇಸಾಯಿ

loading...